»   » 'ಚೌಕ' ವಿಜಯಯಾತ್ರೆಗೆ ಚಾಲೆಂಜಿಂಗ್ ಸ್ಟಾರ್ 'ಸಾರಥಿ'

'ಚೌಕ' ವಿಜಯಯಾತ್ರೆಗೆ ಚಾಲೆಂಜಿಂಗ್ ಸ್ಟಾರ್ 'ಸಾರಥಿ'

Posted by:
Subscribe to Filmibeat Kannada

ಮಲ್ಟಿಸ್ಟಾರ್ಸ್ ಗಳ 'ಚೌಕ' ರಾಜ್ಯಾದ್ಯಂತ ಅದ್ದೂರಿಯಾಗಿ ಪ್ರದರ್ಶನವಾಗುತ್ತಿದ್ದು, ನಿರೀಕ್ಷೆಯಂತೆ ಜಯ ಸಿಕ್ಕಿದೆ. ಇನ್ನು ಜಯ ಸಿಕ್ಕಿದ ಮೇಲೆ ಒಂದು ವಿಜಯಯಾತ್ರೆ ಬೇಕು ಅಲ್ಲವೇ...! ಹೌದು, ಕಳೆದ ವಾರದಿಂದ 'ಚೌಕ' ಚಿತ್ರತಂಡ ರಾಜ್ಯಾದ್ಯಂತ ವಿಜಯಯಾತ್ರೆಯನ್ನ ಹಮ್ಮಿಕೊಂಡಿದ್ದು, ಎಲ್ಲ ಚಿತ್ರಮಂದಿರಗಳಿಗೂ ಭೇಟಿ ನೀಡುತ್ತಿದ್ದಾರೆ.[ಹುಬ್ಬಳ್ಳಿಯಲ್ಲಿ 'ಚೌಕ' ಚಿತ್ರದ ವಿಜಯೋತ್ಸವ]

ಇದೀಗ, ಈ ವಿಜಯಯಾತ್ರೆಯಲ್ಲಿ 'ಸಾರಥಿ'ಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದು, 'ಚೌಕ' ವಿಜಯೋತ್ಸವಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ.

'ಚೌಕ' ವಿಜಯಯಾತ್ರೆಯಲ್ಲಿ 'ಸಾರಥಿ'

'ಚೌಕ' ವಿಜಯಯಾತ್ರೆಯಲ್ಲಿ 'ಸಾರಥಿ'

'ಚೌಕ ಸ್ಟಾರ್'ಗಳ ವಿಜಯಯಾತ್ರೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಟ್ಟಿದ್ದು, 'ಚೌಕ' ಪ್ರದರ್ಶನವಾಗಿತ್ತಿರುವ ಚಿತ್ರಮಂದಿರಗಳಿಗೆ 'ಚಕ್ರವರ್ತಿ' ಭೇಟಿ ನೀಡಿದರು.[ಮೊದಲ ಮೂರು ದಿನದಲ್ಲಿ 'ಚೌಕ' ಗಳಿಸಿದ್ದೆಷ್ಟು ಗೊತ್ತಾ?]

ಮೈಸೂರು, ಮಂಡ್ಯದಲ್ಲಿ 'ದರ್ಶನ್'

ಮೈಸೂರು, ಮಂಡ್ಯದಲ್ಲಿ 'ದರ್ಶನ್'

ಫೆಬ್ರವರಿ 20 ರಂದು ಮೈಸೂರು, ಗುಂಡ್ಲುಪೇಟೆ, ಮಂಡ್ಯ, ಮೈಸೂರಿನ ಚಿತ್ರಮಂದಿಗಳಿಗೆ ದರ್ಶನ್ ಭೇಟಿ ನೀಡಿದರು. ಈ ವೇಳೆ ಪ್ರೇಮ್, ಪ್ರಜ್ವಲ್, ವಿಜಯರಾಘವೇಂದ್ರ, ದಿಗಂತ್ ದರ್ಶನ್ ಗೆ ಸಾಥ್ ಕೊಟ್ಟರು.[ಇಂಪ್ರೆಸ್ಸಿವ್ ರಂಜನೆಯ 'ಚೌಕ' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

'ಚೌಕ' ಚಿತ್ರದ ವಿಶೇಷ ಪಾತ್ರದಲ್ಲಿ ದರ್ಶನ್

'ಚೌಕ' ಚಿತ್ರದ ವಿಶೇಷ ಪಾತ್ರದಲ್ಲಿ ದರ್ಶನ್

'ಚೌಕ' ಚಿತ್ರದಲ್ಲಿ ನಟ ದರ್ಶನ್ ವಿಶೇಷ ಪಾತ್ರವನ್ನ ನಿರ್ವಹಿಸಿದ್ದು, ರಾಬರ್ಟ್ ಅವತಾರದಲ್ಲಿ ಅಭಿಮಾನಿಗಳನ್ನ ರಂಜಿಸಿದ್ದಾರೆ.[ಬಾಹುಬಲಿ 'ಕಾಲಕೇಯ'ನ ಜೊತೆ ದರ್ಶನ್ ಕಾಳಗ]

ರಾಜ್ಯಾದ್ಯಂತ 'ಚೌಕ ವಿಜಯಯಾತ್ರೆ'

ರಾಜ್ಯಾದ್ಯಂತ 'ಚೌಕ ವಿಜಯಯಾತ್ರೆ'

ಹುಬ್ಬಳ್ಳಿ, ಹೊಸಪೇಟೆ, ದಾವಣೆಗೆರೆ, ಕೊಪ್ಪಳ, ಚಿತ್ರದುರ್ಗ, ಹಿರಿಯೂರು, ತುಮಕೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ 'ಚೌಕ' ಚಿತ್ರತಂಡ ವಿಜಯಯಾತ್ರೆ ನಡೆಸಿದೆ.

'ಸ್ಟಾರ್'ಗಳು ತಂದ ಯಶಸ್ಸು

'ಸ್ಟಾರ್'ಗಳು ತಂದ ಯಶಸ್ಸು

ಅಂದ್ಹಾಗೆ, 'ಚೌಕ' ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ದ್ವಾರಕೀಶ್ ಅವರು ನಿರ್ಮಾಣ ಮಾಡಿದ್ದರು. ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್, ದಿಗಂತ್, ವಿಜಯರಾಘವೇಂದ್ರ ನಾಲ್ಕು ಜನ ನಾಯಕರಾಗಿ ಅಭಿನಯಿಸಿದ್ದರು. ಐಂದ್ರಿತಾ ರೇ, ಭಾವನಾ, ಪ್ರಿಯಾಮಣಿ, ದೀಪಾ ಸನ್ನಿಧಿ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಇನ್ನು ಚಿಕ್ಕಣ್ಣ, ಮಾನ್ವಿತಾ, ಕೂಡ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಹೀಗಾಗಿ ಇದು ಸ್ಟಾರ್ ಗಳು ತಂದ ಯಶಸ್ಸಾಗಿದೆ.

English summary
Challenging Star Darshan Joins to Chowka Vijaya Yathre and visit Mandya, Mysore, Gundlupet Theaters For 'Chowka' Success. Tarun Sudhir Directorial, Multi Starrer 'Chowka' Movie has Running Successfully in all over Karnataka.
Please Wait while comments are loading...

Kannada Photos

Go to : More Photos