»   » ಸೆಲ್ ಕಾನ್ ಮೊಬೈಲ್ ಗೆ ರಾಯಾಭಾರಿಯಾದ ಯಶ್

ಸೆಲ್ ಕಾನ್ ಮೊಬೈಲ್ ಗೆ ರಾಯಾಭಾರಿಯಾದ ಯಶ್

Posted by:
Subscribe to Filmibeat Kannada

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಭಾರತದ ಮಿಲ್ಕಿ ಬ್ಯೂಟಿ ತಮನ್ನಾ ಆಯ್ತು ಇದೀಗ ನಮ್ಮ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಸರದಿ. ನಾವು ಮಾತಾಡ್ತಾ ಇರೋದು ಸಿನಿಮಾದ ಬಗ್ಗೆ ಅಲ್ಲ. ಸೆಲ್ ಕಾನ್ ಮೊಬೈಲ್ ಬಗ್ಗೆ.

ಹೌದು ಇದೇ ಮೊದಲ ಬಾರಿಗೆ ನಮ್ಮ ಕನ್ನಡದ ಕುವರ ರಾಕಿಂಗ್ ಸ್ಟಾರ್ ಯಶ್ ಅವರು ಒಂದು ಪ್ರಾಡಕ್ಟ್ ಗೆ ರಾಯಭಾರಿಯಾಗಿದ್ದು, ಸೆಲ್ ಕಾನ್ ಎನ್ನುವ ಸೆಲ್ ಫೋನ್ ತಯಾರಿಕ ಸಂಸ್ಥೆ ನಟ ಯಶ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದೆ.[ಚಿತ್ರಗಳು: ಅಣ್ತಮ್ಮಂದಿರಾ, ಯಶ್ 'ಅಣ್ಣಂಗೆ ಲವ್ ಆಗಿದೆ']

ಈ ಮೊದಲು ಕ್ರಿಕೆಟಿಗ ವಿರಾಟ್ ಕೋಹ್ಲಿ ಮತ್ತು ದಕ್ಷಿಣ ಭಾಗದ ಚಿತ್ರರಂಗದ ನಟಿ ಬ್ಯೂಟಿ ತಮನ್ನಾ ಅವರು ಇದರ ರಾಯಭಾರಿಗಳಾಗಿದ್ದರು.

ಇದೇ ಮೊದಲ ಬಾರಿಗೆ ಜಾಹೀರಾತುಗಳ ದುನಿಯಾಕ್ಕೆ ಕಾಲಿಟ್ಟಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸೆಲ್ ಕಾನ್ ನಂತಹ ದೊಡ್ಡ ಬ್ರ್ಯಾಂಡ್ ಗೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಗೆ ಸಖತ್ ಖುಷ್ ಅಗಿದೆ. ಯಾಕೆಂದರೆ ಬರೀ ಸಿನಿಮಾದಲ್ಲಿ ನೋಡುವ ಅವಕಾಶ ಮಾತ್ರ ಇದ್ದ ಅಭಿಮಾನಿಗಳಿಗೆ ಇದೀಗ ಜಾಹೀರಾತು ಮೂಲಕ ಕೂಡ ನೋಡಬಹುದಲ್ವಾ ಅಂತ

ಅಂದಹಾಗೆ ವಿಶೇಷವೆಂದರೆ ನಟ ಯಶ್ ಅವರು ಸೆಲ್ ಕಾನ್ ಮೊಬೈಲನ್ನು ಬಳಸಿ, ಅದರ ಗುಣಮಟ್ಟ ಉತ್ತಮವಾಗಿದೆ ಎಂದು ಮನದಟ್ಟಾದ ನಂತರ ಕಂಪೆನಿಯ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರಂತೆ.

English summary
One of the leading Indian mobile brands with significant presence in South India has roped in actor 'Yash' as its brand ambassador for Karnataka.
Please Wait while comments are loading...

Kannada Photos

Go to : More Photos