»   » ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದೆಯಾ 'ಅಂಬರೀಶ'?

ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದೆಯಾ 'ಅಂಬರೀಶ'?

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ರಿಲೀಸಾಗ್ತಿರೋ ಒಂದೊಂದು ಸ್ಟಾರ್ ಸಿನಿಮಾಗಳು ಒಂದೊಂದು ರೀತಿಯ ದಾಖಲೆ ಬರೀತಿವೆ. ಇತ್ತೀಚೆಗೆ ರಿಲೀಸಾದ ಪವರ್ ಸ್ಟಾರ್ ಪುನೀತ್ ಅಭಿನಯದ 'ಪವರ್ ***' ಚಿತ್ರ ಹಿಂದೆಂದೂ ಕಂಡು ಕೇಳರಿಯದ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸಲ್ಲಿ ಬ್ಯಾಂಡ್ ಬಜಾಯಿಸ್ತಿದೆ.

ಪುನೀತ್ ರಾಜ್ ಕುಮಾರ್ ಅಂದ್ರೆ ಸಾಫ್ಟ್ ಅಂಡ್ ಕ್ರಾಫ್ಟ್ ಸಿನಿಮಾಗಳ ಹೀರೋ. ಅವರ ಅಭಿನಯ ಒಂಥರಾ ಹಿತಮಿತವಾಗಿರುತ್ತೆ. ಅವರ ಅಬ್ಬರದಲ್ಲೂ ಸಣ್ಣ ಸೈಲೆನ್ಸ್ ಇರುತ್ತೆ. ಆದರೆ ದರ್ಶನ್ ಹಂಗಲ್ಲ. ಅದೊಂಥರಾ ಭೋರ್ಗರೆತ. ಬರಸಿಡಿಲು ಅಪ್ಪಳಿಸಿದ ಹಾಗೆ. ಹಾಗಾಗೀನೇ ದರ್ಶನ್ ಸಿನಿಮಾಗಳು ಅಂದ್ರೆ ಅಭಿಮಾನಿಗಳಿಗೆ ಹುಚ್ಚು ಕಿಚ್ಚು. [ದರ್ಶನ್ ಅಭಿನಯದ ಅಂಬರೀಶ ಆಡಿಯೋ ವಿಮರ್ಶೆ]

ಪವರ್ ಸ್ಟಾರ್ ಸಿನಿಮಾದಲ್ಲಿ ಪವರ್ ಫುಲ್ ಪುನೀತ್ ರನ್ನ ನೋಡಿದ ಅಭಿಮಾನಿಗಳು ಪವರ್ ಸ್ಟಾರ್ ಸಿನಿಮಾ ಮೂಲಕ ಅದೆಷ್ಟೋ ದಾಖಲೆಗಳನ್ನೂ ಕಂಡ್ರು. ದಿನಕ್ಕೆ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ಪ್ರದರ್ಶನ ಒಂದು ದಾಖಲೆಯಾದ್ರೆ. ಆಡಿಯೋ ಟ್ರಿಪಲ್ ಪ್ಲಾಟೀನಂ ಡಿಸ್ಕ್ ಮೂಲಕ ಯರ್ರಾಬಿರ್ರಿ ಹಿಟ್ ಆಯ್ತು.

ಈ ಎಲ್ಲಾ ದಾಖಲೆಗಳನ್ನ 'ಅಂಬರೀಶ' ಮುರೀತಾನಾ?

ಈ ಎಲ್ಲಾ ದಾಖಲೆಗಳನ್ನ 'ಅಂಬರೀಶ' ಮುರೀತಾನಾ?

ಮೊದಲ ಬಾರಿಗೆ ಪಾಪ್ ರೀಮಿಕ್ಸ್ ವರ್ಷನ್ ಸಾಂಗನ್ನು ಪಬ್ಲಿಸಿಟಿಗಾಗಿ ಹಾಡಿಸಿದ್ದೂ ಕೂಡ ದಾಖಲೇನೇ. ಇನ್ನು ಕಲೆಕ್ಷನ್ ನಲ್ಲಿ ಪುನೀತ್ ಸಿನಿಮಾಗೆ ಹಾಕಿದ ಮುಕ್ಕಾಲು ಪಾಲು ದುಡ್ಡನ್ನ ಆರಂಭದಲ್ಲೇ ತಂದುಕೊಡ್ತು. ಈ ಎಲ್ಲಾ ದಾಖಲೆಗಳನ್ನ 'ಅಂಬರೀಶ' ಮುರೀತಾನಾ? ನಮ್ಮ ಲೆಕ್ಕಾಚಾರ ಮುಂದಿದೆ ಸ್ಲೈಡ್ ನಲ್ಲಿ ನೋಡಿ.

ದರ್ಶನ್ ಸಿನಿಮಾ ಕ್ರೇಜೇ ಬೇರೆ

ದರ್ಶನ್ ಸಿನಿಮಾ ಕ್ರೇಜೇ ಬೇರೆ

ಚಾಲೆಂಜಿಂಗ್ ಸ್ಟಾರ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಹುಚ್ಚು. ಜನ ದರ್ಶನ್ ರನ್ನ ನೋಡೋಕೆ ಥಿಯೇಟರ್ ಗೆ ಬರ್ತಾರೆ. ಆಕ್ಟ್ ಮಾಡದಿದ್ರೂ ಪರ್ವಾಗಿಲ್ಲ. ದರ್ಶನ್ ನಿಂತ್ರೂ ಚಪ್ಪಾಳೆ ಕುಂತ್ರೂ ಚಪ್ಪಾಳೆ. ಹಾಗಾಗೀನೇ ದರ್ಶನ್ ಬಾಕ್ಸಾಫೀಸ್ ಕಾ ಸುಲ್ತಾನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಈಗ ನಿಜವಾದ ಚಾಲೆಂಜ್

ಈಗ ನಿಜವಾದ ಚಾಲೆಂಜ್

ಈ ಬಾಕ್ಸಾಫೀಸ್ ಕಾ ಸುಲ್ತಾನ್ ಗೆ ಈಗ ನಿಜವಾದ ಸವಾಲು ಎದುರಾಗಿದೆ. ಪವರ್ *** ಸಿನಿಮಾ ಕಲೆಕ್ಷನ್ ನಲ್ಲಿ ಐದಾರು ವರ್ಷಗಳ ಎಲ್ಲ ಚಿತ್ರಗಳ ದಾಖಲೆಯನ್ನ ಧೂಳಿಪಟ ಮಾಡಿದೆ. ಈಗ 'ಅಂಬರೀಶ' ಚಿತ್ರ ಪವರ್ *** ದಾಖಲೆ ಮುರಿಯುತ್ತಾ ಅನ್ನೋ ಕುತೂಹಲ ಎಲ್ಲರಿಗೂ ಇದೆ.

ಅಂಬರೀಷ ಅನ್ನೋ ಹೆಸ್ರೇ ಪವರ್ ಫುಲ್

ಅಂಬರೀಷ ಅನ್ನೋ ಹೆಸ್ರೇ ಪವರ್ ಫುಲ್

ಚಿತ್ರಕ್ಕಿರೋ ಹೆಸರು ಅಂಬರೀಶನೇ ಒಂಥರಾ ಕರೆಂಟು. ಆ ಟೈಟಲ್ ಗಿರೋ ಶಕ್ತಿಯೇ ಚಿತ್ರದ ಒಳಗೂ ಇದೆ. ಅಂಬರೀಷ್ ಕೆಂಪೇಗೌಡನ ಪಾತ್ರದಲ್ಲಿ ಎಂಟ್ರಿ ಕೊಟ್ರೆ ಅಭಿಮಾನಿಗಳು ಥಿಯೇಟರ್ ನ ಚಾವಣಿ ಕಿತ್ತು ಹೋಗೋ ಹಾಗೆ ಸೌಂಡ್ ಮಾಡ್ತಾರೆ.

ಆಡಿಯೋ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ

ಆಡಿಯೋ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ

ಅಂಬರೀಶ ಸಿನಿಮಾಗೆ ಸಂಗೀತ ನೀಡಿರೋದು ವಿ ಹರಿಕೃಷ್ಣ. ದರ್ಶನ್ ರಿಗೆ ಬೇಕಾದಂತಹ ಅಚ್ಚುಕಟ್ಟಾದ ಹಾಡು ನೀಡಿರೋ ಹರಿಕೃಷ್ಣ ಹಾಡುಗಳು ದಾಖಲೆ ಬರೆಯದಿದ್ರೂ ಚಿತ್ರತಂಡಕ್ಕೇನೂ ನಷ್ಟವಿಲ್ಲ. ದರ್ಶನ್ ಅಲ್ಲಿದ್ರೆ ಸಾಕು.

ಎರಡು ವರ್ಷದ ನಂತರ ಸ್ವಮೇಕ್

ಎರಡು ವರ್ಷದ ನಂತರ ಸ್ವಮೇಕ್

ದರ್ಶನ್ ಸ್ವಮೇಕ್ ಸಿನಿಮಾ ಮಾಡಿ ಎರಡು ವರ್ಷಗಳಾಗಿತ್ತು. ಸಂಗೊಳ್ಳಿ ರಾಯಣ್ಣ ನಂತರ ದರ್ಶನ್ ರ ಸ್ವಮೇಕ್ ಸಿನಿಮಾ ಇದಾಗಿದ್ದು ನಮ್ಮ ಮಣ್ಣಿನ ಸೊಗಡಿನ ಪಾತ್ರದಲ್ಲಿ ಗೆದ್ದಿದ್ದ ಸಂಗೊಳ್ಳಿ ರಾಯಣ್ಣ ಸಿನಿಮಾದಂತೆ ಇಲ್ಲಿಯೂ ದರ್ಶನ್ ರನ್ನ ತೆರೆಮೇಲೆ ನೋಡೋಕೆ ಚಿತ್ರಪ್ರೇಮಿಗಳು ಕಾತುರರಾಗಿದ್ದಾರೆ.

ಬುಲ್ ಬುಲ್ ಜೋಡಿ

ಬುಲ್ ಬುಲ್ ಜೋಡಿ

ಭರ್ಜರಿ ಯಶಸ್ಸಿನ 'ಬುಲ್ ಬುಲ್' ಚಿತ್ರದ ನಂತರ ದರ್ಶನ್ ಅಂಬರೀಷನಾಗಿ ಕಾಣಿಸಿಕೊಳ್ತಿರೋ ಸಿನಿಮಾ ಇದು. ಬುಲ್ ಬುಲ್ ನಲ್ಲಿ ದರ್ಶನ್ ಗೆ ಸೂಪರ್ ಜೋಡಿಯಾಗಿದ್ದ ರಚಿತಾರಾಮ್ ಕೂಡ ಅಂಬರೀಶದಲ್ಲಿದ್ದು ಚಿತ್ರದ ಬಗ್ಗೆ ಡಬಲ್ ಹೋಪ್ ಸೃಷ್ಠಿಯಾಗಿದೆ.

ಮೊದಲಬಾರಿಗೆ ದರ್ಶನ್ ಗೆ ಪ್ರಿಯಾಮಣಿ ಜೋಡಿ

ಮೊದಲಬಾರಿಗೆ ದರ್ಶನ್ ಗೆ ಪ್ರಿಯಾಮಣಿ ಜೋಡಿ

ಸ್ಯಾಂಡಲ್ ವುಡ್ ಹೆಚ್ಚಿನ ಟಾಪ್ ಸ್ಟಾರ್ ಗಳಿಗೆ ಜೋಡಿಯಾಗಿರೋ ಪ್ರಿಯಾಮಣಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮೊದಲ ಬಾರಿಗೆ ಜೋಡಿಯಾಗ್ತಿರೋದು ಚಿತ್ರದ ಮತ್ತೊಂದು ಹೈಲೈಟ್.

ದಾಖಲೆ ಮುರಿಯೋ ಸಿದ್ಧತೆಯಲ್ಲಿ ಅಂಬರೀಶ

ದಾಖಲೆ ಮುರಿಯೋ ಸಿದ್ಧತೆಯಲ್ಲಿ ಅಂಬರೀಶ

ದಸರಾ ವೇಳೆಗೆ ತೆರೆಗೆ ಬರೋಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿರೋ ಅಂಬರೀಶ ದಸರಾಗೂ ಮೊದಲೇ ತೆರೆಗೆ ಬಂದ್ರೂ ಅಚ್ಚರಿಯಿಲ್ಲ. ಆದರೆ ಇದು ಮತ್ತೊಂದು ದರ್ಶನ್ ಧಮಾಕಾ ಆಗುತ್ತೆ ಅನ್ನೋದ್ರಲ್ಲಿ ಅನುಮಾನವಿಲ್ಲ.

English summary
Sandalwood industry belives that, Challenging Star Darshan lead Kannada movie 'Ambareesha' to create all time record in box office. The film directed and produced by Mahesh Sukhadhare under the Sri Sukhadhare Pictures banner.
Please Wait while comments are loading...

Kannada Photos

Go to : More Photos