twitter
    For Quick Alerts
    ALLOW NOTIFICATIONS  
    For Daily Alerts

    2013ರಲ್ಲಿ ನಮ್ಮನ್ನಗಲಿದ ಪ್ರಮುಖ ಸೆಲೆಬ್ರಿಟಿಗಳು

    |

    2013ರಲ್ಲಿ ಸೆಲೆಬ್ರಿಟಿ ಜಗತ್ತಿನ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಕೆಲವರದು ವಯೋ ಸಹಜ ಸಾವಾದರೆ ಕೆಲವರದ್ದು ದುರಂತ ಸಾವು.

    ಸೆಲೆಬ್ರಿಟಿ ಜಗತ್ತಿನಲ್ಲಿರುವವರು ಪ್ರಮುಖವಾಗಿ ಸಿನಿಮಾ ಲೋಕದಲ್ಲಿರುವವರು ಐಷಾರಾಮಿ ಜೀವನ ಸಾಗಿಸುತ್ತಾರೆನ್ನುವುದು ಹಲವರ ಅಭಿಪ್ರಾಯ. ಆದರೆ, ಅವರ ಖಾಸಗಿ ಬದುಕು ಸಿನಿಮಾ ಚಿತ್ರಕಥೆಗಳಿಗಿಂತ ಹೆಚ್ಚಿನ ತಿರುವು ಮತ್ತು ನೋವಿನದಾಗಿರುತ್ತದೆ.

    ಜೀವನದಲ್ಲಿ ನೊಂದಿದ್ದ ಸಿನಿಮಾ ಅಭಿಮಾನಿಗಳಿಗೆ ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕ ರಂಜಿಸುವ ಈ ತಾರೆಯರ ಪರದೆಯ ಹಿಂದಿನ ಕಥೆಯೇ ವಿಭಿನ್ನ/ವಿಚಿತ್ರ/ಅಸ್ಪಷ್ಟ.

    2013ರಲ್ಲಿ ನಿಧನರಾದ ಪ್ರಮುಖ ಸೆಲೆಬ್ರಿಟಿಗಳ ಪಟ್ಟಿ. ಸ್ಲೈಡಿನಲ್ಲಿ..

    ವಿಜಯಸಾರಥಿ

    ವಿಜಯಸಾರಥಿ

    ಹಿರಿಯ ಸಿನಿ ಪತ್ರಕರ್ತ ಮತ್ತು ನಟ, ಆರ್ ಜಿವಿ ಎಂದೇ ಹೆಸರುವಾಸಿಯಾಗಿದ್ದ ರಾಜಪುರ ಗೋಪಾಲರಾವ್ ವಿಜಯಸಾರಥಿ ಅವರು 24.02.2013 ಬೆಳಗ್ಗೆ ಸುಮಾರು 10.40ಕ್ಕೆ ಕೊನೆಯುಸಿರೆಳೆದರು. ಹಲವು ತಿಂಗಳುಗಳಿಂದ ಬಳಲುತ್ತಿದ್ದ ವಿಜಯಸಾರಥಿ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು.

    ಬಾಲನಟ ತೇಜ

    ಬಾಲನಟ ತೇಜ

    ತೆಲುಗು ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದ ಬಾಲ ಕಲಾವಿದ ನಾರ್ಲ ತೇಜ (17) ರಿಷಿಕೇಶದಲ್ಲಿ 14.03.2013ರಂದು ಶವವಾಗಿ ಪತ್ತೆಯಾಗಿದ್ದ. ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ತೇಜ, ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ.

    ಪಿ ಬಿ ಶ್ರೀನಿವಾಸ್

    ಪಿ ಬಿ ಶ್ರೀನಿವಾಸ್

    ಪ್ರತಿವಾದಿ ಭಯಕಂರ ಶ್ರೀನಿವಾಸ್ (ಪಿಬಿಎಸ್) 14.04.2013ರಲ್ಲಿ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಕನ್ನಡ ಚಿತ್ರರಂಗದಲ್ಲಿ ಅಪಾರ ಜನಪ್ರಿಯಗಳಿಸಿರುವ ಪಿಬಿಎಸ್ ಅವರನ್ನು ವರನಟ ಡಾ. ರಾಜಕುಮಾರ್, ಪಿಬಿಎಸ್ ಧ್ವನಿ ನನಗೆ ಆತ್ಮವಿದ್ದಂತೆ ಎಂದಿದ್ದರು. ಕೆಲವು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಪಿ ಬಿ ಶ್ರೀನಿವಾಸ್ ಅವರು ತಮ್ಮ 83ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

    ಟಿ ಎಂ ಸೌಂದರರಾಜನ್

    ಟಿ ಎಂ ಸೌಂದರರಾಜನ್

    ಆರು ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸೌಂದರರಾಜನ್ 25.05.2013ರಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

    ರಿತುಪರ್ಣೋ ಘೋಷ್

    ರಿತುಪರ್ಣೋ ಘೋಷ್

    12 ರಾಷ್ಟ್ರಪ್ರಶಸ್ತಿ ಗೆದ್ದ ಬಂಗಾಳದ ಖ್ಯಾತ ನಿರ್ದೇಶಕ ರಿತುಪರ್ಣೊ ಘೋಷ್ 30.05.2013ರ ಬೆಳಗ್ಗೆ 7.30 ರ ಸುಮಾರಿಗೆ ಕೊನೆಯುಸಿರೆಳೆದರು.

    ಜಿಯಾ ಖಾನ್

    ಜಿಯಾ ಖಾನ್

    ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದ 25 ವರ್ಷದ ನಫೀಸಾ ಅಲಿಯಾಸ್ ಜಿಯಾ ಖಾನ್ 03.06.2013 ರಂದು ಆತ್ಮಹತ್ಯೆಗೆ ಶರಣಾದರು. ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಜಿಯಾ ಖಾನ್ ನೇಣಿಗೆ ಶರಣಾಗಿದ್ದರು.

    ಕುಣಿಗಲ್ ನಾಗಭೂಷಣ್

    ಕುಣಿಗಲ್ ನಾಗಭೂಷಣ್

    ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಕುಣಿಗಲ್ ನಾಗಭೂಷಣ್ 23.06.2013ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಭೂಷಣ್ ಅವರ ಬಲಗಾಲಿಗೆ ಮಧುಮೇಹದಿಂದ ಕತ್ತರಿ ಬಿದ್ದಿತ್ತು. ಹಲವು ಆಂಗಾಂಗ ವೈಫಲ್ಯ, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ನಾಗಭೂಷಣ್ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಹಲವು ದಿನಗಳ ಕಾಲ ನಾಗಭೂಷಣ್ ಅವರು ಕಷ್ಟಪಟ್ಟಿದ್ದರು. (ಸಂಭಾಷಣೆ ಚತುರ ಕುಣಿಗಲ್ ನಾಗಭೂಷಣ್ ಕಣ್ಮರೆ)

    ಉಮಾ ಶಿವಕುಮಾರ್

    ಉಮಾ ಶಿವಕುಮಾರ್

    170ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬಡ್ಡಿ ಬಂಗಾರಮ್ಮ ಖ್ಯಾತಿಯ ಉಮಾ ಶಿವಕುಮಾರ್ 25.06.2013ರಲ್ಲಿ ನಿಧನ ಹೊಂದಿದರು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಮಾ ಶಿವಕುಮಾರ್ ಬೆಂಗಳೂರು ಚಾಮರಾಜಪೇಟೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.

    ಮಣಿವಣ್ಣನ್

    ಮಣಿವಣ್ಣನ್

    ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ, ನಟ, ನಿರ್ಮಾಪಕ, ನಿರ್ದೇಶಕ ಆರ್ ಮಣಿವಣ್ಣನ್ (59) ಹೃದಯಾಘಾತದಿಂದ 15.06.2013ರಂದು ಶನಿವಾರ ನಿಧನ ಹೊಂದಿದರು. (ಬಹುಮುಖ ಪ್ರತಿಭೆ ಮಣಿವಣ್ಣನ್ ವಿಧಿವಶ)

    ಪ್ರಾಣ್

    ಪ್ರಾಣ್

    ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಬ್ಲ್ಯಾಕ್ ಗೋಲ್ಡ್ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಪ್ರಾಣ್ ಅವರು 12.07.2013ರಂದು ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 93 ವರ್ಷದ ಪ್ರಾಣ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. (ದಾದಾ ಪ್ರಾಣ್ ಇನ್ನಿಲ್ಲ; ಇಂದು ಅಂತ್ಯಕ್ರಿಯೆ)

    ಹೇಮಂತ್

    ಹೇಮಂತ್

    ಯುವ ನಟ ಹೇಮಂತ್ ಹೃದಯಾಘಾತದಿಂದ 03.07.2013 ಬೆಳಗಿನ ಜಾವ ನಿಧನ ಹೊಂದಿದ್ದಾರೆ. 'ನೆನಪಿನಂಗಳ' ಚಿತ್ರದಲ್ಲಿ ನಾಯಕನಟನಾಗಿದ್ದ ಹೇಮಂತ್ ಅವರಿಗೆ 27 ವರ್ಷ ವಯಸ್ಸಾಗಿತ್ತು. ಹೇಮಂತ್ ಹೆಬ್ಬಾಳದಲ್ಲಿರುವ ಜಿಮ್ ಸೆಂಟರ್ ನಲ್ಲಿ ಅಭ್ಯಾಸ ನಿರತರಾಗಿದ್ದಾಗ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. (ಹೃದಯಾಘಾತ: 'ನೆನಪಿನಂಗಳ'ಕ್ಕೆ ಜಾರಿದ ನಟ ಹೇಮಂತ್)

    ರವಿಶಂಕರ್ ಪ್ರಸಾದ್

    ರವಿಶಂಕರ್ ಪ್ರಸಾದ್

    ಐದು ದಿನಗಳಿಂದ ನಾಪತ್ತೆಯಾಗಿದ್ದ ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ ರವಿಶಂಕರ್ ಪ್ರಸಾದ್ 13.07.2013ರಂದು ಶವವಾಗಿ ಪತ್ತೆಯಾಗಿದ್ದರು. ಜುಲೈ 8ರಂದು ನಾಪತ್ತೆಯಾಗಿದ್ದ ಪ್ರಸಾದ್ ಅವರ ಶವ ಪಶ್ಚಿಮ ಗೋದಾವರಿ ಜಿಲ್ಲೆಯ ಪೊಲಾವರಂ ಗ್ರಾಮದ ಬಳಿ ಪತ್ತೆಯಾಗಿತ್ತು. (ಕಾಣೆಯಾಗಿದ್ದ ಪ್ರಸಿದ್ಧ ನಿರ್ಮಾಪಕ ಶವವಾಗಿ ಪತ್ತೆ)

    ಶೃಂಗಾರ್ ನಾಗರಾಜ್

    ಶೃಂಗಾರ್ ನಾಗರಾಜ್

    ಕನ್ನಡ ಚಲನಚಿತ್ರಗಳ ಹಿರಿಯ ನಿರ್ಮಾಪಕ, ಪುಷ್ಪಕ ವಿಮಾನ ಖ್ಯಾತಿಯ ಶೃಂಗಾರ್ ನಾಗರಾಜ್ ಅವರು ಜುಲೈ 16, 2013ರಂದು ನಿಧನರಾದರು. 74 ವರ್ಷ ವಯಸ್ಸಿನ ನಾಗರಾಜ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. (ಪುಷ್ಪಕ ವಿಮಾನ ಖ್ಯಾತಿಯ ಶೃಂಗಾರ್ ನಾಗರಾಜ್ ಇನ್ನಿಲ್ಲ)

    ಟಿ ಎಸ್ ರಂಗರಾಜನ್

    ಟಿ ಎಸ್ ರಂಗರಾಜನ್

    ತಮಿಳುನಾಡಿನ ಖ್ಯಾತ ಕವಿ, ಚಿತ್ರಸಾಹಿತಿ ವಾಲಿ ಅಲಿಯಾಸ್ ಟಿ.ಎಸ್ ರಂಗರಾಜನ್ ಅವರು 18.07.2013ರಂದು ಕೊನೆಯುಸಿರೆಳೆದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. (ಹತ್ತು ಸಾವಿರ ಹಾಡುಗಳ ಸರದಾರ ವಾಲಿ ಇನ್ನಿಲ್ಲ)

    ಟಿ ಎನ್ ನರಸಿಂಹನ್

    ಟಿ ಎನ್ ನರಸಿಂಹನ್

    ಶಂಕರ್ ನಾಗ್ ನಿರ್ದೇಶಿಸಿದ್ದ ಜನಪ್ರಿಯ ಧಾರಾವಾಹಿ 'ಮಾಲ್ಗುಡಿ ಡೇಸ್' ನಿರ್ಮಾಪಕ ಟಿ.ಎನ್.ನರಸಿಂಹನ್ (86) 27.07.2013ರಂದು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಸುಮಾರು ಎಂಟು ವರ್ಷಗಳ ಹಿಂದೆ ಬೆನ್ನು ಶಸ್ತ್ರಕ್ರಿಯೆಗೆ ಒಳಗಾಗಿದ್ದ ನರಸಿಂಹನ್ ಅವರ ದೇಹಾರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ.

    ಶ್ರೀಹರಿ

    ಶ್ರೀಹರಿ

    ಖ್ಯಾತ ತೆಲುಗು ನಟ ರಘುಮೂರಿ ಶ್ರೀಹರಿ 09.10.2013 ರಲ್ಲಿ ನಿಧನಹೊಂದಿದರು. 15.08.1964ರಲ್ಲಿ ವಿಜಯವಾಡದಲ್ಲಿ ಜನಿಸಿದ ಶ್ರೀಹರಿ ಬಹುಭಾಷಾ ನಟಿ ಡಿಸ್ಕೋ ಶಾಂತಿಯನ್ನು ವರಿಸಿದ್ದರು. ಒಂದಾಗೋಣ ಬಾ, ಓ ಪ್ರೇಮವೇ, ಖೋ..ಖೋ ಕನ್ನಡ ಚಿತ್ರ ಸೇರಿ ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. (ತೆಲುಗಿನ ಶೇರ್ ಖಾನ್ ಸಾವಿಗೆ ಟ್ವೀಟ್ ಕಂಬನಿ)

    ಭದ್ರಗಿರಿ ಅಚ್ಯುತದಾಸ

    ಭದ್ರಗಿರಿ ಅಚ್ಯುತದಾಸ

    ಹರಿಕಥೆಯ ಹರಿಕಾರ/ಕೀರ್ತನಕಾರ, ನಾಡಿನಲ್ಲಿ ಹರಿಕಥೆಗೆ ವಿಶೇಷ ಮೆರುಗು ನೀಡಿ, ಪೋಷಿಸಿದ ನೈಜ ಕಲಾವಿದ ಭದ್ರಗಿರಿ ಅಚ್ಯುತದಾಸರು 22.10.213ರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೂಲತಃ ಉಡುಪಿ ಜಿಲ್ಲೆಯವರಾದ 85 ವರ್ಷ ವಯಸ್ಸಿನ ಅಚ್ಯುತದಾಸರು ಬೆಂಗಳೂರಿನ ರಾಜಾಜಿನಗರ 5ನೇ ಬ್ಲಾಕ್‌ ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಭದ್ರಗಿರಿ ಅಚ್ಯುತದಾಸರು ಒಂದೂವರೆ ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. (ಹರಿಕಥೆಯ ಭದ್ರಗಿರಿ ಅಚ್ಯುತದಾರು ಬದುಕಿನ ಕಥೆ ಮುಗಿಸಿದ್ರು)

    ಮನ್ನಾಡೇ

    ಮನ್ನಾಡೇ

    ಕುಹೂ ಕುಹೂ ಎಂದು ಹಾಡಿದ್ದ. ತನ್ನ ಸುಶ್ರಾವ್ಯ ಕಂಠದಿಂದ ಅಪಾರ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಖ್ಯಾತ ಗಾಯಕ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮನ್ನಾ ಡೇ 24.10.2013ರಂದು ಬೆಳಗಿನ ಜಾವ ಮೃತಪಟ್ಟರು.

    ಡಿ ರಾಜೇಂದ್ರ ಬಾಬು

    ಡಿ ರಾಜೇಂದ್ರ ಬಾಬು

    ಹೆಸರಾಂತ ನಿರ್ದೇಶಕ ರಾಜೇಂದ್ರ ಬಾಬು 03.11.2013ರಲ್ಲಿ ನಿಧನರಾದರು. 30.03.1951ರಲ್ಲಿ ಜನಿಸಿದ ಬಾಬು ನಾನು ನನ್ನ ಹೆಂಡತಿ, ಒಲವಿನ ಉಡುಗೊರೆ, ರಾಮಾಚಾರಿ, ಹಾಲುಂಡ ತವರು, ದಿಗ್ಗಜರು, ಬಿಂದಾಸ್ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದರು. ಇವರ ಮಹತ್ವಾಕಾಂಕ್ಷೆಯ ಶಿವರಾಜ್ ಕುಮಾರ್ ಅಭಿನಯದ ಆರ್ಯನ್ ಚಿತ್ರದ ಶೂಟಿಂಗ್ ಮುಕ್ತಾಯಗೊಳ್ಳುವ ಮುನ್ನವೇ ಬಾಬು ನಿಧನ ಹೊಂದಿದರು. ಈ ಚಿತ್ರದ ನಿರ್ದೇಶನವನ್ನು ಈಗ ಗುರುದತ್ ವಹಿಸಿ ಕೊಂಡಿದ್ದಾರೆ.

    ಜಂಗಲ್ ಜಾಕಿ

    ಜಂಗಲ್ ಜಾಕಿ

    ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಜಂಗಲ್ ಜಾಕಿ ರಾಜೇಶ್ ಮೈಸೂರಿನ ಶ್ರೀರಾಮಪುರದ ಬಳಿ ಪರಸಯ್ಯನ ಹುಂಡಿಯಲ್ಲಿರುವ ತಮ್ಮ ನಿವಾಸದ ಮೂರನೇ ಮಹಡಿಯಿಂದ ಬಿದ್ದು 03.11.2013ರಂದು ದುರಂತ ಸಾವನ್ನಪ್ಪಿದ್ದಾನೆ.

    ಸುಂದರನಾಥ್ ಸುವರ್ಣ

    ಸುಂದರನಾಥ್ ಸುವರ್ಣ

    ಹೆಸರಾಂತ ಸಿನಿಮಾ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಬೆಂಗಳೂರಿನ ತಮ್ಮ ನಿವಾಸದಲ್ಲಿ 10.12.2013ರಲ್ಲಿ ನಿಧನರಾದರು. ಅಪರೂಪದ ಅತಿಥಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುವರ್ಣ, ಮುಸ್ಸಂಜೆ ಮಾತು, ಚೆಲ್ಲಾಟ, ನಮ್ಮೂರ ಮಂದಾರ ಹೂವೇ, ಗಂಡುಗಲಿ ಕುಮಾರರಾಮ, ತಮಸ್ಸು, ಗೋಲಿಬಾರ್, ಲಾಕಪ್ ಡೆತ್ ಮುಂತಾದ ಹಿಟ್ ಚಿತ್ರಗಳಿಗೆ ಸುವರ್ಣ ಕ್ಯಾಮರಾ ಹಿಡಿದಿದ್ದರು.(ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಇನ್ನಿಲ್ಲ)

    ಧರ್ಮವರಪ್ಪು ಸುಬ್ರಮಣ್ಯಂ

    ಧರ್ಮವರಪ್ಪು ಸುಬ್ರಮಣ್ಯಂ

    ತೆಲುಗಿನ ಖ್ಯಾತ ಹಾಸ್ಯ ಕಲಾವಿದ, ಕಾಂಗ್ರೆಸ್ ಮುಖಂಡ ಧರ್ಮವರಪ್ಪು ಸುಬ್ರಮಣ್ಯಂ ಅವರು 07.12.2013 ರಾತ್ರಿ ಹೈದರಾಬಾದಿನ ತಮ್ಮ ಸ್ವಗೃಹದಲ್ಲಿ ನಿಧನಹೊಂದಿದರು. 53 ವರ್ಷದ ಸುಬ್ರಮಣ್ಯಂ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.

    ಫಾರೂಕ್ ಶೇಖ್

    ಫಾರೂಕ್ ಶೇಖ್

    25.03.1948 ರಲ್ಲಿ ಅಮ್ರೋಲಿಯಲ್ಲಿ ಜನಿಸಿದ ಹೆಸರಾಂತ ಬಾಲಿವುಡ್ ನಟ ಫಾರೂಕ್ ಶೇಖ್ 27.12.2013ರಲ್ಲಿ ದುಬೈನಲ್ಲಿ ನಿಧನ ಹೊಂದಿದರು. ಯೇ ಜವಾನಿ ಯೇ ದಿವಾನಿ, ಮೊಹಬ್ಬತ್, ಅಬ್ ಇನ್ಸಾಫ್ ಹೋಗಾ, ಬೀವಿ ಹೊತೊ ಐಸಾ, ಸಲ್ಮಾ, ನೂರಿ, ಶತರಂಜ್ ಕೀ ಕಿಲಾಡಿ ಫಾರೂಖ್ ಅಭಿನಯದ ಪ್ರಮುಖವಾದ ಚಿತ್ರಗಳು.

    English summary
    Celebrities who died during the year 2013. Prominent celebrities included P B Srinivas, Manna Dey, Pran, Uma Shiva Kumar, Sreehari, Sundarnath Suvarna died in the year 2013.
    Friday, January 3, 2014, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X