twitter
    For Quick Alerts
    ALLOW NOTIFICATIONS  
    For Daily Alerts

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರ 'ಆಸ್ಫೋಟ'

    By Rajendra
    |

    ಕನ್ನಡ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರಕ್ಕೆ ಮುಹೂರ್ತ ಕೂಡಿಬಂದಿದೆ. ಈ ಬಾರಿ ಸೈನೇಡ್, ಪೊಲೀಸ್ ಕ್ವಾಟ್ರಸ್, ಅಟ್ಟಹಾಸ ರೀತಿಯ ವಿಭಿನ್ನ ಚಿತ್ರಗಳನ್ನು ಕೊಟ್ಟ ಎ.ಎಂ.ಆರ್. ರಮೇಶ್ ಆಕ್ಷನ್ ಕಟ್ ಹೇಳಹೊರಟಿದ್ದಾರೆ.

    ರಮೇಶ್ ಈ ಬಾರಿಯೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಕುರಿತ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ರಾಜೀವ್ ಹಂತಕರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ತಮಿಳುನಾಡಿನ ನಿಷ್ಠಾವಂತ ಪೊಲೀಸ್ ಅಧಿಕಾರಿ ಕಾರ್ತಿಯೇನ್ ಅವರ ಕಥೆಯನ್ನು ತೆರೆಗೆ ತರುತ್ತಿದ್ದಾರೆ.

    ತಮ್ಮ ಚಿತ್ರಕ್ಕೆ 'ಆಸ್ಫೋಟ' ಎಂದು ಹೆಸರಿಟ್ಟಿದ್ದು, ಕಾರ್ತಿಕೇಯನ್ ಪಾತ್ರಕ್ಕೆ ದರ್ಶನ್ ಅವರೇ ಸೂಕ್ತ ಎಂದು ರಮೇಶ್ ಅಂದುಕೊಂಡಿದ್ದಾರೆ. ಈ ಬಗ್ಗೆ ದರ್ಶನ್ ಜೊತೆಗೂ ಮಾತನಾಡಿದ್ದು ಅವರು ಓಕೆ ಎಂದಿದ್ದಾರಂತೆ. ಇನ್ನೇನು ಕಾಲ್ ಶೀಟ್ ಗೆ ಸಹಿ ಹಾಕುವುದೊಂದು ಬಾಕಿ ಇದೆ.

    'ಆಸ್ಫೋಟ' ಚಿತ್ರದ ಕಥೆ ಕೇಳಿ ದರ್ಶನ್ ಸಿಕ್ಕಾಪಟ್ಟೆ ಎಕ್ಸೈಟ್ ಆದರಂತೆ. ಚಿತ್ರದಲ್ಲಿ ಅಭಿನಯಿಸಲು ಅವರು ಓಕೆ ಎಂದಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲವೂ ಖಚಿತವಾಗಲಿದೆ ಎಂದಿದ್ದಾರೆ ರಮೇಶ್.

    1991, ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದ ಸ್ಫೋಟದಲ್ಲಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು. ಈ ಘಟನೆಯಲ್ಲಿ ಆರ್ ಡಿಎಕ್ಸ್ ಬಳಸಲಾಗಿತ್ತು. ಧನು ಮತ್ತವರ ಗ್ಯಾಂಗ್ ನಡೆಸಿದ ಸ್ಫೋಟಕ್ಕೆ 14 ಮಂದಿ ಸ್ಥಳದಲ್ಲೇ ಬೂದಿಯಾಗಿದ್ದರು.

    ಈ ಪ್ರಕರಣದ ತನಿಖೆಯನ್ನು ನಡೆಸಿದ ತಮಿಳುನಾಡು ಐಪಿಎಸ್ ಅಧಿಕಾರಿ ಕಾರ್ತಿಕೇಯನ್ ಶೀಘ್ರದಲ್ಲೇ ಧನು ಮತ್ತವರ ಗ್ಯಾಂಗನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಕಾರ್ತಿಕೇಯನ್ ತಮಿಳುನಾಡಿನಲ್ಲಿ ಮನೆಮಾತಾದರು.

    ಸದ್ಯಕ್ಕೆ ದರ್ಶನ್ ಜೊತೆ ಮಾತುಕತೆ ನಡೆದಿದೆ. ದರ್ಶನ್ ಅವರಿಗೂ ಕಥೆ ಇಷ್ಟವಾಗಿದೆ. ಡೇಟ್ಸ್, ಸಂಭಾವನೆ ವಿಚಾರದ ವ್ಯಾವಹಾರಿಕ ಮಾತುಕಥೆ ನಡೆಯಬೇಕಿದೆ. ಶೀಘ್ರದಲ್ಲೇ ಎಲ್ಲವೂ ಅಂತಿಮವಾಗಲಿದೆ ಎಂಬ ವಿಶ್ವಾರ ರಮೇಶ್ ಅವರದು. ರಮೇಶ್ ಅವರಂತಹ ಪ್ರತಿಭಾವಂತ ನಿರ್ದೇಶಕರ ಜೊತೆ ದರ್ಶನ್ ಅಭಿನಯಿಸಿದರೆ ಚೆನ್ನಾಗಿರುತ್ತದೆ ಎಂಬುದು ಅವರ ಅಭಿಮಾನಿಗಳ ಆಸೆ. (ಏಜೆನ್ಸೀಸ್)

    English summary
    After films like Cyanide and Attahasa dirctor AMR Ramesh all set to direct Challenging Star Darshan. His new flick titled as Aaspota, the story based on the assassination of the late former prime minister, Rajiv Gandhi. 
    Monday, October 21, 2013, 18:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X