»   » ಚೇತರಿಸಿಕೊಂಡ ದರ್ಶನ್, ಮತ್ತೆ 'ಜಗ್ಗುದಾದ' ಅಡ್ಡಾದಲ್ಲಿ ಹಾಜರ್.!

ಚೇತರಿಸಿಕೊಂಡ ದರ್ಶನ್, ಮತ್ತೆ 'ಜಗ್ಗುದಾದ' ಅಡ್ಡಾದಲ್ಲಿ ಹಾಜರ್.!

Posted by:
Subscribe to Filmibeat Kannada

ಮನೆಯಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಕೈಗೆ ಪೆಟ್ಟಾಗಿ ಮನೆಯಲ್ಲಿ ಪೂರ್ತಿ ರೆಸ್ಟ್ ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಸಂಪೂರ್ಣ ಗುಣಮುಖರಾಗಿ ಮತ್ತೆ ಶೂಟಿಂಗ್ ಗೆ ಹಿಂತಿರುಗಿದ್ದಾರೆ.

ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಮತ್ತೆ ಶೂಟಿಂಗ್ ಗೆ ಹಿಂತಿರುಗಿದ್ದನ್ನು ಕಂಡು 'ಜಗ್ಗುದಾದ' ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ವಿರಾಟ್' ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಮುಂದೂಡಲಾಗಿದ್ದ 'ಜಗ್ಗುದಾದ' ಶೂಟಿಂಗ್ ಗೆ ಸದ್ಯದಲ್ಲೇ ಮರಳಲಿದ್ದಾರೆ.[ಚಾಲೆಂಜಿಂಗ್ ಸ್ಟಾರ್ 'ಜಗ್ಗುದಾದ'ನ, ಫಸ್ಟ್ ಲುಕ್ ಪೋಸ್ಟರ್ ಔಟ್!]

'ನಾನು 'ವಿರಾಟ್' ಸಿನಿಮಾದ ಮೊದಲರ್ಧ ಭಾಗದ ಡಬ್ಬಿಂಗ್ ಮಂಗಳವಾರ ಮುಗಿಸಲಿದ್ದೇನೆ. ಇನ್ನು ಕಾಯಲು ಸಾಧ್ಯವಿಲ್ಲ, ಆದ್ದರಿಂದ 'ಜಗ್ಗುದಾದ' ಚಿತ್ರತಂಡಕ್ಕೆ ಡಿಸೆಂಬರ್ 1 ರಿಂದ ಶೂಟಿಂಗ್ ನಡೆಸಲು ತಯಾರಾಗಿ ಎಂದು ಹೇಳಿದ್ದೇನೆ, ಎನ್ನುತ್ತಾರೆ ನಟ ದರ್ಶನ್.

'ವೈದ್ಯರು ಎಡಗೈಗೆ ಹೆಚ್ಚಿನ ಒತ್ತಡ ಹೇರದೆ ವಿಶ್ರಾಂತಿ ನೀಡಲು ಸಲಹೆ ನೀಡಿದ್ದರೂ ಕೂಡ ಹಾಸಿಗೆಯಲ್ಲಿ ಸದಾ ಮಲಗಿರಲು ಸಾಧ್ಯವಿಲ್ಲ. ನನಗೆ ಸಾಕಾಗಿ ಹೋಗಿದೆ. ನನ್ನ ಜೀವನಶೈಲಿಯಲ್ಲಿ ನಾನು ಯಾವಾಗಲೂ ಬ್ಯುಸಿಯಾಗಿರಲು ಬಯಸುತ್ತೇನೆ.[ಭರ್ಜರಿ 50 ದಿನ ಪೂರೈಸಿದ ಬಾಕ್ಸಾಫೀಸ್ ಸುಲ್ತಾನನ, 'ಐರಾವತ'..!]

'ನಾನು ಸಾಮಾನ್ಯವಾಗಿ ಬೆಳ್ಳಂ ಬೆಳಗ್ಗೆ 5.30 ಕ್ಕೆ ಎದ್ದು ಜಿಮ್ಮಿಗೆ ಹೋಗಿ ನಂತರ ಶೂಟಿಂಗ್ ಗೆ ತೆರಳುತ್ತೇನೆ. ಆದರೆ ಈ ಪೆಟ್ಟಿನಿಂದ ಸೋಮಾರಿಯಾಗುವುದರ ದುಷ್ಪರಿಣಾಮಗಳು ತಿಳಿಯಿತು ಎನ್ನುತ್ತಾರೆ ಚಾಲೆಂಜಿಂಗ್ ಸ್ಟಾರ್.

'ಆದರೆ ಈ ವಿಶ್ರಾಂತಿಯಿಂದ ಒಂದೇ ಒಂದು ಒಳ್ಳೆಯ ಸಂಗತಿಯೆಂದರೆ ಗಡ್ಡ ಬೆಳೆದಿದ್ದು, ನಿಜ ಹೇಳಬೇಕೆಂದರೆ 'ಜಗ್ಗುದಾದ' ಸಿನಿಮಾಗೆ ಈ ಲುಕ್ಸ್ ಬೇಕಾಗಿತ್ತು' ಎಂದು ನಗು ಬೀರುತ್ತಾರೆ ನಟ ದರ್ಶನ್.[ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.!]

ಒಟ್ನಲ್ಲಿ ದರ್ಶನ್ ದಾದ ಮತ್ತೆ ಅಖಾಡಕ್ಕೆ ವಾಪಸಾಗಿರುವುದರಿಂದ, ಅಭಿಮಾನಿಗಳ ಸಂಭ್ರಮಕ್ಕೆ ತಡೆ ಇಲ್ಲದಂತಾಗಿದೆ. ಅಂತೂ ಇಂತೂ 'Mr ಐರಾವತ'ನ ನಂತರ ದರ್ಶನ್ ಅವರು ಗಾಂಧಿನಗರದ ಮಂದಿಗೆ ಸದ್ಯದಲ್ಲೇ ವಿರಾಟ್ ದರ್ಶನ ತೋರಲಿದ್ದಾರೆ.

English summary
Giving relief to the makers of 'Jaggu Dada', actor Darshan, who sustained an injury while at home and is recovering, is back to work. The actor has started dubbing for Viraat and will follow it up with the shooting of Jaggu Dada, which was postponed after his injury.
Please Wait while comments are loading...

Kannada Photos

Go to : More Photos