»   » ಮೊಟ್ಟಮೊದಲ ಬಾರಿಗೆ ಫೇಸ್ ಬುಕ್ ಲೈವ್: ಚಿಂತನ್ ನ ಕೊಂಡಾಡಿದ ದರ್ಶನ್.!

ಮೊಟ್ಟಮೊದಲ ಬಾರಿಗೆ ಫೇಸ್ ಬುಕ್ ಲೈವ್: ಚಿಂತನ್ ನ ಕೊಂಡಾಡಿದ ದರ್ಶನ್.!

Posted by:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 48ನೇ ಸಿನಿಮಾ 'ಚಕ್ರವರ್ತಿ' ನಾಳೆ (ಏಪ್ರಿಲ್ 14) ತೆರೆಗೆ ಅಪ್ಪಳಿಸಲಿದೆ. ರಾಜ್ಯಾದ್ಯಂತ 'ಚಕ್ರವರ್ತಿ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿರುವಾಗಲೇ ಇಂದು ತಮ್ಮ ಫೇಸ್ ಬುಕ್ ಅಕೌಂಟ್ ಮೂಲಕ ಮೊಟ್ಟ ಮೊದಲ ಸಲ ದರ್ಶನ್ ಲೈವ್ ಗೆ ಬಂದಿದ್ದರು.

ತಮ್ಮ ಚೊಚ್ಚಲ ಫೇಸ್ ಬುಕ್ ಲೈವ್ ನಲ್ಲಿ 'ಚಕ್ರವರ್ತಿ' ಜರ್ನಿ ಬಗ್ಗೆ ಮಾತನಾಡಿದ ದರ್ಶನ್, ನಿರ್ದೇಶಕ ಚಿಂತನ್ ರವರನ್ನ ಕೊಂಡಾಡಿದರು. ಹದಿಮೂರು ವರ್ಷಗಳಿಂದ ಚಿಂತನ್ ಪಟ್ಟಿರುವ ಕಷ್ಟವನ್ನ ವಿವರಿಸಿದರು.[ಡೈಲಾಗ್ ಇಲ್ಲದ ಟ್ರೈಲರ್ ಹಿಂದಿನ ಕಥೆ ಬಿಚ್ಚಿಟ್ಟ ದರ್ಶನ್!]


ಫೇಸ್ ಬುಕ್ ಲೈವ್ ನಲ್ಲಿ ಚಿಂತನ್ ಬಗ್ಗೆ ದರ್ಶನ್ ಏನೆಲ್ಲ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ...


ನಿನ್ನೆ ಚಿಂತನ್ ಹುಟ್ಟುಹಬ್ಬ

ನಿನ್ನೆ ಚಿಂತನ್ ಹುಟ್ಟುಹಬ್ಬ

''ನಿನ್ನೆ (ಏಪ್ರಿಲ್ 12) ಚಿಂತನ್ ರವರ ಹುಟ್ಟುಹಬ್ಬ ಇತ್ತು. ಇವತ್ತು ರಾತ್ರಿ 12 ಗಂಟೆಯಿಂದ ಚಿಂತನ್ ಗೆ ಎಲ್ಲರಿಂದ ಒಳ್ಳೆಯ ಗಿಫ್ಟ್ ಸಿಗುವುದು ಖಚಿತವಾಗಿದೆ. 'ಚಕ್ರವರ್ತಿ' ಬಗ್ಗೆ ಆ ತರಹದ ಪಾಸಿಟೀವ್ ವೈಬ್ಸ್ ನಮಗಿದೆ'' ಎಂದರು ನಟ ದರ್ಶನ್.[ಅಭಿಮಾನಿಗಳು ಕೊಡುತ್ತಿರುವ ಭಿಕ್ಷೆ ಇದು: 'ದರ್ಶನ್ ಹೀಗೆ ಹೇಳಿದ್ಯಾಕೆ?]


ಚಿಂತನ್ ರವರ ಇನ್ನೊಂದು ಹೆಸರೇನು.?

ಚಿಂತನ್ ರವರ ಇನ್ನೊಂದು ಹೆಸರೇನು.?

''ಚಿಂತನ್ ಗೆ ಇನ್ನೊಂದು ಹೆಸರಿದೆ. ಬಹುಶಃ ಇದು ಅನೇಕರಿಗೆ ಗೊತ್ತಿಲ್ಲ. ದಿನಕರ್ ಗೂ ಗೊತ್ತಿಲ್ಲ ಅಂತ ಕಾಣ್ಸುತ್ತೆ. 'ಒಮ್ಮತ್' ಅಂತ ಚಿಂತನ್ ರವರ ಸ್ಕೂಲ್ ಹೆಸರು. ನಿನ್ನೆ ಅದೇ ಹೆಸರು ಕರೆದು ಅವರ ಜೊತೆ ಮಾತನಾಡಿದೆ'' - ದರ್ಶನ್.[ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!]


ಹದಿಮೂರು ವರ್ಷಗಳ ಕಾಲ ಕೆಲಸ

ಹದಿಮೂರು ವರ್ಷಗಳ ಕಾಲ ಕೆಲಸ

''ಹದಿಮೂರು ವರ್ಷಗಳ ಹಿಂದೆಯೇ ಚಿಂತನ್ ಈ ಕಥೆಯನ್ನ ಹೇಳಿದ್ರು. ಅಲ್ಲಿಂದ ಶುರು ಆಗಿ ಇವತ್ತು ಕಾಲ ಕೂಡಿ ಬಂದಿದೆ. ಹದಿಮೂರು ವರ್ಷಗಳಿಂದ ಚಿಂತನ್ 'ಚಕ್ರವರ್ತಿ'ಗಾಗಿ ಕೆಲಸ ಮಾಡಿದ್ದಾರೆ. ಇದನ್ನ ಮಾಡೋಕೆ ಹದಿಮೂರು ವರ್ಷ ಬೇಕಾ ಅಂತ ಯಾರೂ ಹೇಳದ ಹಾಗೆ ಸಿನಿಮಾ ಮಾಡಿದ್ದಾರೆ. ಸಿನಿಮಾದ ಎಲ್ಲ ಕ್ರೆಡಿಟ್ ಚಿಂತನ್ ಹಾಗೂ ಸಿದ್ದಾಂತ್ ಗೆ ಹೋಗಬೇಕು. ಅವರು ಮಾಡಿರುವ ತೇರನ್ನ ನಾವು ಎಳೆದುಕೊಂಡು ಹೋಗಿದ್ದೇವೆ ಅಷ್ಟೇ'' - ದರ್ಶನ್.


ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು

''ಚಕ್ರವರ್ತಿ' ಚಿತ್ರಕ್ಕಾಗಿ ಚಿಂತನ್ ತುಂಬಾ ಕಷ್ಟ ಪಟ್ಟಿದ್ದಾರೆ. ಶೂಟಿಂಗ್ ನಡೆಯುವಾಗ ಬಹುಶಃ ದಿನಕ್ಕೆ ಅವರು ಅರ್ಧ ಅಥವಾ ಒಂದು ಗಂಟೆ ನಿದ್ದೆ ಮಾಡಿದ್ರೆ ಹೆಚ್ಚು. ಅಷ್ಟು ಶ್ರಮ ಪಟ್ಟಿದ್ದಾರೆ 'ಚಕ್ರವರ್ತಿ'ಗೋಸ್ಕರ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತೆ ಅಂತ ನಾವು ಭಾವಿಸಿದ್ದೇವೆ'' - ದರ್ಶನ್


English summary
Challenging Star Darshan praised 'Chakravarthy' director Chintan.
Please Wait while comments are loading...

Kannada Photos

Go to : More Photos