»   » ದರ್ಶನ್ ಎಷ್ಟು ಉದಾರಿ ಗೊತ್ತಾ? ಆದ್ರೆ ಕಂಡಿಷನ್ಸ್ ಅಪ್ಲೈ!

ದರ್ಶನ್ ಎಷ್ಟು ಉದಾರಿ ಗೊತ್ತಾ? ಆದ್ರೆ ಕಂಡಿಷನ್ಸ್ ಅಪ್ಲೈ!

Written by: ಜೀವನರಸಿಕ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಎಂದೆಲ್ಲ ಕರೆಯಿಸಿಕೊಳ್ಳುವ ದರ್ಶನ್ ತೂಗುದೀಪ ಎಲ್ಲರಿಗೂ ಸುಲಭವಾಗಿ ದಕ್ಕುವ ನಟನಲ್ಲ. ಹಾಗೆ ದಕ್ಕುವ ದರ್ದೂ ಅವರಿಗಿಲ್ಲ. ಯಾಕಂದ್ರೆ ದರ್ಶನ್ ಧಾರಾಳವಾಗಿ, ಸುಲಭವಾಗಿ ಅಷ್ಟು ಎತ್ತರಕ್ಕೆ ಏರಿಲ್ಲ. ಕಷ್ಟಪಟ್ಟಿದ್ದಾರೆ, ನೋವು ಅವಮಾನಗಳನ್ನ ಸಹಿಸಿದ್ದಾರೆ.

ಮಾಧ್ಯಮದವ್ರ ಪ್ರಶ್ನೆಗಳಿಗೆ ಉತ್ತರಿಸೋದ್ರಲ್ಲಿ ದರ್ಶನ್ ಯಾವತ್ತೂ ಅಷ್ಟಕ್ಕಷ್ಟೇ. ಯಾಕೆ ಅಂತೀರಾ? ಸ್ಟಾರ್ ಗಿರಿ ಅನ್ನೋದು ಪುಕ್ಸಟ್ಟೆ ಬಂದಿರೋದಿಲ್ಲ. ಹಾಗಂತ ಅದನ್ನ ಚಾನಲ್ಲೋ ಅಥ್ವಾ ಪೇಪರ್ನ ಸಿನಿಮಾ ವರದಿಗಾರರೋ ಕೊಡೋದಲ್ಲ. ಅದನ್ನ ಅಭಿಮಾನಿಗಳು ಕೊಡೋದು. ಹಾಗಾಗಿ ಅವ್ರ ಕಾಲಿಗೆ ನಮ್ಮ ಚರ್ಮವನ್ನ ಹೊಲೆದು ಚಪ್ಪಲಿ ಮಾಡಿಸಿ ಹಾಕಿದ್ರೂ ಕಡಿಮೇನೇ ಅನ್ನೋದು ಚಾಲೆಂಜಿಂಗ್ ಸ್ಟಾರ್ ಸದಾ ಮುತ್ತಿನಂತೆ ಉದುರಿಸೋ ಮಾತು.

ಮಾಧ್ಯಮದವ್ರ ಜೊತೆ ಸದಾ ಒಂದು ಅಂತರ ಕಾಪಾಡಿಕೊಳ್ಳೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಗೆಳೆಯರ ವಿಷ್ಯದಲ್ಲಿ ಸಖತ್ ಉದಾರಿ. ಆದ್ರೆ ಕಂಡೀಷನ್ಸ್ ಅಪ್ಲೈ. 2001ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ತಮ್ಮ ಚಿತ್ರಯಾನ ಆರಂಭಿಸಿದ ದರ್ಶನ್ ಬಗ್ಗೆ ಯಾಕೆ ಹೀಗೆ ಹೇಳ್ತಿದ್ದೀವಿ ಅನ್ನೋ ಡೀಟೈಲ್ಸ್ ಮುಂದೆ ಇದೆ ಓದ್ತಾ ಹೋಗಿ..

ಅಗ್ರಜನಿಗೆ ದರ್ಶನ್ ಕಂಡೀಷನ್

ಅಗ್ರಜನಿಗೆ ದರ್ಶನ್ ಕಂಡೀಷನ್

ಈ ಹಿಂದೆ ಅಗ್ರಜ ಸಿನಿಮಾದಲ್ಲಿ ಗೆಸ್ಟ್ ಅಪಿಯರನ್ಸ್ನಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಸಿನಿಮಾ 25 ದಿನ ಪೂರೈಸೋದ್ರೊಳಗೆ ಪ್ರಚಾರಕ್ಕಾಗಿ ತನ್ನ ಒಂದು ಫೋಟೋವನ್ನೂ ಬಳಸಿಕೊಳ್ಳದಂತೆ ಕಂಡೀಷನ್ ಹಾಕಿದ್ರು. ಚಿತ್ರತಂಡ ಹಾಗೇ ಮಾಡಿ ಕಂಡೀಷನ್ನಂತೇ ಸಿನಿಮಾ ರಿಲೀಸ್ ಮಾಡ್ತು.

ಶೂಟಿಂಗ್ಗೂ ಅವಕಾಶ ಇರಲಿಲ್ಲ

ಶೂಟಿಂಗ್ಗೂ ಅವಕಾಶ ಇರಲಿಲ್ಲ

ಅಗ್ರಜ ಚಿತ್ರದ ಹಾಡಿನ ಸನ್ನಿವೇಶದಲ್ಲಿ ದರ್ಶನ್ ಎಂಟ್ರಿಯನ್ನ ಶೂಟ್ ಮಾಡೋಕೆ ಬಂದಿದ್ದ ಮಾಧ್ಯಮದವ್ರನ್ನೂ ಕೂಡ ದರ್ಶನ್ ಖಡಾಖಂಡಿತವಾಗಿ ಬೇಡ ಅಂತ ವಾಪಾಸು ಕಳಿಸಿದ್ರು.

25 ದಿನಗಳಾಗವಷ್ಟರಲ್ಲಿ...

25 ದಿನಗಳಾಗವಷ್ಟರಲ್ಲಿ...

ನವರಸನಾಯಕ ಜಗ್ಗೇಶ್ ಅಭಿನಯದ ಚಿತ್ರ ರಿಲೀಸಾಗಿ 25 ದಿನಗಳಾಗೋವಷ್ಟರಲ್ಲಿ ಚಿತ್ರ ಕಲೆಕ್ಷನ್ ಇಲ್ಲದೆ ಥಿಯೇಟರ್ನಿಂದಲೇ ಹೊರಬಿದ್ದಿತ್ತು. ಆಮೇಲೆ ಚಿತ್ರತಂಡ ದರ್ಶನ್ ಪೋಸ್ಟರ್ ಹಾಕಿ ಪ್ರಚಾರ ಮಾಡೋ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗಲಿಲ್ಲ.

ಪ್ರಚಾರ ಬಯಸಲ್ಲ ದರ್ಶನ್

ಪ್ರಚಾರ ಬಯಸಲ್ಲ ದರ್ಶನ್

ತನ್ನ ಸಿನಿಮಾಗೆ ಮಾಧ್ಯಮದವ್ರಿಂದ ಇಲ್ಲದಿದ್ರೆ ಪೋಸ್ಟರ್ಗಳಿಂದ ಪ್ರಚಾರ ಸಿಕ್ಬೇಕು ಅನ್ನೋ ನಿರೀಕ್ಷೆ ದರ್ಶನ್ರಿಗೆ ಖಂಡಿತಾ ಇಲ್ಲ. ಇನ್ನು ಬೇರೆಯವ್ರ ಸಿನಿಮಾದಲ್ಲಿ ಗೆಸ್ಟ್ ಅಪಿಯರನ್ಸ್ ಮಾಡಿ ಅಲ್ಲಿ ಪ್ರಚಾರ ಗಿಟ್ಟಿಸಿಕೊಳ್ಬೇಕು ಅನ್ನೋ ನಿರೀಕ್ಷೆ ಮೊದಲೇ ಇಲ್ಲ. ಆದ್ರೆ ಪಾಪ ಬೇರೆ ಚಿತ್ರಗಳೂ ಗೆಲ್ಲಲಿ ಅನ್ನೋ ದೊಡ್ಡ ಮನಸ್ಸೂ ಇಲ್ವಾ? ಗೊತ್ತಿಲ್ಲ..

ಆದ್ರೆ ಮುಮ್ತಾಜ್ಗೆ ಕಂಡಿಷನ್ ಇಲ್ಲ, ಯಾಕೆ?

ಆದ್ರೆ ಮುಮ್ತಾಜ್ಗೆ ಕಂಡಿಷನ್ ಇಲ್ಲ, ಯಾಕೆ?

ಇತ್ತೀಚೆಗೆ ಹೊರ ಬಿದ್ದಿರೋ ಮಮ್ತಾಜ್ ಟ್ರೈಲರ್ನಲ್ಲಿ ದರ್ಶನ್ರ ಒಂದು ಲುಕ್ ಇದೆ. ಆದ್ರೆ ಇಲ್ಲೂ ಝಲಕ್ ಇದ್ಯಾ ಅಂದ್ರೆ ಇಲ್ಲ. ಆದ್ರೆ ಚಾಲೆಂಜಿಂಗ್ಸ್ಟಾರ್ ಧ್ವನಿ ಟ್ರೈಲರ್ನಲ್ಲಿದೆ. ಅಂದಮೇಲೆ ಮಮ್ತಾಜ್ಗೆ ಕಂಡೀಷನ್ ಇಲ್ಲ ಅಂದ ಹಾಗಾಯ್ತು.

ಜಗ್ಗೇಶ್ಗೆ ಇಲ್ಲ ಧರ್ಮ ಕೀರ್ತಿರಾಜ್‌ಗಿದೆ

ಜಗ್ಗೇಶ್ಗೆ ಇಲ್ಲ ಧರ್ಮ ಕೀರ್ತಿರಾಜ್‌ಗಿದೆ

ಕೀತೀರಾಜ್ ಆದ್ರೆ ವಿಲನ್ ಆಗಿ ಕನ್ನಡ ಚಿತ್ರರಂಗದಲ್ಲಿ ಬೆಳೆದವರು. ತನ್ನ ತಂದೆಯ ಕಾರಣದಿಂದ ವಿಲನ್ಗಳಿಗೆ ಸದಾ ಬೆಂಬಲಿಸೋ ದರ್ಶನ್ ಇಲ್ಲೂ ನವಗ್ರಹದ ನಟ ಸ್ನೇಹಿತ ಧರ್ಮ ಕೀರ್ತಿರಾಜ್ ಬೆಂಬಲಕ್ಕೆ ನಿಂತಿದ್ದಾರೆ.

ಮನಸ್ಸು ದೊಡ್ಡದು ಆದ್ರೆ..

ಮನಸ್ಸು ದೊಡ್ಡದು ಆದ್ರೆ..

ದರ್ಶನ್ರ ಮನಸ್ಸು ದೊಡ್ಡದು ಆದ್ರೆ ಎಲ್ಲರಿಗೂ ಅಲ್ಲ. ಅದು ತನಗೆ ಬೇಕಾದವ್ರಿಗೆ ಮಾತ್ರ ಸೀಮಿತ. ಹಾಗಂತ ಅದು ಅವ್ರವ್ರ ವೈಯಕ್ತಿಕ ವಿಚಾರ. ನಾವದನ್ನ ದೂರ್ತಾನೂ ಇಲ್ಲ. ಆದ್ರೆ ಚಾಲೆಂಜಿಂಗ್ಸ್ಟಾರ್ ಮನಸ್ಸು ಇನ್ನಷ್ಟು ಉದಾರವಾದ್ರೆ ಇನ್ನೊಂದಷ್ಟು ಜನ್ರು ಉದ್ಧಾರವಾಗಬಹುದೇನೋ.

English summary
Challenging star, box office king Darshan is very generous. He is always ready to help the need in Kannada film industry. But, conditions apply. Yes, he does not help without putting a condition to anyone. Why is he like that? He is helping only to some people, why not to many in general?
Please Wait while comments are loading...

Kannada Photos

Go to : More Photos