twitter
    For Quick Alerts
    ALLOW NOTIFICATIONS  
    For Daily Alerts

    ರನ್ ರೇಟ್ ನಲ್ಲಿ ಸುದೀಪ್ ತಂಡವೇ ಸದ್ಯಕ್ಕೆ ಕಿಂಗ್

    By Mahesh
    |

    ಸೆಲಿಬ್ರಿಟಿ ಕ್ರಿಕೆಟ್ ಲೀಗ್ ನ ಮೂರನೇ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬದ್ಧ ವೈರಿ ಚೆನ್ನೈ ರೈನೋಸ್ ನಡುವಿನ ಪಂದ್ಯವನ್ನು ಮಳೆರಾಯ ನುಂಗಿ ಹಾಕಿದ್ದಾನೆ. ಶನಿವಾರ(ಫೆ.16) ಹೈದರಾಬಾದಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಸುದೀಪ್ ಪಡೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.

    ಆದರೆ, ಕೇವಲ 6.1 ಓವರ್ ಗಳ ನಂತರ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿಬಿಟ್ಟ. ಆರಂಭಿಕ ಆಟಗಾರ, ನಾಯಕ ಸುದೀಪ್ 12 ರನ್(8 ಎಸೆತ) ಕಳೆದುಕೊಂಡಿದ್ದ ಕರ್ನಾಟಕ ತಂಡ 43 ರನ್ ಗಳಿಸಿತ್ತು. ಪಂದ್ಯ ನಡೆಸಲು ಸಾಧ್ಯವಾಗದ ಕಾರಣ ತಲಾ ಒಂದು ಅಂಕಗಳನ್ನು ಎರಡು ತಂಡಗಳಿಗೆ ಹಂಚಲಾಯಿತು.

    Karnataka Bulldozers vs chennai rhinos

    ಇದಕ್ಕೂ ಮುನ್ನ ಸಿಲಗುರಿಯಲ್ಲಿ ಭಾನುವಾರ (ಫೆ.10) ವೀರ್ ಮರಾಠಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗೆಲ್ಲಲು ಬೇಕಿದ್ದ 141 ರನ್ ಗಳ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಕಿಚ್ಚ ಸುದೀಪ್ ತಂಡ ಅಮೋಘ ಜಯ ದಾಖಲಿಸಿತ್ತು. ವೇಳಾಪಟ್ಟಿ ನೋಡಿ

    ಬಿ ಗುಂಪಿನಲ್ಲಿರುವ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ತೆಲುಗು ವಾರಿಯರ್ಸ್ ವಿರುದ್ಧ ಫೆ.24ರಂದು ಆಡಲಿದೆ. ನಂತರ ಕೊನೆಯ ಲೀಗ್ ಪಂದ್ಯ ಮಾ.2 ರಂದು ಕೇರಳ ಸ್ಟ್ರೈಕರ್ಸ್ ವಿರುದ್ಧ ಸೆಣಸಲಿದೆ.

    ಸದ್ಯಕ್ಕೆ ಸುದೀಪ್ ತಂಡ ಬಿ ಗುಂಪಿನಲ್ಲಿ ಉತ್ತಮ ರನ್ ಸರಾಸರಿ ಹೊಂದಿದೆ. ಆದರೆ, ಎರಡೂ ಗುಂಪುಗಳಲ್ಲಿ ಹೋಲಿಸಿದರೆ ತೆಲುಗು ವಾರಿಯರ್ಸ್ (+3.584) ರನ್ ಸರಾಸರಿ ಉತ್ತಮವಾಗಿದ್ದರೆ, ಎರಡು ಪಂದ್ಯವನ್ನು ಗೆದ್ದಿರುವ ಹೊಸ ತಂಡ ಭೋಜ್ ಪುರಿ ದಬಾಂಗ್ಸ್ ತಂಡ 4 ಅಂಕ ಗಳಿಸಿ ಭರ್ಜರಿ ಆಟ ಪ್ರದರ್ಶಿಸಿದೆ.

    ಕರ್ನಾಟಕ ತಂಡ 2 ಪಂದ್ಯಗಳ ನಂತರ +1.229 ರನ್ ಸರಾಸರಿ ಹೊಂದಿದೆ. ಮೊದಲ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದಿದ್ದು ಸುದೀಪ್ ತಂಡಕ್ಕೆ ಒಳ್ಳೆಯ ಬಲ ನೀಡಲಿದೆ. ಕೇರಳ ತಂಡದ ಮೇಲೆ ಉತ್ತಮ ಸಾಧನೆ ತೋರಿರುವುದರಿಂದ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ನಿರೀಕ್ಷೆಯಿದೆ.

    ಎ ಗುಂಪಿನಲ್ಲಿ: ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಕೇರಳ ಸ್ಟ್ರೈಕರ್ಸ್, ವೀರ್ ಮರಾಠಿ,
    ಬಿ ಗುಂಪಿನಲ್ಲಿ : ಕರ್ನಾಟಕ ಬುಲ್ಡೋಜರ್ಸ್,ಮುಂಬೈ ಹೀರೋಸ್, ಭೋಜ್ ಪುರಿ ದಬಾಂಗ್ಸ್, ಬೆಂಗಾಲ್ ಟೈಗರ್ಸ್

    English summary
    CCL 3 : Karnataka Bulldozers vs Chennai Rhinos match Match on Saturday(Feb.16) has abandon due to rain. Point has divided between two teams. Sudeep team in Group B is having good net run rate after victory against Veer Marathi
    Sunday, February 17, 2013, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X