»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸು ದಾಖಲು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸು ದಾಖಲು

Written by: ಉದಯರವಿ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭಾರಿ ಬಜೆಟ್ ಚಿತ್ರ 'ಐರಾವತ' ಶೂಟಿಂಗ್ ಭರದಿಂದ ಸಾಗುತ್ತಿದೆ. ಆನಂದರಾವ್ ವೃತ್ತದ ಬಳಿ ಇರುವ ಜೆಡಿಎಸ್ ಕಚೇರಿ ಬಳಿ ಚಿತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

ಶೂಟಿಂಗ್ ಸ್ಥಳದಲ್ಲಿ ದರ್ಶನ್ ಅವರ ಐಶಾರಾಮಿ ಆಡಿ ಕ್ಯೂ 7 (KA 51 Z 7999) ಕಾರನ್ನು ಅಲ್ಲೇ ಪಾರ್ಕ್ ಮಾಡಲಾಗಿತ್ತು. ಆದರೆ ಅದು ನೋ ಪಾರ್ಕಿಂಗ್ ಸ್ಥಳವಾದ ಕಾರಣ ಸಂಚಾರಿ ಪೊಲೀಸಲು ರು.100 ದಂಡ ವಿಧಿಸಿದ್ದಾರೆ. ಕಾರು ಗಾಜಿನ ಕಪ್ಪು ಫಿಲ್ಮ್ ತೆಗೆಸದ ಕಾರಣ ಕೇಸು ದಾಖಲಿಸಿಕೊಂಡಿದ್ದಾರೆ. [ಐರಾವತ' ಅರ್ಜುನ್ ಗೆ ಅಮಲು ನೆತ್ತಿಗೇರ್ತಾ?]

Challenging Star Darshan fined for no-parking-zone

ಈ ಹಿಂದೆ ದುನಿಯಾ ವಿಜಯ್ ಮೇಲೆಯೂ ಬನಶಂಕರಿ ಸಂಚಾರ ಠಾಣೆ ಪೊಲೀಸ್ ದಂಡವಿಧಿಸಿದ್ದರು. ಕತ್ತರಿಗುಪ್ಪೆಯಲ್ಲಿರುವ ದುನಿಯಾ ವಿಜಯ್‌ ನಿವಾಸಕ್ಕೆ ತೆರಳಿದ ಪೊಲೀಸರು, ಮನೆ ಮುಂದೆ ನಿಂತಿದ್ದ ರೇಂಜ್‌ ರೋವರ್‌ ಕಾರನ್ನು ಪರಿಶೀಲಿಸಿದರು. [ನಟ ದುನಿಯಾ ವಿಜಯ್‌ಗೆ 100 ರೂ. ದಂಡ!]

ಆಗ ಗಾಜಿನ ಮೇಲೆ ಕಪ್ಪು ಫಿಲ್ಮ್‌ ಅಂಟಿಸಿರುವುದು ಕಂಡುಬಂದಿತು. ಅದನ್ನು ತೆಗೆದುಹಾಕಿದ ಪೊಲೀಸರು, 100 ರೂ. ದಂಡ ವಿಧಿಸಿದರು. ಇದೀಗ ಅದೇ ರೀತಿಯ ಕ್ರಮವನ್ನು ದರ್ಶನ್ ಮೇಲೂ ತೆಗೆದುಕೊಂಡಿದ್ದಾರೆ ಸಂಚಾರಿ ಪೊಲೀಸರು.

ಇನ್ನು ಐರಾವತ ಚಿತ್ರದ ವಿಷಯಕ್ಕೆ ಬರುವುದಾದರೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರಕ್ಕೆ 'ಇಟ್ಸ್ ಎ ಬ್ರ್ಯಾಂಡ್' ಎಂಬ ಟ್ಯಾಗ್ ಲೈನ್ ಇದೆ. ಈ ಚಿತ್ರದ ಬಗ್ಗೆಯೂ ಭಾರಿ ನಿರೀಕ್ಷೆಗಳಿವೆ.

English summary
Challenging Star Darshan was fined Rs 100 for parking his Audi car in a no-parking-zone on Racecourse Road on Monday noon in Bengaluru. The actor parked the car (KA 51 Z 7999) ignoring the "no parking sign board".
Please Wait while comments are loading...

Kannada Photos

Go to : More Photos