»   » ಜಾತಿ ವಿಷಬೀಜಕ್ಕೆ ಬಲಿಯಾದನೆ ಉದಯ್ ಕಿರಣ್?

ಜಾತಿ ವಿಷಬೀಜಕ್ಕೆ ಬಲಿಯಾದನೆ ಉದಯ್ ಕಿರಣ್?

Written by: ಅನಂತರಾಮು, ಹೈದರಾಬಾದ್
Subscribe to Filmibeat Kannada

ಟಾಲಿವುಡ್ ಹ್ಯಾಟ್ರಿಕ್ ಹೀರೋ ಉದಯ್ ಕಿರಣ್ (34) ಅವರ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದರಲ್ಲಿ ಕೆಲವು ಕಾಣದ ಕೈಗಳ ಕೈವಾಡ ಇದೆ ಎಂಬ ಮಾತುಗಳು ಟಾಲಿವುಡ್ ವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿವೆ.

ಉದಯ್ ಕಿರಣ್ ಅವರಿಗೆ ಅವಕಾಶಗಳು ಸಿಗದಂತೆ ಟಾಲಿವುಡ್ ಚಿತ್ರರಂಗದ ನಾಲ್ಕು ಕುಟುಂಬಳು ಅಡ್ಡಗಾಲು ಹಾಕುತ್ತಿದ್ದವು. ಉದಯ್ ಎಷ್ಟೇ ಪ್ರಯತ್ನಿಸಿದರೂ ಅವಕಾಶಗಳು ಸಿಗುತ್ತಿರಲಿಲ್ಲ. ಇನ್ನೂ ಉದಯಿಸಬೇಕಾಗಿದ್ದ ನಟ ದುರಂತ ಅಂತ್ಯ ಕಂಡಿದ್ದೇ ಇವರಿಂದ ಎನ್ನಲಾಗುತ್ತಿದೆ.

ಹಾಗಿದ್ದರೆ ಅವರು ಯಾರು? ತೆಲುಗಿನ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ದಾಸರಿ ನಾರಾಯಣರಾವ್ ಹೇಳಿದ್ದು ಉದಯ್ ಸಾವಿನ ಬಗ್ಗೆ ಹೇಳಿದ್ದು ಅನುಮಾನಗಳನ್ನು ಇನ್ನಷ್ಟು ಬಲಪಡಿಸುತ್ತಿದೆ. "ಉದಯ್ ಜೀವನದಲ್ಲಿ ಕೆಲವು ಶಕ್ತಿಗಳು ಆಟವಾಡಿಕೊಂಡವು. ಆ ಕಾರಣದಿಂದಲೇ ಖಿನ್ನತೆಗೆ ಒಳಗಾಗಿ ಆತ್ನಹತ್ಯೆಗೆ ದಾರಿತೆಗೆಯಿತು" ಎಂದಿದ್ದಾರೆ.

ನಟ ಉದಯ್ ಕಿರಣ್ ಸಾವಿಗೆ 'ಬಿಗ್ 4'ಗಳ ಕೈವಾಡ?
  

ನಟ ಉದಯ್ ಕಿರಣ್ ಸಾವಿಗೆ 'ಬಿಗ್ 4'ಗಳ ಕೈವಾಡ?

ಆ 'ಬಿಗ್ 4'ಗಳು ಯಾರೆಂದರೆ ಚಿರಂಜೀವಿ ಕುಟುಂಬ, ದಗ್ಗುಬಾಟಿ ಕುಟುಂಬ, ಎನ್ಟಿಆರ್ ಕುಟುಂಬ ಹಾಗೂ ದಿಲ್ ರಾಜು ಕ್ಯಾಂಪ್ ಎನ್ನಲಾಗಿದೆ. ಈ ಸಂಬಂಧ ಹೈಕೋರ್ಟ್ ವಕೀಲ ಅರುಣ್ ಕುಮಾರ್ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ ಆಯೋಗ ವಿಚಾರಣೆಯನ್ನು ತಿರಸ್ಕರಿಸಿತು.

ಬಿಗ್ 4 ಕುಟುಂಬದ್ದೇ ಕಾರುಬಾರು
  

ಬಿಗ್ 4 ಕುಟುಂಬದ್ದೇ ಕಾರುಬಾರು

ಆಂಧ್ರದಲ್ಲಿ ಒಟ್ಟು 1475 ಚಿತ್ರಮಂದಿರಗಳಿವೆ. ಅವುಗಳಲ್ಲಿ 1,000ದಷ್ಟು ಚಿತ್ರಮಂದಿರಗಳು ಎರಡು ಕುಟುಂಬಗಳ ಕೈಯಲ್ಲಿವೆ. ಈ ಬಿಗ್ 4 ಕುಟುಂಬಗಳೇ ತೆಲುಗು ಚಿತ್ರವನ್ನು ನಡೆಸುವುದು. ಚಿತ್ರಗಳಿಗೆ ಫೈನಾನ್ಸ್ ಕೊಡುವುದು, ನಿರ್ಮಿಸುವುದು ಎಲ್ಲವನ್ನೂ ಇವರೇ ನಿಭಾಯಿಸುತ್ತಾರೆ. ಒಂದು ರೀತಿ ಮಾಫಿಯಾ ರೀತಿಯಲ್ಲಿ ತೆಲುಗು ಚಿತ್ರೋದ್ಯಮದಲ್ಲಿ ಹಿಡಿತ ಸಾಧಿಸಿದ್ದಾರೆ ಎಂಬ ಮಾತುಗಳು ಇವೆ.

ಜಾತಿ ವಿಷಕ್ಕೆ ಬಲಿಯಾದನೆ ಉದಯ್ ಕಿರಣ್?
  

ಜಾತಿ ವಿಷಕ್ಕೆ ಬಲಿಯಾದನೆ ಉದಯ್ ಕಿರಣ್?

ಇನ್ನೊಂದು ಮೂಲದ ಪ್ರಕಾರ ತೆಲುಗು ಬೆಳ್ಳಿತೆರೆಯ ಮೇಲೂ ಜಾತಿ ರಾಜಕಾರಣ ಕಪ್ಪುಬಿಳುಪು ಚಿತ್ರದಂತೆ ನರ್ತಿಸುತ್ತಿದೆ. ಎರಡು ಜಾತಿಗಳೇ ಅಲ್ಲಿ ಪ್ರಾಬಲ್ಯ ಸಾಧಿಸಿರುವುದು. ಬೇರೆ ಜಾತಿಯವರಿಗೆ ನೋ ಎಂಟ್ರಿ ಎಂಬ ಬೋರ್ಡ್ ಇಲ್ಲದಿದ್ದರೂ ಎಲ್ಲವೂ 'ಬಿಗ್ 4' ಗಳ ಕಪಿಮುಷ್ಠಿಯಲ್ಲೇ ನಡೆಯುತ್ತದೆ.

ಇದೆಲ್ಲಾ ಅಂತೆಕಂತೆಗಳ ಮೂಟೆಯಷ್ಟೇ
  

ಇದೆಲ್ಲಾ ಅಂತೆಕಂತೆಗಳ ಮೂಟೆಯಷ್ಟೇ

ಆದರೆ ಇವೆಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕುವವರೂ ಇದ್ದಾರೆ. ಪ್ರತಿಭೆ, ಪ್ರಯತ್ನ ಇದ್ದರೆ ಯಾರು ಬೇಕಾದರೂ ಗೆಲ್ಲಬಹುದು. ಜಾತಿ, ಬಿಗ್ 4 ಗಳ ಕೈವಾಡ ಎಂಬುದೆಲ್ಲಾ ಸುಳ್ಳು ಎಂದು ಕೆಲವರು ಸಾರಾಸಗಟಾಗಿ ತಳ್ಳಿಹಾಕುತ್ತಾರೆ.

ಉದಯ್ ದುಡುಕಿ ನಿರ್ಧಾರ ತೆಗೆದುಕೊಂಡ
  

ಉದಯ್ ದುಡುಕಿ ನಿರ್ಧಾರ ತೆಗೆದುಕೊಂಡ

ಅದು ಏನೇ ಆಗಲಿ ಚಿತ್ರರಂಗದಲ್ಲಿ ಉದಯಿಸಬೇಕಾಗಿದ್ದ ಉದಯ್ ಅಸ್ತಮಿಸಿದ್ದಾನೆ. ಉದಯ್ ದುಡುಕಿ ನಿರ್ಧಾರ ತೆಗೆದುಕೊಂಡರು ಅನ್ನಿಸುತ್ತದೆ. ಚಿತ್ರರಂಗ ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲವೇ? ಎಂಬ ಪ್ರಶ್ನೆಗಳೂ ಕಾಡುತ್ತವೆ. ಯಾವುದೇ ನಟನ ಜೀವನದಲ್ಲಿ ಮುಂದೆ ಈ ರೀತಿ ಆಗದಿರಲಿ ಅಷ್ಟೇ.

English summary
High Court advocate PN Arun Kumar has approached the State Human Rights Commission seeking a probe into Uday Kiran's death, alleging that 'four big Tollywood camps' kept Uday out of work. These four groups are responsible for malpractice in Tollywood.
Please Wait while comments are loading...

Kannada Photos

Go to : More Photos