»   » ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕಿಚ್ಚ ತಂಡದ ಭರದ ಸಿದ್ಧತೆ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕಿಚ್ಚ ತಂಡದ ಭರದ ಸಿದ್ಧತೆ

Posted by:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕಿಟ್ ಲೀಗ್ (ಸಿಸಿಎಲ್) ನಾಲ್ಕನೇ ಆವೃತ್ತಿಗೆ ಭರದ ಸಿದ್ಧತೆಗಳು ಸದ್ದಿಲ್ಲದಂತೆ ನಡೆಯುತ್ತಿವೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ತನ್ನ ತಂಡವನ್ನು ಚುಮುಚುಮು ಕೊರೆಯುವ ಚಳಿಯಲ್ಲೂ ಪ್ರಾಕ್ಟೀಸ್ ಮಾಡಿಸಿ ಬೆವರಿಳಿಸುತಿದ್ದಾರೆ.

ಈ ಹಿಂದಿನ ಮೂರು ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಎಲ್ಲರ ಫೇವರಿಟ್ ಅನ್ನಿಸಿಕೊಂಡಿತ್ತು. ಈ ಬಾರಿಯೂ ಕ್ರಿಕೆಟ್ ಅಭಿಮಾನಿಗಳ ಹಾಗೂ ಸಿನಿಮಾ ಅಭಿಮಾನಿಗಳಿಗೆ ನಿರಾಸೆಯಾಗದಂತೆ ತಮ್ಮ ತಂಡವನ್ನು ತರಬೇತಿಗೊಳಿಸುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಾರೆಗಳು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಬೆವರಿಳಿಸುತ್ತಿದ್ದಾರೆ. [ಫೆಬ್ರವರಿಯಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 4 ಶುರು]

ಮಾಸ್ಟರ್ ಬ್ಲಾಸ್ಟರ್ ಭಾರತರತ್ನ ಸಚಿನ್ ತೆಂಡೂಲ್ಕರ್ ಅವರು ಮುಂಬೈನಲ್ಲಿ ಸಿಸಿಎಲ್ ನಾಲ್ಕನೆ ಆವೃತ್ತಿಗೆ ಚಾಲನೆ ನೀಡಿಯಾಗಿದೆ. ಜನವರಿ 26ರಿಂದ ಪಂದ್ಯಾವಳಿ ಆರಂಭವಾಗಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದೊಂದಿಗೆ ಹೈದರಾಬಾದಿನಲ್ಲಿ ಕಣಕ್ಕಿಳಿಯಲಿದೆ.

ಯಾರ ಜೊತೆ ಕರ್ನಾಟಕ ಬುಲ್ಡೋಜರ್ಸ್ ಸೆಣೆಸಾಟ
  

ಯಾರ ಜೊತೆ ಕರ್ನಾಟಕ ಬುಲ್ಡೋಜರ್ಸ್ ಸೆಣೆಸಾಟ

ಫೆಬ್ರವರಿ 2ರಂದು ಮುಂದಿನ ಸ್ಪರ್ಧಿ ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ತಂಡ ಸೆಣೆಸಲಿದೆ. ಬಳಿಕ ತೆಲುಗು ವಾರಿಯರ್ಸ್ ವಿರುದ್ಧ ತೊಡೆ ತಟ್ಟಲು ಫೆಬ್ರವರಿ 8ರಂದು ಮುಂಬೈಗೆ ಹೊರಡಲಿದೆ. ಕೊನೆಯ ಪಂದ್ಯವನ್ನು ಫೆಬ್ರವರಿ 16ರಂದು ಕೊಚ್ಚಿಯಲ್ಲಿ ವೀರ್ ಮರಾಠಿ ತಂಡದೊಂದಿಗೆ ಆಡಲಿದೆ.

ಫೆಬ್ರವರಿ 23ರಂದು ಫೈನಲ್ ಕಾಳಗ
  

ಫೆಬ್ರವರಿ 23ರಂದು ಫೈನಲ್ ಕಾಳಗ

ಫೆಬ್ರವರಿ 22ರಂದು ಈ ಬಾರಿಯ ಎರಡು ಸೆಮಿ ಫೈನಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಫೆಬ್ರವರಿ 23ರಂದು ಫೈನಲ್ ಕಾಳಗಕ್ಕೆ ಹೈದರಾಬಾದ್ ಅಣಿಗೊಳಿಸಲಾಗುತ್ತದೆ.

ನಾವು ಯಾರಿಗೂ ಕಮ್ಮಿ ಎಂದ ಸಿನಿಮಾ ತಾರೆಗಳು
  

ನಾವು ಯಾರಿಗೂ ಕಮ್ಮಿ ಎಂದ ಸಿನಿಮಾ ತಾರೆಗಳು

ಇದೊಂದು ನಾನ್ ಪ್ರೊಫೆಷನಲ್ ಪುರುಷರ ಕ್ರಿಕೆಟ್ ಮ್ಯಾಚ್ ಅನ್ನಿಸಿಕೊಂಡಿದ್ದರೂ, ನಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ತಾರೆಗಳು ಆಡಿದ್ದಾರೆ. ಪಕ್ಕಾ ಪ್ರೊಫೆಷನಲ್ ಆಟ ಅಲ್ಲದಿದ್ದರೂ ಒಂದು ಮಟ್ಟಕ್ಕೆ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಐಸಿಸಿ ಕ್ರಿಕೆಟ್ ಮ್ಯಾಚ್ ಗೂ ಕೊಂಚ ಹೊಡೆತ
  

ಐಸಿಸಿ ಕ್ರಿಕೆಟ್ ಮ್ಯಾಚ್ ಗೂ ಕೊಂಚ ಹೊಡೆತ

2011ರಲ್ಲಿ ಆರಂಭವಾದ ಸಿಸಿಎಲ್ ಲೀಗ್ ಗಳು ಬರುಬರುತ್ತಾ ಜನಪ್ರಿಯತೆ ಗಳಿಸಿಕೊಂಡವು. ಐಸಿಸಿ ಕ್ರಿಕೆಟ್ ಮ್ಯಾಚ್ ಗಳಿಗೂ ಇದರಿಂದ ಕೊಂಚ ಹೊಡೆತಬಿತ್ತು. ಸಿಸಿಎಲ್ ಮ್ಯಾಚ್ ಗಳಿಗೆ ಮಾಧ್ಯಮಗಳು ಸಾಕಷ್ಟು ಪ್ರಚಾರ ಕೊಡುವ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿತು.

2013ರ ಛಾಂಪಿಯನ್ ಕರ್ನಾಟಕ ಬುಲ್ಡೋಜರ್ಸ್
  

2013ರ ಛಾಂಪಿಯನ್ ಕರ್ನಾಟಕ ಬುಲ್ಡೋಜರ್ಸ್

ಇದುವರೆಗೂ ನಡೆದ ಮೂರು ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್ ಹಂತ ತಲುಪಿರುವುದು ವಿಶೇಷ. 2013ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಮಣ್ಣುಮುಕ್ಕಿಸಿ ಸಿಸಿಎಲ್ ಕಪ್ ತನ್ನದಾಗಿಸಿಕೊಂಡಿದೆ.

ಎಂಟು ತಂಡಗಳ ನಡುವೆ ಕಾದಾಟ
  

ಎಂಟು ತಂಡಗಳ ನಡುವೆ ಕಾದಾಟ

ಕರ್ನಾಟಕ ಬುಲ್ಡೋಜರ್ಸ್ ಸೇರಿದಂತೆ ಸಿಸಿಎಲ್ ನಲ್ಲಿ ಪ್ರಸ್ತುತ ಎಂಟು ತಂಡಗಳಿವೆ. ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಮುಂಬೈ ಹೀರೋಸ್, ಬೆಂಗಾಲ್ ಟೈಗರ್ಸ್, ಭೋಜ್ ಪುರಿ ದಬಾಂಗ್ಸ್, ವೀರ್ ಮರಾಠಿ.

English summary
The fourth season of the Celebrity Cricket League (CCL) season four will start their campaign on January 26, 2014. Defending champions Karnataka Bulldozers will start their campaign on January 26, 2014 against the Bengal Tigers in Hyderabad. Kannada actors Sudeep, Darshan practising in the nets on the morning in Chinnaswamy stadium, Bangalore.
Please Wait while comments are loading...

Kannada Photos

Go to : More Photos