»   » ಹೈದರಾಬಾದಿನಲ್ಲಿ ಸಿಸಿಎಲ್ ರೋಚಕ ಸೆಮಿಸ್

ಹೈದರಾಬಾದಿನಲ್ಲಿ ಸಿಸಿಎಲ್ ರೋಚಕ ಸೆಮಿಸ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬೆಂಗಳೂರು, ಫೆ.17: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ 2014ರ ಆವೃತ್ತಿಯಲ್ಲಿ ಸೆಮಿಫೈನಲ್ ಹಂತಕ್ಕೂ ಮುನ್ನವೇ ಬಲಿಷ್ಠ ತಂಡಗಳಾದ ಚೆನ್ನೈ ರೈನೋಸ್ ಹಾಗೂ ತೆಲುಗು ವಾರಿಯರ್ಸ್ ತಂಡ ಮುಗ್ಗರಿಸಿವೆ. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತೊಮ್ಮೆ ಉಪಾಂತ್ಯ ಹಂತಕ್ಕೇರಿ ಅಭಿಮಾನಿಗಳಿಗೆ ಕಿಚ್ಚೆಬ್ಬಿಸಿದೆ.

ಕೇರಳ ಸ್ಟ್ರೈಕರ್ಸ್, ಭೋಜಪುರಿ ದಬಾಂಗ್ಸ್ ಮತ್ತು ಮುಂಬೈ ಹೀರೋಸ್ ತಂಡಗಳೂ ನಾಕೌಟ್ ಹಂತ ತಲುಪಿದ್ದು ರೋಚಕ ಹಣಾಹಣಿಯ ನಿರೀಕ್ಷೆಯಿದೆ.

ಸೆಮಿಫೈನಲ್ ಪಂದ್ಯಗಳು: ಫೆಬ್ರವರಿ 22, ಶನಿವಾರದಂದು ಮೊದಲ ಸೆಮಿಫೈನಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ vs ಮುಂಬೈ ಹೀರೋಸ್, ಸಮಯ ಮಧ್ಯಾಹ್ನ 3 ಗಂಟೆ ನಂತರ
* ಫೆ. 22 ರಂದು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ತಂಡ vs ಭೋಜ್ ಪುರಿ ದಬಾಂಗ್ಸ್ ಸಮಯ 7 ಗಂಟೆ ನಂತರ

* ಫೈನಲ್ ಪಂದ್ಯ ಹೈದರಾಬಾದಿನಲ್ಲಿ ಫೆ.23 ರಂದು ಸಂಜೆ 5 ಗಂಟೆ ನಂತರ ಆರಂಭಗೊಳ್ಳಲಿದೆ.

ಲೀಗ್ ಹಂತದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ವಿರುದ್ಧ ತೆಲುಗು ವಾರಿಯರ್ಸ್ ಸೋಲು ಕಂಡ ಮೇಲೆ ಚೆನ್ನೈ ರೈನೋಸ್ ತಂಡ ಸೆಮಿಸ್ ಪ್ರವೇಶಿಸುವ ಆಸೆ ಇಟ್ಟುಕೊಂಡಿತ್ತು. ಆದರೆ, ಭೋಜಪುರಿ ದಬಾಂಗ್ಸ್ ತಂಡದ ವಿರುದ್ಧ ಭರ್ಜರಿ ಗೆಲುವಿನ ಅವಶ್ಯಕತೆ ಇತ್ತು. ಗೆಲುವಿನ ರನ್ ಚೇರ್ ಉತ್ತಮವಾಗಿ ಆರಂಭಿಸಿದ ಚೆನ್ನೈ ತಂಡಕ್ಕೆ ಭೋಜ್ ಪುರಿಯ ಅಯಾಜ್ ಬೌಲಿಂಗ್ ಮುಳುವಾಯಿತು. ಒಂದೇ ಓವರ್ ನಲ್ಲಿ ಅಯಾಜ್ ಹ್ಯಾಟ್ರಿಕ್ ಜತೆಗೆ 4 ವಿಕೆಟ್ ಕಿತ್ತು ಚೆನ್ನೈ ತಂಡವನ್ನು ಮನೆಗೆ ಕಳಿಸಿದರು. ಅಂಕ ಗಳಿಕೆ ಇದ್ದರೂ ತೆಲುಗು ತಂಡ ಫೇಲ್ ಆಗಿದ್ದು ಹೇಗೆ? ಲೀಗ್ ಹಂತದ ಕೊನೆಯಲ್ಲಿ ಅಂಕ ಪಟ್ಟಿ ವಿವರ ಮುಂದೆ ಓದಿ...

ಸಿಸಿಎಲ್ 4: ತೆಲುಗು ತಂಡಕ್ಕೆ ಮುಳುವಾದ  ಸರಾಸರಿ
  

ಸಿಸಿಎಲ್ 4: ತೆಲುಗು ತಂಡಕ್ಕೆ ಮುಳುವಾದ ಸರಾಸರಿ

ಮುಂಬೈ ಹೀರೋಸ್ ಮತ್ತು ತೆಲುಗು ವಾರಿಯರ್ಸ್ ತಂಡಕ್ಕೆ ತಲಾ 4 ಅಂಕ ಗಳಿಸಿ ಸರಿಸಮವಾಗಿದ್ದರೂ ಬಾಲಿವುಡ್ ತಂಡದ ನೆಟ್ ರನ್ ಸರಾಸರಿ ಹೆಚ್ಚಾಗಿದ್ದರಿಂದ ನಾಲ್ಕರ ಹಂತ ಪ್ರವೇಶಿಸಲು ಸಾಧ್ಯವಾಯಿತು.

4 ಲೀಗ್ ಪಂದ್ಯಗಳಲ್ಲಿ 2 ಗೆದ್ದು 2 ಸೋತಿದ್ದ ಎರಡು ತಂಡಗಳು ತಲಾ 4 ಅಂಕಗಳಿಸಿದ್ದವು. ತೆಲುಗು ವಾರಿಯರ್ಸ್ ತಂಡ ರನ್ ಸರಾಸರಿ(0.203) ಮುಂಬೈ ರನ್ ಸರಾಸರಿ (1.433) ನಿರ್ಣಾಯಕವಾಯಿತು

ಕರ್ನಾಟಕ ಬುಲ್ಡೋಜರ್ಸ್ ತಂಡ ಫೇವರೀಟ್
  

ಕರ್ನಾಟಕ ಬುಲ್ಡೋಜರ್ಸ್ ತಂಡ ಫೇವರೀಟ್

ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಫೇವರೀಟ್ ಎನಿಸಿದೆ. ಲೀಗ್ ಹಂತದಲ್ಲಿ 3 ಗೆಲುವು 1 ರೋಚಕ ಟೈ ಪಂದ್ಯದಿಂದ 7 ಅಂಕ 1.805 ರನ್ ಸರಾಸರಿ ಹೊಂದಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮುಂಬೈ ಹೀರೋಸ್ ತಂಡದ ಮೇಲೆ ಈವರೆಗೂ ಭರ್ಜರಿ ಪ್ರದರ್ಶನ ನೀಡಿರುವುದರಿಂದ ಕರ್ನಾಟಕ ತಂಡ ಫೈನಲ್ ಹಂತ ಸುಲಭ ಎನ್ನಲಾಗಿದೆ.

 

ಭೋಜಪುರಿ ದಬ್ಬಾಂಗ್ ಅಚ್ಚರಿ ಎಂಟ್ರಿ
  

ಭೋಜಪುರಿ ದಬ್ಬಾಂಗ್ ಅಚ್ಚರಿ ಎಂಟ್ರಿ

ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಾ ಬಂದಿರುವ ಮನೋಜ್ ತಿವಾರಿ ನೇತೃತ್ವದ ಭೋಜ್ ಪುರಿ ತಂಡ ಲೀಗ್ ಹಂತದಲ್ಲಿ ಕೇರಳ ವಿರುದ್ಧ ಸೋಲು ಕಂಡಿತ್ತು. ಈಗ ಮತ್ತೊಮ್ಮೆ ಕೇರಳ ವಿರುದ್ಧ ಸೆಮಿಫೈನಲ್ ನಲ್ಲಿ ಕಾದಾಡಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಕರ್ನಾಟಕ ತಂಡಕ್ಕಿಂತ ಉತ್ತಮ ರನ್ ಸರಾಸರಿ ಹೊಂದಿದೆ 2.000, ಕರ್ನಾಟಕ (1.805)

ಆಲ್ ರೌಂಡರ್ ಗಳನ್ನು ಹೊಂದಿರುವ ಭೋಜ್ ಪುರಿ ತಂಡ ಮೊದಲ ಬಾರಿಗೆ ಸಿಸಿಎಲ್ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ.

 

ಸಿಸಿಎಲ್ 4: ಕೇರಳ ಉತ್ತಮ ಸಾಧನೆ
  

ಸಿಸಿಎಲ್ 4: ಕೇರಳ ಉತ್ತಮ ಸಾಧನೆ

ಮೋಹನ್ ಲಾಲ್ ಅವರ ಸ್ಪೂರ್ತಿ ಪಡೆದಿರುವ ಕೇರಳ ಸ್ಟ್ರೈಕರ್ಸ್ ತಂಡ ಲೀಗ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ. ಬೆಂಗಾಳ್ ಟೈಗರ್ಸ್ ವಿರುದ್ಧದ ಪಂದ್ಯ ರದ್ದಾಗಿತ್ತು. ಉತ್ತಮ ಬೌಲಿಂಗ್ ಪಡೆ ಜತೆಗೆ ಫೀಲ್ಡಿಂಗ್ ಸುಧಾರಣೆ ಮಾಡಿಕೊಂಡರೆ ಫೈನಲ್ ಹಂತ ತಲುಪುವ ಸಾಧ್ಯತೆ ಇದೆ ಎನ್ನಬಹುದು.

English summary
CCL 2014 league has come to its end with victory to Mumbai Heroes and Karnataka Bulldozers both secured two precious points to get semifinal berth.Chennai Rhinos and Telugu Warriors out of Semi finals. Hyderabad to host Semis and Finals of CCL
Please Wait while comments are loading...

Kannada Photos

Go to : More Photos