»   » ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕ್ಷಣಗಣನೆ ಆರಂಭ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕ್ಷಣಗಣನೆ ಆರಂಭ

Posted by:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಎಂಟು ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಫೆಬ್ರವರಿ 9ಕ್ಕೆ ಆರಂಭವಾಗುವ ಪಂದ್ಯಾವಳಿ ಮಾರ್ಚ್ 10ಕ್ಕೆ ಮುಗಿಯಲಿದೆ.

ಸೆಮಿಫೈನಲ್ 1, ಸೆಮಿಫೈನಲ್ 2 ಹಾಗೂ ಫೈನಲ್ ಪಂದ್ಯಾವಳಿಯನ್ನು ಎಂಟು ಟಿವಿ ವಾಹಿನಿಗಳು ನೇರ ಪ್ರಸಾರ ಮಾಡಲಿವೆ. ವಿಜಯ್ ತಮಿಳು, ಅಂಜನ್ ಭೋಜ್ ಪುರಿ, ಸ್ಟಾರ್ ಗೋಲ್ಡ್ ಹಿಂದಿ, ಜೀ ತೆಲುಗು, ಸುವರ್ಣ ಕನ್ನಡ, ಏಷ್ಯಾನೆಟ್ ಮಲಯಾಳಂ, ಸ್ಟಾರ್ ಪ್ರವಾಹ್ ಮರಾಠಿ ಹಾಗೂ ಸ್ಟಾರ್ ಮೂವೀಸ್ ಬೆಂಗಾಳಿ ವಾಹಿನಿಗಳು ಸಿಸಿಎಲ್ 3ರ ಪ್ರಸಾರ ಹಕ್ಕುಗಳನ್ನು ಪಡೆದಿವೆ.

ಮುಂಬೈ ಹೀರೋಸ್, ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ಸ್, ಕೇರಳ ಸ್ಟ್ರೈಕರ್ಸ್, ಬೆಂಗಾಲ್ ಟೈಗರ್ಸ್, ವೀರ್ ಮರಾಠಿ, ಭೋಜ್ ಪುರಿ ದಬಾಂಗ್ಸ್ ನಡುವೆ ಪೈಪೋಟಿ ನಡೆಯಲಿದೆ. ಕೊನೆಯ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ.

ಯಾವ ತಂಡಕ್ಕೆ ಯಾರು ನಾಯಕ

ಯಾವ ತಂಡಕ್ಕೆ ಯಾರು ನಾಯಕ

ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್. ಮುಂಬೈ ಹೀರೋಸ್ ಕ್ಯಾಪ್ಟನ್ ಸುನೀಲ್ ಶೆಟ್ಟಿ, ಚೆನ್ನೈ ರೈನೋಸ್ ನಾಯಕ ವಿಶಾಲ್, ತೆಲುಗು ವಾರಿಯರ್ಸ್ ಗೆ ವೆಂಕಟೇಶ್ ಸಾರಥ್ಯ, ಕೇರಳ ಸ್ಟ್ರೈಕರ್ಸ್ ಗೆ ಮೋಹನ್ ಲಾಲ್ ಕಫ್ತಾನ, ಬೆಂಗಾಲ್ ಟೈಗರ್ಸ್ ತಂಡಕ್ಕೆ ಜೀತ್ ನಾಯಕತ್ವ, ಮರಾಠಿ ವೀರ್ ಗೆ ರಿತೇಶ್ ದೇಶ್ ಮುಖ್ ನಾಯಕ, ಭೋಬ್ ಪುರಿ ತಂಡಕ್ಕೆ ಮನೋಜ್ ತಿವಾರಿ ನಾಯಕತ್ವ ವಹಿಸಲಿದ್ದಾರೆ.

ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಸುದೀಪ್

ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಸುದೀಪ್

ಕರ್ನಾಟಕ ಬುಲ್ಡೋಜರ್ಸ್ ತಂಡ ಕಳೆದ ಕೆಲವು ತಿಂಗಳಿಂದ ಪ್ರಾಕ್ಟೀಸ್ ಮಾಡುತ್ತಿದ್ದು ಮೈದಾನದಲ್ಲಿ ಸಾಕಷ್ಟು ಬೆವರನ್ನು ಹರಿಸಿದೆ. ತಂಡದ ನಾಯಕ ಸುದೀಪ್ ಈ ಬಾರಿ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದ್ದಾರೆ.

ವೀರ್ ಮರಾಠಿ ಜೊತೆ ಸುದೀಪ್ ಮೊದಲ ಪಂದ್ಯ

ವೀರ್ ಮರಾಠಿ ಜೊತೆ ಸುದೀಪ್ ಮೊದಲ ಪಂದ್ಯ

ಕರ್ನಾಟಕ ಬುಲ್ಡೋಜರ್ಸ್ ಮೊದಲ ಪಂದ್ಯದಲ್ಲಿ ವೀರ್ ಮರಾಠಿ ತಂಡವನ್ನು ಎದುರಿಸಲಿದೆ. ಒಟ್ಟು ನಾಲ್ಕು ತಂಡಗಳೊಂದಿಗೆ ಸುದೀಪ್ ತಂಡ ಹೋರಾಡಬೇಕಾಗಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡದ ಲಾಂಚ್

ಕರ್ನಾಟಕ ಬುಲ್ಡೋಜರ್ಸ್ ತಂಡದ ಲಾಂಚ್

ಗುರುವಾರ (ಫೆ.7) ನಡೆದ ಕರ್ನಾಟಕ ಬುಲ್ಡೋಜರ್ಸ್ ತಂಡದ ಲಾಂಚ್ ಕಾರ್ಯಕ್ರಮಕ್ಕೆ ತಂಡದ ಮಾಲೀಕ ಅಶೋಕ್ ಖೇಣಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಎ ಗಣೇಶ್, ಸೂರಪ್ಪ ಬಾಬು, ಫಿಲಂ ಚೇಂಬರ್ ಅಧ್ಯಕ್ಷ ವಿಜಯ್ ಕುಮಾರ್, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಹಾಗೂ ನಟಿ ಐಂದ್ರಿತಾ ರೇ ಆಗಮಿಸಿದ್ದರು.

ನಾಲ್ಕು ತಂಡಗಳೊಂದಿಗೆ ಸೆಣೆಸಲಿರುವ ಸುದೀಪ್

ನಾಲ್ಕು ತಂಡಗಳೊಂದಿಗೆ ಸೆಣೆಸಲಿರುವ ಸುದೀಪ್

ಕರ್ನಾಟಕ ಬುಲ್ಡೋಜರ್ಸ್ ಮೊದಲ ಪಂದ್ಯ ವೀರ್ ಮರಾಠಿ ತಂಡದೊಂದಿಗೆ ಫೆ.10ರಂದು ಸಿಲಿಗುರಿಯಲ್ಲಿ ನಡೆಯಲಿ. ಫೆ.16ರಂದು ಹೈದರಾಬಾದಿನಲ್ಲಿ ಎರಡನೇ ಪಂದ್ಯ ಚೆನ್ನೈ ರೈನೋಸ್ ಜೊತೆ ನಡೆಯಲಿದೆ. ಫೆ.24ರಂದು ತೆಲುಗು ವಾರಿಯರ್ಸ್ ಜೊತೆ ರಾಂಚಿಯಲ್ಲಿ ಪಂಡ್ಯ ನಡೆಯಲಿದೆ. ಮಾ.2ರಂದು ಕೇರಳ ಸ್ಟ್ರೈಕರ್ಸ್ ಜೊತೆ ಸುದೀಪ್ ತಂಡ ಚೆನ್ನೈನಲ್ಲಿ ಸೆಣೆಸಲಿದೆ.

ಬಿಪಾಶಾ ಬಸು ಬ್ರ್ಯಾಂಡ್ ಅಂಬಾಸಿಡರ್

ಬಿಪಾಶಾ ಬಸು ಬ್ರ್ಯಾಂಡ್ ಅಂಬಾಸಿಡರ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ 3ರ ಬ್ರ್ಯಾಂಡ್ ಅಂಬಾಸಿಡರ್ ಬಾಲಿವುಡ್ ತಾರೆ ಬಿಪಾಶಾ ಬಸು.

ಯಾವ ತಂಡಕ್ಕೆ ಯಾರು ಒಡೆಯ

ಯಾವ ತಂಡಕ್ಕೆ ಯಾರು ಒಡೆಯ

ಮುಂಬೈ ಹೀರೋಸ್ ತಂಡಕ್ಕೆ ಸೋಹೈಲ್ ಖಾನ್; ಚೆನ್ನೈ ರೈನೋಸ್ ತಂಡಕ್ಕೆ ಕೆ.ಗಂಗಾಪ್ರಸಾದ್; ತೆಲುಗು ವಾರಿಯರ್ಸ್ ತಂಡಕ್ಕೆ ಮಹೇಶ್ ರೆಡ್ಡಿ ಹಾಗೂ ತಿರುಮಲ ರೆಡ್ಡಿ; ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಅಶೋಕ್ ಖೇಣಿ; ಕೇರಳ ಸ್ಟೈಕರ್ಸ್ ತಂಡಕ್ಕೆ ಮೋಹನ್ ಲಾಲ್, ಲಿಸ್ಸಿ ಪ್ರಿಯದರ್ಶನ್ ಹಾಗೂ ಶಾಜಿ; ಬೆಂಗಾಲ್ ಟೈಗರ್ಸ್ ತಂಡಕ್ಕೆ ಬೋನಿ ಕಪೂರ್, ಅರ್ಜುನ್ ಕಪೂರ್, ರಾಜ್ ಶಾ; ವೀರ್ ಮರಾಠಿ ತಂಡಕ್ಕೆ ರಿತೇಶ್ ದೇಶ್ ಮುಖ್; ಭೋಜ್ ಪುರಿ ದಬಾಂಗ್ಸ್ ತಂಡಕ್ಕೆ ಆನಂದ್ ಬಿಹಾರಿ ಯಾದವ್ ಹಾಗೂ ಮನೋಜ್ ತಿವಾರಿ.

ಸುದೀಪ್ ತಂಡದಲ್ಲಿ ಯಾರ್ಯಾರು ಇದ್ದಾರೆ?

ಸುದೀಪ್ ತಂಡದಲ್ಲಿ ಯಾರ್ಯಾರು ಇದ್ದಾರೆ?

ತಂಡದ ನಾಯಕ ಸುದೀಪ್ ಸೇರಿದಂತೆ ಜೆ.ಕಾರ್ತಿಕ್ (ಉಪನಾಯಕ), ದರ್ಶನ್, ಧ್ರುವ ಶರ್ಮ, ಪ್ರದೀಪ್, ರಾಜೀವ್, ಚಿರಂಜೀವಿ ಸರ್ಜಾ, ತರುಣ್ ಚಂದ್ರ, ರಾಹುಲ್, ರವಿಚೇತನ್, ಮಹೇಶ್, ಸೌರವ್, ಅವಿನಾಶ್, ದಿಗಂತ್, ಧರ್ಮ ಕೀರ್ತಿರಾಜ್, ಅಭಿಮನ್ಯು, ತರುಣ್ ಸುಧೀರ್.

English summary
The third season of Celebrity Cricket League (CCL 3), Cinema Aur Cricket Ki Shadi is here again. The league starts from 9hh Feb, 2013. Kichcha Sudeep who heads the ‘Karnataka Bulldozers’ team as captain.
Please Wait while comments are loading...

Kannada Photos

Go to : More Photos