twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿ ಗಲಭೆ : ಕನ್ನಡ ಸಿನಿ ತಾರೆಯರ 'ಶಾಂತಿ' ಸಂದೇಶ

    By Harshitha
    |

    ಕಾವೇರಿ ನದಿ-ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ರಾಜ್ಯಕ್ಕೆ ಪ್ರತಿ ಬಾರಿ ಅನ್ಯಾಯ ಆಗುತ್ತಿರುವುದನ್ನು ವಿರೋಧಿಸಿ ಕಳೆದ ಒಂದು ವಾರದಿಂದ ರಾಜ್ಯದ ಎಲ್ಲೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು.

    ಆದ್ರೆ, ನಿನ್ನೆ (ಸೆಪ್ಟೆಂಬರ್ 12) ತಮಿಳು ನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಬಿತ್ತರವಾದ ಕೂಡಲೆ ಬೆಂಗಳೂರು, ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿತು. [ಆಯಮ್ಮನ ಹೆದರಿಸುವ ಗಂಡಸು ಕರ್ನಾಟಕದಲ್ಲಿ ಹುಟ್ಟಿಲ್ವಾ?]

    ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ತಮಿಳುನಾಡು ರಿಜಿಸ್ಟ್ರೇಷನ್ ಇರುವ ವಾಹನಗಳಿಗೆ ಬೆಂಕಿ ಇಡಲಾಯಿತು. ಹತ್ತಾರು ಲಾರಿಗಳು ಸುಟ್ಟು ಭಸ್ಮವಾದವು. ಎಲ್ಲೆಡೆ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಆಯ್ತು. [ತಿರುಗಿಯೂ ನೋಡದ ಅಂಬಿ, ಪದ್ಮಾವತಿಯೂ ನಾಪತ್ತೆ!]

    ಬೆಂಗಳೂರಿನಲ್ಲಿ ಸೋಮವಾರ ಆದ ಗಲಭೆ ಕುರಿತು ಕನ್ನಡ ಸಿನಿ ತಾರೆಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆ ಶಾಂತಿ ಕಾಪಾಡಬೇಕು ಅಂತ ಕಿಚ್ಚ ಸುದೀಪ್, ರಮೇಶ್ ಅರವಿಂದ್, ಗಣೇಶ್, ದರ್ಶನ್ ಸೇರಿದಂತೆ ಹಲವು ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ. [ಕಾವೇರಿ ಹೋರಾಟದ ಬಗ್ಗೆ ತುಟ್ಟಿ ಬಿಚ್ಚಿದ 'ಅಣ್ತಮ್ಮ' ಯಶ್]

    ಶಾಂತಿ ಸಂದೇಶ ನೀಡಿರುವ ಸುದೀಪ್

    ಶಾಂತಿ ಸಂದೇಶ ನೀಡಿರುವ ಸುದೀಪ್

    ''ಈಗ ಡ್ಯಾಮೇಜ್ ಆಗುತ್ತಿರುವುದು ನಮ್ಮ ರಾಜ್ಯದ ಶಾಂತಿ. ಹೌದು, ನ್ಯಾಯ ನಮಗೆ ಸಿಗಬೇಕು. ಅದನ್ನ ಪಡೆಯಲು ಖಂಡಿತ ಒಳ್ಳೆಯ ದಾರಿ ಇದೆ. ಶಾಂತಿ ಕಾಪಾಡಿ'' ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

    ಪ್ರಚೋದನೆ ಮಾಡ್ಬೇಡಿ ಪ್ಲೀಸ್...

    ಪ್ರಚೋದನೆ ಮಾಡ್ಬೇಡಿ ಪ್ಲೀಸ್...

    ''ಪರಿಸ್ಥಿತಿ ಕೊಂಚ ಶಾಂತವಾಗಬೇಕು. ದಯವಿಟ್ಟು ಪ್ರಚೋದನಕಾರಿ ಟ್ವೀಟ್ ಮಾಡಬೇಡಿ ಅಂತ ಎಲ್ಲರಲ್ಲೂ ಕೋರಿಕೊಳ್ಳುತ್ತೇನೆ'' - ಕಿಚ್ಚ ಸುದೀಪ್

    ಪ್ರಿಯಾ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ

    ಪ್ರಿಯಾ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ

    ''ಕಾನೂನು ಪ್ರಕಾರವಾಗಿ, ನ್ಯಾಯಕ್ಕಾಗಿ ನಾವು ಸುಪ್ರೀಂ ಕೋರ್ಟ್ ಗೆ ಮೊರೆಹೋದ್ವಿ. ನಮ್ಮ ರೈತರೇ ಸಂಕಷ್ಟದಲ್ಲಿ ಸಿಲುಕಿರುವಾಗ, ತಮಿಳುನಾಡಿಗೆ ನೀರು ಬಿಡುವ ಆತುರ ಬೇಕಿಲ್ಲ. ಪ್ರಧಾನ ಮಂತ್ರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಬೇಕು'' ಅಂತ ಪ್ರಿಯಾ ಸುದೀಪ್ ಟ್ವೀಟ್ ಮಾಡಿದ್ದಾರೆ.

    ರಮೇಶ್ ಅರವಿಂದ್ ರಿಂದ ವಿಡಿಯೋ ಸಂದೇಶ

    ರಮೇಶ್ ಅರವಿಂದ್ ರಿಂದ ವಿಡಿಯೋ ಸಂದೇಶ

    ಒಂದು ಕ್ಷಣದ ಕೋಪ ಹಾಗೂ ಹಿಂಸಾಚಾರದಿಂದ ಏನೂ ಪ್ರಯೋಜನ ಆಗುವುದಿಲ್ಲ ಅಂತ ನಟ, ನಿರ್ದೇಶಕ ರಮೇಶ್ ಅರವಿಂದ್ ನೀಡಿರುವ ವಿಡಿಯೋ ಸಂದೇಶ ಇಲ್ಲಿದೆ ನೋಡಿ....

    ಮನಸ್ಸಿಗೆ ಘಾಸಿ ಆಗಿದೆ ಎಂದ ಗಣೇಶ್

    ಮನಸ್ಸಿಗೆ ಘಾಸಿ ಆಗಿದೆ ಎಂದ ಗಣೇಶ್

    ಹಿಂಸೆಯಿಂದ ಏನೂ ಪರಿಹಾರ ಸಿಗುವುದಿಲ್ಲ. ಈ ಹಿಂಸಾಚಾರದಿಂದ ಮನಸ್ಸಿಗೆ ಘಾಸಿ ಆಗಿದೆ. ಅಂತ ನಟ ಗೋಲ್ಡನ್ ಸ್ಟಾರ್ ಗಣೇಶ್ ನೀಡಿರುವ ವಿಡಿಯೋ ಸಂದೇಶ ಇಲ್ಲಿದೆ ನೋಡಿ....

    ದರ್ಶನ್ ಕೂಡ ಟ್ವೀಟ್ ಮಾಡಿದ್ದಾರೆ

    ದರ್ಶನ್ ಕೂಡ ಟ್ವೀಟ್ ಮಾಡಿದ್ದಾರೆ

    ''ಕನ್ನಡಿಗರು ಶಾಂತಿ ಪ್ರಿಯರು. ಕನ್ನಡಿಗರಿಗೆ ಯಾವುದೇ ತೊಂದರೆ ಆಗ್ಬಾರದು'' ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಟ್ವೀಟ್ ಮಾಡಿದ್ದಾರೆ.

    ಪ್ರಚೋದನೆ ಮಾಡ್ಬೇಡಿ ಎಂದ ಜಗ್ಗೇಶ್

    ಪ್ರಚೋದನೆ ಮಾಡ್ಬೇಡಿ ಎಂದ ಜಗ್ಗೇಶ್

    ಯಾವುದೇ ಕಾರಣಕ್ಕೂ ಪ್ರಚೋದನಕಾರಿ ಟ್ವೀಟ್ ಮಾಡ್ಬೇಡಿ ಅಂತ ಯುವಜನರಲ್ಲಿ ನಟ ಜಗ್ಗೇಶ್ ಮನವಿ ಮಾಡಿದ್ದಾರೆ.

    English summary
    Cauvery Issue : Kannada Actor Kiccha Sudeep, Ramesh Aravind, Golden Star Ganesh have taken Social Media to spread peace in Karnataka. Through Videos and Tweets, Actors have requested Kannadigas to maintain Peace and Harmony.
    Tuesday, September 13, 2016, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X