twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಷ್ ಗಾಗಿ ಸಿಸಿಎಲ್ 4 ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್

    By ಜೇಮ್ಸ್ ಮಾರ್ಟಿನ್
    |

    'ಎಲ್ಲರಿಗೂ ನಮಸ್ಕಾರ, ಅಂಬರೀಷ್ ಅಣ್ಣ ಅವರ ಆರೋಗ್ಯ ಸುಧಾರಣೆಗೆ ನಾನು ಹಾಗೂ ನಮ್ಮ ತಂಡ ಮತ್ತೊಮ್ಮೆ ಪ್ರಾರ್ಥಿಸುತ್ತೇವೆ' ಎಂದು ಪಂದ್ಯದ ಆರಂಭದಲ್ಲೇ ಹೇಳಿದ್ದ ಕರ್ನಾಟಕ ಬುಲ್ದೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಅವರು ಸಿಸಿಎಲ್ 4 ರ ಅಂತಿಮ ಹಣಾಹಣಿಯಲ್ಲಿ ಕೇರಳ ಸ್ಟ್ರೈಕರ್ಸ್ ತಂಡವನ್ನು 36 ರನ್ ಗಳಿಂದ ಮಣಿಸಿ ಕಪ್ ಎತ್ತಿದ್ದಾರೆ.

    ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಬುಲ್ಡೋಜರ್ಸ್ ತಂಡ ಭಾನುವಾರ ಹೈದರಾಬಾದಿನ ಲಾಲ್ ಬಹದ್ದೂರ್ ಸ್ಟೇಡಿಯಂನಲ್ಲಿ ರನ್ ಹೊಳೆ ಹರಿಸಿತು. ಫೈನಲ್ ನಲ್ಲಿ ಕೇರಳ ತಂಡಕ್ಕೆ ಕಿಚ್ಚ ಅವರ ತಂಡ ರಾಜೀವ್ ಅವರ ಭರ್ಜರಿ ಶತಕದ ಮೂಲಕ 211/2 ರನ್ ಸ್ಕೋರ್ ಮಾಡಿ, ಭರ್ಜರಿ ಟಾರ್ಗೆಟ್ ನೀಡಿತು. ಕೇರಳ ತಂಡ ನಂದಕುಮಾರ್ ಹೋರಾಟದ ನಡೆಯುವೂ ಅಂತಿಮವಾಗಿ 20 ಓವರ್ಸ್ ನಲ್ಲಿ 175/8 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.

    ಭೋಜ್ ಪುರಿ ದಬ್ಬಾಂಗ್ ತಂಡವನ್ನು 127 ಸ್ಕೋರಿಗೆ ನಿಯಂತ್ರಿಸಿದ ಕೇರಳ ಸ್ಟ್ರೈಕರ್ಸ್ ತಂಡ 2 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿ ಫೈನಲ್ ತಲುಪಿದ್ದರೆ, ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಹೀರೋಸ್ ತಂಡವನ್ನು 79 ರನ್ ಗಳಿಂದ ಬಗ್ಗುಬಡಿದ ಕಿಚ್ಚ ಸುದೀಪ್ ತಂಡ ಮತ್ತೊಮ್ಮೆ ಫೈನಲ್ ಹಂತ ತಲುಪಿತ್ತು. ಈ ಪಂದ್ಯದ ನೇರ ಪ್ರಸಾರವನ್ನು ಏಷ್ಯಾನೆಟ್ ಸುವರ್ಣ ಕನ್ನಡ/ಮಲೆಯಾಳಂ ಚಾನೆಲ್, ರಿಶ್ತೆ, ಬಿಗ್ ಮ್ಯಾಜಿಕ್ ಚಾನೆಲ್ ಗಳಲ್ಲಿ ಪ್ರಸಾರವಾಯಿತು.[ಅಂಬರೀಷ್ ಗಾಗಿ ಕಪ್ ಗೆಲ್ಲುತ್ತೇವೆ]

    ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿರುವ ಅಶೋಕ್ ಖೇಣಿ ಒಡೆತನದ ಕಿಚ್ಚ ಸುದೀಪ್ ತಂಡ ಕಳೆದ ಬಾರಿ ಕಪ್ ಎತ್ತಿತ್ತು. ಕೇರಳ ತಂಡಕ್ಕೆ ಇದು ಮೊದಲ ಫೈನಲ್ ಪಂದ್ಯವಾಗಿತ್ತು. ಲೀಗ್ ಹಂತದಲ್ಲಿ ಎರಡು ತಂಡಗಳು ಉತ್ತಮ ಸರಾಸರಿ ಹೊಂದಿದ್ದವು.[ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್]

    CCL 4 Finals Watch Live: Karnataka Bulldozers vs Kerala Strikers


    ಕೇರಳ ಇನ್ನಿಂಗ್ಸ್ :
    ಕೇರಳ ಸ್ಟ್ರೈಕರ್ಸ್ 175/8 ಅಂತಿಮ ಸ್ಕೋರ್
    * ಗೋಪನ್ ವಿಕೆಟ್ ಪಡೆದ ಧ್ರುವ ಶರ್ಮ(169/7)
    * ನಂದಕುಮಾರ್ 78 ರನ್ (47 ಎ, 8X4, 4X6)
    * ನಂದಕುಮಾರ್ ಹೋರಾಟ ಅಂತ್ಯ ಧ್ರುವ ಎಸೆತಕ್ಕೆ ಕ್ಲೀನ್ ಬೋಲ್ಡ್
    * 18 ಓವರ್ ಗಳಲ್ಲಿ ಕೇರಳ ಸ್ಕೋರ್ 164/5
    * ಸಂತೋಷ್(29) ವಿಕೆಟ್ ಪಡೆದ ಜೆ. ಕಾರ್ತಿಕ್
    * ಕೇರಳಕ್ಕೆ ಗೆಲ್ಲಲು 12 ಎಸೆತಗಳಲ್ಲಿ 48 ರನ್ ಬೇಕು
    * ನಂದ ಕುಮಾರ್ ಹಾಗೂ ಸಂತೋಷ್ 64 ಎಸೆತಗಳಲ್ಲಿ 100 ರನ್ ಜೊತೆಯಾಟ
    * ಕೇರಳಕ್ಕೆ ಗೆಲ್ಲಲು 18 ಎಸೆತಗಳಲ್ಲಿ 63 ರನ್ ಬೇಕು
    * ನಂದಕುಮಾರ್ ಹೋರಾಟದ ಆಟ ಆಕರ್ಷಕ 50.
    * 15 ಓವರ್ಸ್ ನಂತರ ಕೇರಳದ ಸ್ಕೋರ್ 115/4

    * 14 ಓವರ್ ಗಳ ನಂತರ ಕೇರಳದ ಸ್ಕೋರ್ 104/4
    * ಕೇರಳ ಇನ್ನಿಂಗ್ಸ್ 50 ರನ್ 6.5 ಓವರ್ಸ್ ; 100 ರನ್ 13.3 ಓವರ್ಸ್
    * ನಂದಕುಮಾರ್, ಸಂತೋಷ್ ಉತ್ತಮ ಜೊತೆಯಾಟ (51 ರನ್ 40 ಎಸೆತ)
    * ನಂದಕುಮಾರ್, ಸಂತೋಷ್ ಉತ್ತಮ ಜೊತೆಯಾಟ (51 ರನ್ 40 ಎಸೆತ)
    * ಅರುಣ್ 5 ರನ್ ಗಳಿಸಿ ರನೌಟ್, ಮಣಿಕುಟ್ಟನ್ ಗಾಯಗೊಂಡು ನಿವೃತ್ತಿ
    * ಮುಂದಿನ ಓವರ್ ನಲ್ಲೇ ಕೊಡಿಯೊರಿ ವಿಕೆಟ್ ಪ್ರದೀಪ್ ಪಾಲು. 10 ರನ್ ಗೆ ಔಟ್
    * ರಾಜೀವ್ ಪಿಳ್ಳೈ 15 ರನ್ ಗಳಿಸಿ ಧ್ರುವ ಬೌಲಿಂಗ್ ನಲ್ಲಿ ಪ್ರದೀಪ್ ಗೆ ಕ್ಯಾಚಿತ್ತು ಔಟ್( ತಂಡದ ಸ್ಕೋರ್ 28)
    * ನಾಯಕ ರಾಜೀವ್ ಪಿಳ್ಳೈ ಹಾಗೂ ಕೊಡಿಯೋಳಿ ಇಬ್ಬರು ಔಟಾದ ಮೇಲೆ ರನ್ ಗತಿ ನಿಧಾನ
    * ಕರ್ನಾಟಕದ ಬೃಹತ್ ಮೊತ್ತ ಬೆನ್ನಟ್ಟಿದ ಕೇರಳ ತಂಡ ಉತ್ತಮ ಆರಂಭಗೊಳಿಸಿತು.


    ಕರ್ನಾಟಕ ಬುಲ್ಡೋಜರ್ಸ್ ಇನ್ನಿಂಗ್ಸ್ :
    ಕರ್ನಾಟಕ ಬುಲ್ಡೋಜರ್ಸ್ 20 ಓವರ್ ಗಳಲ್ಲಿ 211/2
    * ರಾಜೀವ್ ಅಜೇಯ 112 ರನ್ (42 ಎ, 12 ಬೌಂಡರಿ, 7 ಸಿಕ್ಸರ್)
    * ಧ್ರುವ ಶರ್ಮ ಅಜೇಯ 56 ರನ್ (41 ಎಸೆತ, 6 ಬೌಂಡರಿ)
    * ಕರ್ನಾಟಕ 50 ರನ್ 8.1 ಓವರ್ಸ್, 100 ರನ್ 12.2 ಓವರ್ಸ್, 150 ರನ್ 16.2 ಓವರ್ಸ್, 200 ರನ್ 19.4 ಓವರ್ಸ್

    * ರಾಜೀವ್ ಭರ್ಜರಿ 39 ಎಸೆತಗಳಲ್ಲಿ ಭರ್ಜರಿ ಶತಕ
    * 19 ಓವರ್ ಗಳಲ್ಲಿ 190/2, ರಾಜೀವ್ 90 ರನ್
    * 18.1 ಓವರ್ ಗಳಲ್ಲಿ 179/2 ಕರ್ನಾಟಕ ಬುಲ್ಡೋಜರ್ಸ್ ಸ್ಕೋರ್

    * 18 ಓವರ್ ನಲ್ಲಿ ಧ್ರುವ 37 ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ.
    * 17 ಓವರ್ ನಲ್ಲಿ ರಾಜೀವ್ 4,6,6,6,4,1
    * 16 ಒವರ್ ಗಳಲ್ಲಿ 140/2, ರಾಜೀವ್ 23 ಎಸೆತಗಳಲ್ಲಿ 50 ರನ್ ಚೆಚ್ಚಿದ್ದಾರೆ, ಧ್ರುವ 46(35)
    * 15 ಓವರ್ ಗಳಲ್ಲಿ 127/2 ಸ್ಕೋರ್ ರಾಜೀವ್ ಹಾಗೂ ಧ್ರುವ ಉತ್ತಮ ಜೊತೆಯಾಟ
    * 13 ಓವರ್ ಗಳ ನಂತರ 108/2 ಸ್ಕೋರ್, ರಾಜೀವ್ 36(15 ಎಸೆತ)
    * 12 ಓವರ್ ಗಳ ನಂತರ 97 ರನ್ ಸ್ಕೋರ್ ರನ್ ಸರಾಸರಿ 8.08
    * 10 ಓವರ್ ಗಳ ನಂತರ 68/2, ರಾಜೀವ್ ಎರಡು ಭರ್ಜರಿ ಸಿಕ್ಸರ್
    * 9 ಓವರ್ ಗಳ ನಂತರ 53/2, ರಾಹುಲ್ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ಮರಳಿದ್ದಾರೆ.
    * 8 ಓವರ್ ಗಳ ನಂತರ 49/1, ರಾಹುಲ್ ಭರ್ಜರಿ ಸಿಕ್ಸರ್, ಕೇರಳ ಫೀಲ್ಡಿಂಗ್, ಬೌಲಿಂಗ್ ಉತ್ತಮ

    CCL 4 Finals Watch Live: Karnataka Bulldozers vs Kerala Strikers

    * 5 ಓವರ್ ಗಳ ನಂತರ ಕರ್ನಾಟಕ 26/1
    * ತಂಡದ ಸ್ಕೋರ್ 21 ರನ್ ಆಗಿದ್ದಾಗ ಲಾಂಗ್ ಆನ್ ನಲ್ಲಿ ಕ್ಯಾಚಿತ್ತು ಪ್ರದೀಪ್(14 ರನ್) ಔಟ್
    * 3 ಓವರ್ ಗಳಲ್ಲಿ 15 ರನ್ ಮಾತ್ರ ಗಳಿಕೆ. ಫೈನಲ್ ನೋಡಲು ಕೇರಳದ ಸ್ಟಾರ್ ಮೋಹನ್ ಲಾಲ್ ಉಪಸ್ಥಿತಿ
    * ಆರಂಭದಲ್ಲೇ ಪ್ರದೀಪ್ ಬೌಂಡರಿ ನಂತರ ಕ್ಯಾಚ್ ಡ್ರಾಪ್, ಉತ್ತಮ ಫೀಲ್ಡಿಂಗ್
    * ಕರ್ನಾಟಕ ಬುಲ್ಡೋಜರ್ಸ್ ಪರ ಪ್ರದೀಪ್ ಹಾಗೂ ರಾಹುಲ್ ರಿಂದ ಬ್ಯಾಟಿಂಗ್ ಆರಂಭ

    ಯೂಟ್ಯೂಬ್ ನಲ್ಲಿ : ಲೈವ್ ಲಿಂಕ್

    <iframe width="640" height="360" src="//www.youtube.com/embed/s_wWNfKJZiE?feature=player_detailpage" frameborder="0" allowfullscreen></iframe>

    ಲೈವ್ ಅಪ್ಡೇಟ್ ಗಳನ್ನು ಫೇಸ್ ಬುಕ್ ಪುಟ ಹಾಗೂ ಟ್ವಿಟ್ಟರ್ ಪುಟಗಳಿಂದ ಪಡೆಯಬಹುದು.

    English summary
    The Celebrity Cricket League Season 4 (CCL 4), final match : Kichcha Sudeep led Karnataka Bulldozers team beat Kerala Strikers to lift the Cup for the 2nd time in their fourth successive finals. Exciting Final Match, on 23 February at at Lal Bahadur Shastri Stadium in Hyderabad.
    Sunday, February 23, 2014, 22:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X