»   » 'ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!

'ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!

Posted by:
Subscribe to Filmibeat Kannada

ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ತೆರೆಮೇಲೆ ರಾರಾಜಿಸಲು ಕೆಲವೇ ಗಂಟೆಗಳು ಮಾತ್ರ ಬಾಕಿ. 'ಚಕ್ರವರ್ತಿ' ಚಿತ್ರವನ್ನ ಮೊದಲ ಶೋನಲ್ಲಿಯೇ ಕಣ್ತುಂಬಿಕೊಳ್ಳಬೇಕು ಎಂದು ತುದಿಗಾಲಿನಲ್ಲಿ ನಿಂತಿರುವ ಅಭಿಮಾನಿಗಳ ಸಂಖ್ಯೆಯಂತೂ ಲೆಕ್ಕವೇ ಇಲ್ಲ ಬಿಡಿ.

'ಚಕ್ರವರ್ತಿ' ಸಿನಿಮಾ ಶುರು ಆದಾಗಿನಿಂದಲೂ, ಚಿತ್ರದ ಕಥೆ ಬಗ್ಗೆ 'ಡಿ' ಬಾಸ್ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಕುತೂಹಲ ಇದೆ. ಅದರಲ್ಲೂ ರೆಟ್ರೋ ಸ್ಟೈಲ್ ಸೇರಿದಂತೆ ಮೂರು ಗೆಟಪ್ ನಲ್ಲಿ ದರ್ಶನ್ ಕಾಣಿಸಿಕೊಂಡಿರುವುದರಿಂದ 'ಚಕ್ರವರ್ತಿ' ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ನಿರೀಕ್ಷೆ.[ಅಭಿಮಾನಿಗಳು ಕೊಡುತ್ತಿರುವ ಭಿಕ್ಷೆ ಇದು: 'ದರ್ಶನ್ ಹೀಗೆ ಹೇಳಿದ್ಯಾಕೆ?]


ಇಲ್ಲಿಯವರೆಗೂ 'ಚಕ್ರವರ್ತಿ' ಚಿತ್ರದ ಕಥೆ ಬಗ್ಗೆ ಚಿತ್ರತಂಡ ಎಳ್ಳಷ್ಟೂ ಬಾಯ್ಬಿಟ್ಟಿರಲಿಲ್ಲ. ಆದ್ರೆ ಇವತ್ತು ತಮ್ಮ ಮೊಟ್ಟ ಮೊದಲ ಫೇಸ್ ಬುಕ್ ಲೈವ್ ನಲ್ಲಿ 'ಚಕ್ರವರ್ತಿ' ಕಥೆ ಕುರಿತು ದರ್ಶನ್ ಸುಳಿವು ನೀಡಿದರು. ಹಾಗಾದ್ರೆ, 'ಚಕ್ರವರ್ತಿ' ಚಿತ್ರದ ಕಥೆ ಏನು.? ಉತ್ತರ ತಿಳಿಯಲು ಮುಂದೆ ಓದಿರಿ....


ರೌಡಿಸಂ ಕಥೆ ಇರುವುದು ಕನ್ಫರ್ಮ್

ರೌಡಿಸಂ ಕಥೆ ಇರುವುದು ಕನ್ಫರ್ಮ್

'ಮೆಜೆಸ್ಟಿಕ್', 'ದಾಸ', 'ಕರಿಯ' ಸೇರಿದಂತೆ ಇಲ್ಲಿಯವರೆಗೂ ದರ್ಶನ್ ಅನೇಕ ರೌಡಿಸಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಎಲ್ಲ ಸಿನಿಮಾಗಳಿಗಿಂತ ವಿಶಿಷ್ಟವಾದ ಚಿತ್ರಕಥೆ 'ಚಕ್ರವರ್ತಿ' ಸಿನಿಮಾದಲ್ಲಿದೆ. 'ಚಕ್ರವರ್ತಿ' ಕೂಡ ರೌಡಿಸಂ ಕಥೆ ಹೊಂದಿದೆ. ಆದ್ರೆ, ಅದು ದೇಶದಿಂದ ವಿದೇಶಕ್ಕೆ ಹೋಗುವ ರೌಡಿಸಂ ಕಥೆ ಅಂತ ಸ್ವತಃ ದರ್ಶನ್ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.[ಡೈಲಾಗ್ ಇಲ್ಲದ ಟ್ರೈಲರ್ ಹಿಂದಿನ ಕಥೆ ಬಿಚ್ಚಿಟ್ಟ ದರ್ಶನ್!]


ಯಾರ ಜೀವನ ಚರಿತ್ರೆಯೂ ಅಲ್ಲ.!

ಯಾರ ಜೀವನ ಚರಿತ್ರೆಯೂ ಅಲ್ಲ.!

'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ರವರ ಗೆಟಪ್ ನೋಡಿ, ಇದು 80-90 ದಶಕದಲ್ಲಿ ಬದುಕಿದ್ದ ರೌಡಿಯೊಬ್ಬರ ಕಥೆ ಎಂದು ಅನೇಕರು ಅಂದುಕೊಂಡಿರಬಹುದು. ಆದ್ರೆ, 'ಚಕ್ರವರ್ತಿ' ಯಾರ ಜೀವನ ಚರಿತ್ರೆಯೂ ಅಲ್ಲ. ಪೇಪರ್ ನಲ್ಲಿ ಬಂದ ಕೆಲವರ ಕಥೆಯನ್ನ ಇಟ್ಟುಕೊಂಡು ಲಿಂಕ್ ಮಾಡಿ ಚಿಂತನ್ 'ಚಕ್ರವರ್ತಿ' ಕಥೆ ಹೆಣೆದಿದ್ದಾರೆ ಅಂತ ದರ್ಶನ್ ಹೇಳಿದ್ದಾರೆ.[ದಿನಕರ್ ಆಕ್ಟಿಂಗ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?]


ಮೂರು ವಿಭಿನ್ನ ಗೆಟಪ್

ಮೂರು ವಿಭಿನ್ನ ಗೆಟಪ್

ಒಮ್ಮೆ ಲಾಂಗ್, ಇನ್ನೊಮ್ಮೆ ಗನ್, ಮತ್ತೊಮ್ಮೆ ಸ್ಟೈಲಿಶ್ ಸೂಟ್ ಕೇಸ್ ಹಿಡಿದುಕೊಂಡಿರುವುದರಿಂದ 'ಚಕ್ರವರ್ತಿ' ಬಗ್ಗೆ 'ಡಿ' ಬಾಸ್ ಫ್ಯಾನ್ಸ್ ತಲೆಗೆ ಹುಳ ಬಿಟ್ಟುಕೊಳ್ಳಬಹುದು. ಆದ್ರೆ, 'ಚಕ್ರವರ್ತಿ' ಚಿತ್ರಕಥೆಯಲ್ಲಿ ಬಹುದೊಡ್ಡ ಟ್ವಿಸ್ಟ್ ಇದೆ. ಅದೇನು ಅಂತ ದರ್ಶನ್ ಮಾತಲ್ಲೇ ಓದಿ....


ಸಿನಿಮಾದಲ್ಲಿ ದೇಶ ಭಕ್ತಿ ಇದೆ!

ಸಿನಿಮಾದಲ್ಲಿ ದೇಶ ಭಕ್ತಿ ಇದೆ!

''ಮನೆಗಿಂತ ದೇಶ ದೊಡ್ಡದು. ದೇಶ ಅಂತ ಬಂದಾಗ ಪ್ರತಿಯೊಬ್ಬರು ತೊಡೆ ತಟ್ಟಿ ನಿಲ್ಲುತ್ತಾರೆ. 'ಚಕ್ರವರ್ತಿ' ಚಿತ್ರದಲ್ಲಿ ನಾವು ಹೇಳಲು ಹೊರಟಿರುವುದು ಇದನ್ನೇ.! 'ಚಕ್ರವರ್ತಿ' ಚಿತ್ರದಲ್ಲಿ ರೌಡಿಸಂ ಗಿಂತ ಹೆಚ್ಚಾಗಿ ದೇಶಭಕ್ತಿ ಇದೆ'' ಎನ್ನುತ್ತಾರೆ ನಟ ದರ್ಶನ್.[ಮೊಟ್ಟಮೊದಲ ಬಾರಿಗೆ ಫೇಸ್ ಬುಕ್ ಲೈವ್: ಚಿಂತನ್ ನ ಕೊಂಡಾಡಿದ ದರ್ಶನ್.!]


'ಚಕ್ರವರ್ತಿ' ಚಿತ್ರದ ಪ್ರಿವ್ಯೂ ನೋಡಿಲ್ಲ.!

'ಚಕ್ರವರ್ತಿ' ಚಿತ್ರದ ಪ್ರಿವ್ಯೂ ನೋಡಿಲ್ಲ.!

ನಿಜಹೇಳ್ಬೇಕು ಅಂದ್ರೆ, ದರ್ಶನ್ ರವರು ಇಲ್ಲಿಯವರೆಗೂ 'ಚಕ್ರವರ್ತಿ' ಚಿತ್ರದ ಪ್ರಿವ್ಯೂ ನೋಡಿಲ್ಲ. ಯಾಕಂದ್ರೆ, 'ಚಕ್ರವರ್ತಿ' ಮೇಲೆ ಅವರಿಗೆ ಅಷ್ಟು ವಿಶ್ವಾಸ ಇದೆ. 'ಚಕ್ರವರ್ತಿ' ಚಿತ್ರವನ್ನ ಕಣ್ತುಂಬಿಕೊಂಡ ನಂತರ ಪ್ರೇಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ದರ್ಶನ್ ಕಾತರರಾಗಿದ್ದಾರೆ.


English summary
Challenging Star Darshan gives hint about 'Chakravarthy' story in his Facebook Live.
Please Wait while comments are loading...

Kannada Photos

Go to : More Photos