»   » 'ಚಕ್ರವ್ಯೂಹ' ಜಾತ್ರೆ: ಟ್ವಿಟ್ಟರ್ ನಲ್ಲಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ವಿಮರ್ಶೆ

'ಚಕ್ರವ್ಯೂಹ' ಜಾತ್ರೆ: ಟ್ವಿಟ್ಟರ್ ನಲ್ಲಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ವಿಮರ್ಶೆ

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ನ ಸಿನಿಮಾ 'ಚಕ್ರವ್ಯೂಹ' ಇಂದು (ಏಪ್ರಿಲ್ 29) ಬಹಳ ಅದ್ದೂರಿಯಾಗಿ ಇಡೀ ಕರ್ನಾಟಕ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆ ಕಂಡಿದೆ.

ಬಹುತೇಕ ಚಿತ್ರಮಂದಿರಗಳಲ್ಲಿ ಬೆಳ್ಳಂಬೆಳಗ್ಗೆ 'ಚಕ್ರವ್ಯೂಹ' ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳು ನಿದ್ದೆ ಬಿಟ್ಟು ಸಿನಿಮಾ ವೀಕ್ಷಿಸಿ ಸಂಭ್ರಮ ಆಚರಿಸುತ್ತಿದ್ದಾರೆ. ಅಲ್ಲದೇ ಚಿತ್ರಮಂದಿರಗಳಿಗೆ ಬಣ್ಣ-ಬಣ್ಣದ ಕಾಗದಗಳನ್ನು ಕಟ್ಟಿ, ಹೂ ಹಾಕಿ ಮದುವೆ ಮನೆಯಂತೆ ಸಿಂಗಾರ ಮಾಡಿದ್ದಾರೆ.[ನಾಳೆ 'ಚಕ್ರವ್ಯೂಹ' ಸಿನಿಮಾ ನೋಡ್ತೀರಾ? ಒಂದು ಸರ್ ಪ್ರೈಸ್ ಕಾದಿದೆ.!]


ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ಗೆ ಹೂ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಸಂಭ್ರಮ ಪಡುತ್ತಿದ್ದಾರೆ. ಮೊದಲ ಶೋ ನೋಡಿದ ಪ್ರೇಕ್ಷಕ ಅಭಿಪ್ರಾಯ ಇಲ್ಲಿದೆ ನೋಡಲು ವಿಡಿಯೋ ನೋಡಿ..


ಸುಮಾರು ಒಂದು ವರ್ಷಗಳ ನಂತರ ಪುನೀತ್ ಅವರು ಗ್ರ್ಯಾಂಡ್ ಆಗಿ 'ಚಕ್ರವ್ಯೂಹ' ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದು, ಈಗಾಗಲೇ ಸಿನಿಮಾ ನೋಡಿರುವ ಅಭಿಮಾನಿಗಳು ಹಾಗೂ ಸಿರಸಿಕರು ಸಿನಿಮಾ ತುಂಬಾ ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ವರ್ಷದ ನಂತರ 'ಚಕ್ರವ್ಯೂಹ' ಬೇಧಿಸಲು ಸಜ್ಜಾದ ಪವರ್ ಸ್ಟಾರ್]


ಅಭಿಮಾನಿಗಳ ಸಂಭ್ರಮ ಮತ್ತು ಟ್ವಿಟ್ಟರ್ ನಲ್ಲಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ವ್ಯಕ್ತಪಡಿಸಿರುವ ಮೊದಲ ವಿಮರ್ಶೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ಗ್ರ್ಯಾಂಡ್ ರಿಲೀಸ್

ಗ್ರ್ಯಾಂಡ್ ರಿಲೀಸ್

ಇಡೀ ಕರ್ನಾಟಕದಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಹಾಗೂ ವಿದೇಶಗಳಲ್ಲಿ ಸುಮಾರು 50 ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ವಿದೇಶಗಳಲ್ಲಿ ಇಷ್ಟರಮಟ್ಟಿಗೆ ಯಶಸ್ವಿ ಪ್ರದರ್ಶನ ಆಗುತ್ತಿರುವ ಮೊದಲ ಸಿನಿಮಾ ಎಂಬ ಹೆಮ್ಮೆಗೆ 'ಚಕ್ರವ್ಯೂಹ' ಸಿನಿಮಾ ಪಾತ್ರವಾಗಿದೆ.[ಪುನೀತ್ ಅವರು ಸಖತ್ ಡ್ಯಾನ್ಸರ್ ಅಂತ ಮತ್ತೆ ಪ್ರೂವ್ ಆಯ್ತು]


80 ಅಡಿ ಎತ್ತರದ ಕಟೌಟ್

80 ಅಡಿ ಎತ್ತರದ ಕಟೌಟ್

ಮೈಸೂರಿನ ಚಿತ್ರಮಂದಿರವೊಂದರಲ್ಲಿ ಸುಮಾರು 80 ಅಡಿ ಎತ್ತರ ಇರುವ ಪವರ್ ಸ್ಟಾರ್ ಪುನೀತ್ ಅವರ ಸ್ಟೈಲಿಷ್ ನಡಿಗೆಯ ಶೈಲಿಯಲ್ಲಿರುವ ಬೃಹತ್ ಕಟೌಟ್ ಹಾಕಲಾಗಿದೆ.[ಅಪ್ಪು ಅವರ 'ಚಕ್ರವ್ಯೂಹ' ಬಿಡುಗಡೆ ಮುಂದಕ್ಕೆ ಹೋಗಿದ್ದೇಕೆ?]


ನರ್ತಕಿಯಲ್ಲಿ ಸಂಭ್ರಮ

ನರ್ತಕಿಯಲ್ಲಿ ಸಂಭ್ರಮ

ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಬೆಳಗ್ಗೆ 7.30 ಕ್ಕೆ 'ಚಕ್ರವ್ಯೂಹ' ಚಿತ್ರದ ಶೋ ಆರಂಭವಾಗಿತ್ತು. ಚಿತ್ರಮಂದಿರದಲ್ಲಿ ಅಭಿಮಾನಿಗಳ ನೂಕು-ನುಗ್ಗಲು ಆರಂಭವಾಗಿತ್ತು. ಈಗಾಗಲೇ ಎಲ್ಲಾ ಪ್ರದರ್ಶನಗಳ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಟಿಕೆಟ್ ದೊರೆಯದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.


ಚಿತ್ರದುರ್ಗದಲ್ಲಿ ಸಂಭ್ರಮ

ಚಿತ್ರದುರ್ಗದಲ್ಲಿ ಸಂಭ್ರಮ

ಚಿತ್ರದುರ್ಗದ ಬಸವೇಶ್ವರ ಚಿತ್ರಮಂದಿರದಲ್ಲಿ ಬೆಳ್ಳಂ-ಬೆಳಗ್ಗೆ 6.30 ಕ್ಕೆ ಶೋ ಆರಂಭವಾಗಿದ್ದು, ಈಗಾಗಲೇ ಸಿನಿಮಾ ವೀಕ್ಷಿಸಿರುವ ಅಭಿಮಾನಿಗಳು ಸಿನಿಮಾ ಪಕ್ಕಾ 100 ದಿನಗಳು ಗ್ಯಾರೆಂಟಿ ಎಂದಿದ್ದಾರೆ. ಅಲ್ಲದೇ ಚಿತ್ರದುರ್ಗದ 'ಶಿವ' ಚಿತ್ರಮಂದಿರದಲ್ಲಿ 3 ಘಂಟೆಗೆ ಶೋ ಆರಂಭವಾಗಿತ್ತು.


ಬಳ್ಳಾರಿಯಲ್ಲಿ 'ಚಕ್ರವ್ಯೂಹ' ಕ್ರೇಜ್

ಬಳ್ಳಾರಿಯಲ್ಲಿ 'ಚಕ್ರವ್ಯೂಹ' ಕ್ರೇಜ್

ಬಳ್ಳಾರಿಯ 'ಗಂಗಾ' ಎಂಬ ಚಿತ್ರಮಂದಿರದಲ್ಲಿ ಮುಂಜಾನೆ ಸುಮಾರು 3.30 ಘಂಟೆಗೆ ಸಿನಿಮಾ ಆರಂಭವಾಗಿದ್ದು, ಅಭಿಮಾನಿಗಳು ನಿದ್ದೆ ಬಿಟ್ಟು ಸಿನಿಮಾ ನೋಡಿದ್ದಾರೆ. ಮುಂಜಾನೆ 3 ರ ಸಮಯದಲ್ಲೂ ಚಿತ್ರಮಂದಿರದಲ್ಲಿ ಭಾರಿ ಜನಜಂಗುಳಿ ಏರ್ಪಟ್ಟಿದ್ದು, ಜನರನ್ನು ನಿಯಂತ್ರಿಸೋದೇ ಕಷ್ಟ ಆಗಿತ್ತು.


ಬಾಕ್ಸಾಫೀಸ್ ಬಾದ್ ಷಾ

ಬಾಕ್ಸಾಫೀಸ್ ಬಾದ್ ಷಾ

ಈಗಾಗಲೇ ಸಿನಿಮಾ ವೀಕ್ಷಣೆ ಮಾಡಿರುವ ಎಲ್ಲಾ ಅಭಿಮಾನಿಗಳ ಅಭಿಪ್ರಾಯ ಏನಪ್ಪಾ ಅಂದ್ರೆ, ಪುನೀತ್ ಅವರನ್ನು 'ಬಾಕ್ಸಾಪೀಸ್ ಬಾದ್ ಷಾ' ಎಂದು ಕರೆದಿದ್ದಾರೆ.


ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಈಗಾಗಲೇ ಟ್ವಿಟ್ಟರ್ ನಲ್ಲಿ 'ಚಕ್ರವ್ಯೂಹ' ಟಾಪ್ ಟ್ರೆಂಡಿಂಗ್ ನಲ್ಲಿದೆ. ಕಂಗನಾ-ಹೃತಿಕ್ ಅವರ ಸಮರವನ್ನು ಬೀಟ್ ಮಾಡಿ 'ಚಕ್ರವ್ಯೂಹ' ಇಡೀ ಭಾರತದಾದ್ಯಂತ ಟಾಪ್ ಟ್ರೆಂಡಿಂಗ್ ಆಗಿದೆ.


ಅಭಿಮಾನಿ ಪವನ್ ಕುಮಾರ್ ಎಸ್

ಪವರ್ ಸ್ಟಾರ್ ಪುನೀತ್ ಅವರ ಅತ್ಯದ್ಭುತ ಅಭಿನಯ, ಅಭಿಮಾನಿಗಳಿಗೆ ಸಖತ್ ಆಕ್ಷನ್ ಟ್ರೀಟ್. ರೇಟಿಂಗ್ : 4/5.


ಶಿವರಾಜ್ ಕುಮಾರ್ ಅಭಿಮಾನಿಗಳು

ಪರ್ಫೆಕ್ಟ್ ಬೇಸಿಗೆಯ ಬ್ಲಾಕ್ ಬಸ್ಟರ್ ಸಿನಿಮಾ. ಭಯಂಕರ ಆಕ್ಷನ್ ಸೀಕ್ವೆಲ್ಸ್ ಇರುವ ಸಿನಿಮಾ. ರೇಟಿಂಗ್ : 4/5.


ಅಭಿಮಾನಿ ಪ್ರಿಯಾಂಕ

'ಆಸ್ಟ್ರೇಲಿಯಾದಲ್ಲಿರುವ ನನ್ನ ಕಸಿನ್ 'ಚಕ್ರವ್ಯೂಹ' ಪ್ರೀಮಿಯರ್ ಶೋ ನೋಡಿದ್ದಾರೆ. ಅವರು ಚಿತ್ರದ ಕಥೆಗೆ ಫಿದಾ ಆಗಿದ್ದಾರೆ' ಎಂದು ಅಭಿಮಾನಿ ಒಬ್ಬರು ಟ್ವೀಟ್ ಮಾಡಿದ್ದಾರೆ.


ವಿಮರ್ಶಕ ಎಸ್ ಶ್ಯಾಮ್ ಪ್ರಸಾದ್

'ಹೇಳಿ ಮಾಡಿಸಿದಂತಿರುವ ಆಕ್ಷನ್, ಕೆಲವು ಕಡೆ ತಬ್ಬಿಬ್ಬುಗೊಳಿಸುವ ಲವ್ ಟ್ರ್ಯಾಕ್, ಕೆಲವು ತುಂಬಾ ಒಳ್ಳೆಯ ಪಾತ್ರಗಳು'.- ಖ್ಯಾತ ವಿಮರ್ಶಕ ಎಸ್ ಶ್ಯಾಮ್ ಪ್ರಸಾದ್.


ಅಭಿಮಾನಿ ಮನೋಜ್ ರಾವತ್

'ಅರುಣ್ ವಿಜಯ್ ಸರ್ 'ಎನ್ನೈ ಅರಿಂದಾಲ್' ಚಿತ್ರದಲ್ಲಿ ನಿಮ್ಮ ನಟನೆ ತುಂಬಾ ಇಷ್ಟಪಟ್ಟಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಈ ಚಿತ್ರದಲ್ಲಿ ಇಷ್ಟಪಟ್ಟೆ. 'ಚಕ್ರವ್ಯೂಹ' ಸಿನಿಮಾ ಸೂಪರ್ ಆಗಿದೆ'.


English summary
Kannada Movie 'Chakravyuha' directed by M.Sarvanan released today (April 29) and got overwhelming response all over Karnataka. Kannada Actor Puneeth Rajkumar, Kannada Actress Rachita Ram are in the lead role. Here is the first day first show craze, tweets, audience response.
Please Wait while comments are loading...

Kannada Photos

Go to : More Photos