»   » ಯುಗಾದಿ ಹಬ್ಬಕ್ಕೆ 'ಚಕ್ರವರ್ತಿ'ಯಿಂದ ಬಂಪರ್ ಗಿಫ್ಟ್!

ಯುಗಾದಿ ಹಬ್ಬಕ್ಕೆ 'ಚಕ್ರವರ್ತಿ'ಯಿಂದ ಬಂಪರ್ ಗಿಫ್ಟ್!

Posted by:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೀತ ಚಿತ್ರ 'ಚಕ್ರವರ್ತಿ' ದಿನೇ ದಿನೇ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ. ಇದರ ಪರಿಣಾಮ ಚಿತ್ರದ ರಿಲೀಸ್ ಡೇಟ್ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದೆ. ಆದ್ರೆ ಅದೆಲ್ಲಾ ಸುಳ್ಳು ಸುದ್ದಿ ಎಂದು ಚಿತ್ರತಂಡವೇ ಸ್ವಷ್ಟಪಡಿಸಿತ್ತು. ಆದ್ರೆ, ಈಗ 'ಚಕ್ರವರ್ತಿ'ಯಿಂದ ಪಕ್ಕಾ ಸುದ್ದಿ ಬಂದಿದೆ.['ಚಕ್ರವರ್ತಿ' ಅಭಿಮಾನಿಗಳಿಗೆ 'ತ್ರಿಬಲ್' ಧಮಾಕ]

ಹೌದು, 'ಚಕ್ರವರ್ತಿ' ಅಡ್ಡಾದಿಂದ ಎಕ್ಸ್ ಕ್ಲೂಸಿವ್ ಸುದ್ದಿಯೊಂದು ರಿವಿಲ್ ಆಗಿದೆ. ಚಿತ್ರದ ರಿಲೀಸ್ ಡೇಟ್ ಜೊತೆಗೆ ಯುಗಾದಿ ಹಬ್ಬಕ್ಕೂ ಒಂದು ಬಂಪರ್ ಗಿಫ್ಟ್ ನೀಡಲು ಚಿತ್ರತಂಡ ನಿರ್ಧರಿಸಿದೆ. ಮುಂದೆ ಓದಿ.....


'ಚಕ್ರವರ್ತಿ' ಗಾಸಿಪ್ ಗೆ ಬಿತ್ತು ಬ್ರೇಕ್!

'ಚಕ್ರವರ್ತಿ' ಗಾಸಿಪ್ ಗೆ ಬಿತ್ತು ಬ್ರೇಕ್!

ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಮಾರ್ಚ್ 17 ರಂದು, ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದ್ರೆ, ಅದಕ್ಕೆ ಬ್ರೇಕ್ ಹಾಕಿದ ಚಿತ್ರತಂಡ, ಸಿನಿಮಾ ಯಾವಾಗ ಬರುತ್ತೆ ಎಂಬುದನ್ನ ಬಿಟ್ಟುಕೊಟ್ಟಿದೆ.['ಚಕ್ರವರ್ತಿ' ದರ್ಶನ್ ಬಗ್ಗೆ ಹರಿದಾಡಿದ್ದು ಸುಳ್ಳು ಸುದ್ದಿ.! ಅದನ್ನ ನಂಬಬೇಡಿ.!]


ಏಪ್ರಿಲ್ ನಲ್ಲಿ 'ಚಕ್ರವರ್ತಿ' ಅಬ್ಬರ ಶುರು!

ಏಪ್ರಿಲ್ ನಲ್ಲಿ 'ಚಕ್ರವರ್ತಿ' ಅಬ್ಬರ ಶುರು!

ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಏಪ್ರಿಲ್ ನಲ್ಲಿ ಸಿನಿಮಾನ ತೆರೆಗೆ ತರಲು ನಿರ್ಧರಿಸಲಾಗಿದೆಯಂತೆ. ಹೀಗಾಗಿ, ಏಪ್ರಿಲ್ ನಲ್ಲಿ 'ಚಕ್ರವರ್ತಿ' ಬರೋದು ಕನ್‌ ಫರ್ಮ್.[ದರ್ಶನ್ ಮತ್ತು ಯಶ್ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸಬೇಡಿ.! ಅದೆಲ್ಲವೂ ಸುಳ್ಳು.!]


'ಯುಗಾದಿ' ಹಬ್ಬಕ್ಕೆ ಟ್ರೈಲರ್!

'ಯುಗಾದಿ' ಹಬ್ಬಕ್ಕೆ ಟ್ರೈಲರ್!

ಅಂದ್ಹಾಗೆ, ದರ್ಶನ್ ಅಭಿಮಾನಿಗಳಿಗೆ ಈ ಬಾರಿಯ ಯುಗಾದಿ ಸಖತ್ ಸ್ಪೆಷಲ್ ಎನ್ನಬಹುದು. ಯಾಕಂದ್ರೆ, ಯುಗಾದಿ ಹಬ್ಬದ ವಿಶೇಷವಾಗಿ 'ಚಕ್ರವರ್ತಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆಯಂತೆ. ಈ ಮೂಲಕ ಡಿ-ಫ್ಯಾನ್ಸ್ ಗೆ ಯುಗಾದಿ ಹಬ್ಬ ಜೋರಾಗಿರಲಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಬಂದ ತಾಜಾ ಸುದ್ದಿ ಇದು.!
]ಟೀಸರ್ ಮತ್ತು ಸಾಂಗ್ಸ್ ಗೆ ಭರ್ಜರಿ ರೆಸ್ ಪಾನ್ಸ್!

ಟೀಸರ್ ಮತ್ತು ಸಾಂಗ್ಸ್ ಗೆ ಭರ್ಜರಿ ರೆಸ್ ಪಾನ್ಸ್!

ಈಗಾಗಲೇ ಬಿಡುಗಡೆ ಆಗಿರುವ 'ಚಕ್ರವರ್ತಿ' ಚಿತ್ರದ ಮೂರು ವಿಭಿನ್ನ ಟೀಸರ್ ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಅರ್ಜುನ್ ಜನ್ಯ ಸಂಗೀತ ಹಾಡುಗಳು ಕೂಡ ಸೂಪರ್ ಡೂಪರ್ ಹಿಟ್ ಆಗಿವೆ.['ಚಕ್ರವರ್ತಿ' ಐಟಂ ಹಾಡಿಗೆ ಹೆಜ್ಜೆ ಹಾಕಿದ 'ನಾಟಿಗರ್ಲ್' ಇವರೇ!]


'ಚಕ್ರವರ್ತಿ' ಚಿತ್ರದ ಸ್ಟೆಷಾಲಿಟಿ!

'ಚಕ್ರವರ್ತಿ' ಚಿತ್ರದ ಸ್ಟೆಷಾಲಿಟಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೀಪಾ ಸನ್ನಿಧಿ ಅಭಿನಯದ ಚಿತ್ರ 'ಚಕ್ರವರ್ತಿ'. ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ, ಆದಿತ್ಯ, ಯಶಸ್ ಸೂರ್ಯ, ದಿನಕರ್ ತೂಗುದೀಪ ಸೇರಿದಂತೆ ದೊಡ್ಡ ಕಲಾವಿದರ ಬಳಗ ಇದೆ. ಈ ಚಿತ್ರಕ್ಕೆ ಚಿಂತನ್ ಆಕ್ಷನ್ ಕಟ್ ಹೇಳಿದ್ದಾರೆ.


English summary
ChallengingStar darshan Starrer Most Expected Movie Chakravarthy Will Releasing on April. and trailer releasing for ugadi.
Please Wait while comments are loading...

Kannada Photos

Go to : More Photos