»   » ಕರಾವಳಿಯ ದರ್ಶನ್ ಅಭಿಮಾನಿಗಳಿಗೆ ಭಾರಿ ನಿರಾಸೆ

ಕರಾವಳಿಯ ದರ್ಶನ್ ಅಭಿಮಾನಿಗಳಿಗೆ ಭಾರಿ ನಿರಾಸೆ

Posted by:
Subscribe to Filmibeat Kannada

ಸುಮಾರು 3 ವರ್ಷಗಳ ಹಿಂದೆ ಸೆಟ್ಟೇರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರೀಕ್ಷಿತ ಸಿನಿಮಾ 'ವಿರಾಟ್' ಇಂದು (ಜನವರಿ 29) ಇಡೀ ಕರ್ನಾಟಕದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

ವಿಷಯ ಏನಪ್ಪಾ ಅಂದ್ರೆ ದರ್ಶನ್ ಅವರ 'ವಿರಾಟ್' ದರ್ಶನ ಇಡೀ ಬೆಂಗಳೂರಿಗರಿಗೆ ಏನೋ ಆಗ್ತಿದೆ. ಆದರೆ ಕರಾವಳಿ ಪ್ರದೇಶದ ಮಂಗಳೂರಿನ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗಿದೆ.['ವಿರಾಟ್' ವಿಮರ್ಶೆ; ಕಡ್ಡಾಯವಾಗಿ ದರ್ಶನ್ ಅಭಿಮಾನಿಗಳಿಗೆ ಮಾತ್ರ]

ಹೌದು ನಿರ್ದೇಶಕ ಹೆಚ್.ವಾಸು ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ಸಿನಿಮಾ ಇಂದು ಮಂಗಳೂರಿನಲ್ಲಿ ಬಿಡುಗಡೆ ಆಗಿಲ್ಲ. ಕೆಲವು ತಾಂತ್ರಿಕ ದೋಷಗಳಿಂದ ಕರಾವಳಿ ಪ್ರದೇಶದಲ್ಲಿ ಇಂದು ಸಿನಿಮಾ ಪ್ರದರ್ಶನಗೊಂಡಿಲ್ಲ.[ದರ್ಶನ್ 'ವಿರಾಟ್' ದರ್ಶನ ಹೇಗಿದೆ? ಟ್ವಿಟ್ಟರ್ ನಲ್ಲಿ ವಿಮರ್ಶೆ]

ಆನ್ ಲೈನ್ ಮೂಲಕ 'ವಿರಾಟ್' ಚಿತ್ರದ ಕಂಟೆಂಟ್ ಗಳು ಮಂಗಳೂರಿನ ಚಿತ್ರಮಂದಿರಗಳಿಗೆ ತಲುಪಬೇಕಿತ್ತು. ಆದರೆ ಕೆಲವಾರು ತಾಂತ್ರಿಕ ದೋಷಗಳಿಂದ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.

ಆದರೆ ಒಂದೆಡೆ ಪೇಮೆಂಟ್ ವಿಳಂಬದಿಂದಾಗಿ ಈ ತೊಂದರೆ ಆಗಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಯಾವುದು ನಿಜ ಯಾವುದು ಸುಳ್ಳು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ ಒಟ್ನಲ್ಲಿ ಮಂಗಳೂರಲ್ಲಿ ಈ ದಿನ ದರ್ಶನ್ ಅಭಿಮಾನಿಗಳಿಗೆ 'ವಿರಾಟ್' ದರ್ಶನ ಆಗಿಲ್ಲ.

English summary
Kannada actor Darshan's Kannada Movie 'Viraat' is not release in Mangaluru. Kannada actor Darshan, Actress Isha Chawla, Actress Chaitra Chandranath, Actress Vidisha Shrivastav in the lead role. The movie is directed by H Vasu.
Please Wait while comments are loading...

Kannada Photos

Go to : More Photos