»   » ಕರ್ನಾಟಕ ಬುಲ್ಡೋಜರ್ಸ್ ಗೆ ದರ್ಶನ್ ಓಪನರ್

ಕರ್ನಾಟಕ ಬುಲ್ಡೋಜರ್ಸ್ ಗೆ ದರ್ಶನ್ ಓಪನರ್

Posted by:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಾಲ್ಕನೇ ಆವೃತ್ತಿ ಪಂದ್ಯಾವಳಿಗಳ ಆರಂಭಕ್ಕೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಹಾಲಿ ಚಾಂಪಿಯನ್ ಕರ್ನಾಟಕ ಬುಲ್ಡೋಜರ್ಸ್ ತನ್ನ ಮೊದಲ ಪಂದ್ಯದಲ್ಲಿ ಬೆಂಗಾಳ್ ಟೈಗರ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 26ರಂದು ರಾತ್ರಿ 7 ಗಂಟೆಗೆ ನಡೆಯಲಿದೆ.

ಈ ಬಾರಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಸೇರ್ಪಡೆಗೊಂಡಿರುವುದು ತಂಡಕ್ಕೆ ಮತ್ತಷ್ಟು ಬಲ ಹೆಚ್ಚಿಸಿದೆ. ದರ್ಶನ್ ಅವರು ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯುವುದು ಖಾತ್ರಿಯಾಗಿದೆ.[ನೆಲಮಂಗಲ ರೆಸಾರ್ಟ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್]

ಕಳೆದ ಮೂರು ಸೀಸನ್ ಗಳಲ್ಲಿ ನಾಯಕ ಕಮ್ ವಿಕೆಟ್ ಕೀಪರ್ ಸುದೀಪ್ ಅವರೇ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದರು ಈ ಬಾರಿ ತಮ್ಮ ಗೆಳೆಯ ದರ್ಶನ್ ಅವರನ್ನು ಕಣಕ್ಕಿಳಿಸುತ್ತಿರುವುದು ವಿಶೇಷ. ದರ್ಶನ್ ಜತೆ ಸುದೀಪ್ ಕೂಡಾ ಓಪನರ್ ಆಗಿ ಕ್ರೀಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆಯಂತೆ.[ಸಿಸಿಎಲ್ ಪರ ಸಚಿನ್ ಬ್ಯಾಟಿಂಗ್, ಕಪಿಲ್ ನಿರೂಪಣೆ]

ಸದ್ಯಕ್ಕೆ ಸಿಕ್ಕಿರುವ ವೇಳಾಪಟ್ಟಿ ಪ್ರಕಾರ ಕರ್ನಾಟಕ ಬುಲ್ಡೋಜರ್ಸ್ ತಂಡ ತನ್ನ ಎರಡನೇ ಪಂದ್ಯವನ್ನು ಫೆ.2 ರಂದು ಚೆನ್ನೈ ರೈನೋಸ್ ವಿರುದ್ಧ ಆಡಲಿದೆ. ಮುಂಬೈನಲ್ಲಿ ಫೆ.8 ರಂದು ತೆಲುಗು ವಾರಿಯರ್ಸ್ ಆಡಲಿದೆ. ಲೀಗ್ ಪಂದ್ಯದ ಕೊನೆ ಪಂದ್ಯದಲ್ಲಿ ವೀರ್ ಮರಾಠಿ ವಿರುದ್ಧ ಕೊಚ್ಚಿಯಲ್ಲಿ ಫೆ.16ರಂದು ಸೆಣಸಾಡಲಿದೆ. ಎರಡು ಸೆಮಿಫೈನಲ್ ಪಂದ್ಯಗಳು ಫೆ.22ರಂದು ಬೆಂಗಳೂರಿನಲ್ಲೇ ನಡೆಯಲಿದೆ. ಫೈನಲ್ ಫೆ.23ರಂದು ಹೈದರಾಬಾದಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.[ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕಿಚ್ಚ ತಂಡದ ಭರದ ಸಿದ್ಧತೆ]

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 4ರಲ್ಲಿ ಎಂಟು ತಂಡಗಳು
  

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 4ರಲ್ಲಿ ಎಂಟು ತಂಡಗಳು

ಪೂಲ್ A ಹಾಗೂ ಪೂಲ್ B ಪೂಲ್ 'A' ನಲ್ಲಿ ಕರ್ನಾಟಕ ಬುಲ್ಡೋಜರ್ಸ್, ಕೇರಳ ಸ್ಟೈಕರ್ಸ್, ಭೋಜ್ ಪುರಿ ದಬಾಂಗ್ಸ್, ಮುಂಬೈ ಹೀರೋಸ್ ತಂಡಗಳಿವೆ.

ಪೂಲ್ 'B'ನಲ್ಲಿ ತೆಲುಗು ವಾರಿಯರ್ಸ್, ವೀರ್ ಮರಾಠಿ, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್ ತಂಡಗಳಿವೆ.

  

ಕರ್ನಾಟಕ ಬುಲ್ಡೋಜರ್ಸ್ಗೆ ಕಿಚ್ಚ ಸುದೀಪ್ ಟ್ವೀಟ್

ಕರ್ನಾಟಕ ಬುಲ್ಡೋಜರ್ಸ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ ದರ್ಶನ್ ಈ ಬಾರಿ ಓಪನರ್ ಎಂದಿದ್ದಾರೆ. ಜತೆಗೆ ಹೊಸ ಸೇರ್ಪಡೆ ಸುನೀರ್ ರಾವ್ ಸ್ವಾಗತಿಸಿ ಎಂದು ಕೋರಿದ್ದಾರೆ.

  

ಕರ್ನಾಟಕ ಬುಲ್ಡೋಜರ್ಸ್ಗೆ ಕಿಚ್ಚ ಸುದೀಪ್ ಟ್ವೀಟ್

ಕರ್ನಾಟಕ ಬುಲ್ಡೋಜರ್ಸ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಮೊದಲ ಪಂದ್ಯದ ಟಿಕೆಟ್ ಬಗ್ಗೆ ಮಾಹಿತಿ ನೀಡಿದ್ದಾರೆ.

  

ಸಿಸಿಎಲ್ 4 ಪಂದ್ಯದ ಟಿಕೆಟ್ ಎಲ್ಲೆಲ್ಲಿ ಸಿಗುತ್ತೆ

ಸಿಸಿಎಲ್ 4 ಪಂದ್ಯದ ಟಿಕೆಟ್ ಎಲ್ಲೆಲ್ಲಿ ಸಿಗುತ್ತೆ ಎಂಬುದರ ಬಗ್ಗೆ ಕರ್ನಾಟಕ ಬುಲ್ಡೋಜರ್ಸ್ ನಾಯಕ ಕಿಚ್ಚ ಸುದೀಪ್

  

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 4 ಮೊದಲ ಪಂದ್ಯಕ್ಕೆ ಟಿಕೆಟ್

ಸಿಸಿಎಲ್ 4 ಪಂದ್ಯದ ಟಿಕೆಟ್ ಬೆಂಗಳೂರಿನ ಬಿಗ್ ಬಜಾರ್ ಮಳಿಗೆಗಳಲ್ಲಿ ದೊರೆಯುತ್ತದೆ ಎಂದು ಕರ್ನಾಟಕ ಬುಲ್ಡೋಜರ್ಸ್ ನಾಯಕ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸಿಸಿಎಲ್ ನಲ್ಲಿ ಒಟ್ಟು ಎಂಟು ತಂಡಗಳು
  

ಸಿಸಿಎಲ್ ನಲ್ಲಿ ಒಟ್ಟು ಎಂಟು ತಂಡಗಳು

ಕರ್ನಾಟಕ ಬುಲ್ಡೋಜರ್ಸ್ ಸೇರಿದಂತೆ ಸಿಸಿಎಲ್ ನಲ್ಲಿ ಪ್ರಸ್ತುತ ಎಂಟು ತಂಡಗಳಿವೆ. ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಮುಂಬೈ ಹೀರೋಸ್, ಬೆಂಗಾಲ್ ಟೈಗರ್ಸ್, ಭೋಜ್ ಪುರಿ ದಬಾಂಗ್ಸ್, ವೀರ್ ಮರಾಠಿ.

 

 

English summary
Celebrity Cricket League 4: Challenging Star Darshan will open the challenge for Karnataka Bulldozers in this edition of Celebrity Cricket League
Please Wait while comments are loading...

Kannada Photos

Go to : More Photos