»   » 'ಮಾಸ್ಟರ್ ಪೀಸ್' ಬಿಡುಗಡೆಗೆ ಮುನ್ನ ಏನಿದು ಅಪಸ್ವರ.?

'ಮಾಸ್ಟರ್ ಪೀಸ್' ಬಿಡುಗಡೆಗೆ ಮುನ್ನ ಏನಿದು ಅಪಸ್ವರ.?

Posted by:
Subscribe to Filmibeat Kannada

ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಸಿನಿಮಾ ಡಿಸೆಂಬರ್ 24 ರಂದು ಸಂತೋಷ್ ಥಿಯೇಟರ್ ಸೇರಿದಂತೆ ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆಗೆ ಅಪ್ಪಳಿಸಲು ತಯಾರಾಗಿದ್ದು, ಸುಮಾರು 300 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ.['ಮಾಸ್ಟರ್ ಪೀಸ್' ಸಿನಿಮಾ ಗೆದ್ದೆ ಗೆಲ್ಲುತ್ತೆ', ಶಾನ್ವಿ ಉವಾಚ]


ಆದರೆ ಇದೀಗ 'ಮಾಸ್ಟರ್ ಪೀಸ್' ಚಿತ್ರತಂಡಕ್ಕೆ ಎದುರಾಗಿರುವ ಹೊಸ ಸಮಸ್ಯೆ ಏನಪ್ಪಾ ಅಂದ್ರೆ, ಯಶ್ ಅವರ ಸಿನಿಮಾ ಬಿಡುಗಡೆಗೆ ಇನ್ನು ಎರಡು ಇದೆ ಅನ್ನುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಲ್ಲಿ ಅಪಸ್ವರ ಕೇಳಿಬರುತ್ತಿದೆ.['ಕೇಡಿ ನಂಬರ್-1' ಯಶ್ 'ಮಾಸ್ಟರ್ ಪೀಸ್' ಟ್ರೈಲರ್ ಬೊಂಬಾಟ್!]


ಅಂದಹಾಗೆ ಮೆಜೆಸ್ಟಿಕ್ ಬಳಿ ಇರುವ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ 'ಮಾಸ್ಟರ್ ಪೀಸ್' ತೆರೆ ಕಾಣಲಿದೆ. ಆದರೆ ಕಳೆದ ವಾರ ಫೈರಿಂಗ್ ಸ್ಟಾರ್ ವೆಂಕಟ್ ಅವರ 'ಹುಚ್ಚ ವೆಂಕಟ್' ಸಿನಿಮಾ ಇದೇ ಚಿತ್ರಮಂದಿರದಲ್ಲಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕೂಡ ಕಾಣುತ್ತಿದೆ ಅನ್ನೋದು ಮತ್ತೊಂದು ವಿಚಾರ.


ಆದರೆ ಇದೀಗ ಚಿತ್ರ ಬಿಡುಗಡೆಗೆ ಮೂರು ದಿನಕ್ಕೆ ಮುಂಚೆಯೇ ಸಂತೋಷ್ ಚಿತ್ರಮಂದಿರದಲ್ಲಿ ಹಾಕಲಾಗಿದ್ದ ಚೇತನ್ ಚಂದ್ರ ಅವರ 'ಜಾತ್ರೆ' ಮತ್ತು 'ಹುಚ್ಚ ವೆಂಕಟ್' ಅವರ ಸಿನಿಮಾದ ಕಟೌಟ್ ಗಳನ್ನು ಕಿತ್ತು ಬಿಸಾಕಿ, ಯಶ್ ಅವರ 'ಮಾಸ್ಟರ್ ಪೀಸ್' ಸಿನಿಮಾದ ಕಟೌಟ್ ಗಳನ್ನು ಹಾಕಲಾಗಿದೆ ಎಂದು ನಟ ಚೇತನ್ ಚಂದ್ರ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.[ಎಕ್ಸ್ ಕ್ಲೂಸಿವ್ ; 'ಮಾಸ್ಟರ್ ಪೀಸ್' ವಿತರಣಾ ಹಕ್ಕು ಅಬ್ಬಬ್ಬಾ! ಅಷ್ಟೊಂದಾ?!]'ಇನ್ನು ಸಿನಿಮಾ ರಿಲೀಸ್ ಆಗಲು ಮೂರು ದಿನ ಇದೆ. ಆವಾಗ್ಲೆ ಕಟೌಟ್ ಗಳನ್ನು ಪೀಸ್ ಪೀಸ್ ಮಾಡಿ ಕಿತ್ತಾಕಿ, 'ಮಾಸ್ಟರ್ ಪೀಸ್' ಕಟೌಟ್ ಹಾಕಿದ್ದಾರೆ. ನಾವ್ಯಾರು ಸಿನಿಮಾ ಮಾಡಬಾರದಾ ಇಲ್ಲಿ? ನಿನ್ನೆ ರಾತ್ರಿ ಹಾಕಿದ್ದಾರೆ. ಇದು ತುಂಬಾ ಕೆಟ್ಟದ್ದು, ಹೊಸ ನಿರ್ಮಾಪಕರ ಪಾಡೇನು?' ಎಂದು 'ಜಾತ್ರೆ' ಚಿತ್ರದ ನಾಯಕ ಚೇತನ್ ಚಂದ್ರ ಅವರು ತಮ್ಮ ಆಕ್ರೋಶವನ್ನು ಫೇಸ್ ಬುಕ್ಕಿನಲ್ಲಿ ವ್ಯಕ್ತಪಡಿಸಿದ್ದಾರೆ.


Time for the power of social media.HelloWho r active?Pls replyChetan chandra hereEnnu muru Dina edeAagle cutout...


Posted by Chethan Chandra onMonday, December 21, 2015

ಒಟ್ನಲ್ಲಿ ಸದ್ಯಕ್ಕೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಲೀಡ್ ನಲ್ಲಿರುವ ನಟ ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಯಾವುದೇ ರೀತಿಯ ಕಂಟಕ ಎದುರಾಗದಿರಲಿ ಎಂದು ಅಭಿಮಾನಿಗಳಾದ ನಾವು ಆಶೀಸೋಣ. ನೀವೇನಂತೀರಾ?.

English summary
Here is an latest controversial issue raised against Yash's upcoming movie Masterpiece. The movie directed by Manju Mandavya is releasing on Dec 24, all over Karnataka.
Please Wait while comments are loading...

Kannada Photos

Go to : More Photos