»   » ಡಬ್ಬಿಂಗ್ ವಿರುದ್ಧ ಬೀದಿಗಿಳಿದು ಡಿಚ್ಚಿ ಕೊಟ್ಟ 'ದಾಸ' ದರ್ಶನ್.!

ಡಬ್ಬಿಂಗ್ ವಿರುದ್ಧ ಬೀದಿಗಿಳಿದು ಡಿಚ್ಚಿ ಕೊಟ್ಟ 'ದಾಸ' ದರ್ಶನ್.!

Posted by:
Subscribe to Filmibeat Kannada

ಸದಭಿರುಚಿಯ ಚಿತ್ರಗಳಿಂದ... ಬ್ಲಾಕ್ ಬಸ್ಟರ್ ಮೂವಿಗಳಿಂದ ಸದ್ದು ಮಾಡ್ಬೇಕಿದ್ದ ಕನ್ನಡ ಚಿತ್ರರಂಗ ಇದೀಗ ಸುದ್ದಿ ಮಾಡ್ತಿರೋದು ಕೇವಲ 'ಡಬ್ಬಿಂಗ್' ವಿವಾದದಿಂದ. ಕನ್ನಡ ಚಿತ್ರರಂಗವನ್ನ ಬಿಟ್ಟೂಬಿಡದೆ ಕಾಡುತ್ತಿರುವ 'ಡಬ್ಬಿಂಗ್' ವಿರೋಧಿಸಿ ಇಂದು ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೂ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಲಾವಿದರು ಹಾಗೂ ತಂತ್ರಜ್ಞರು ಬೃಹತ್ ಜಾಥಾ ನಡೆಸಿದರು. ತದನಂತರ ಫ್ರೀಡಂ ಪಾರ್ಕ್ ನಲ್ಲಿ ಡಬ್ಬಿಂಗ್ ವಿರುದ್ಧ ಕಲಾವಿದರು ಗುಡುಗಲು ಆರಂಭಿಸಿದರು.['ಅಯ್ಯಯ್ಯೋ... ಅನ್ಯಾಯ' ಎಂದು ಡಬ್ಬಿಂಗ್ ವಿರುದ್ಧ ಕೂಗಿದ ಕನ್ನಡ ತಾರೆಯರು]

ಇನ್ನೂ 'ದಾಸ' ದರ್ಶನ್ ಕೂಡ ಡಬ್ಬಿಂಗ್ ಪರ ದನಿ ಎತ್ತಿದವರಿಗೆ ಡಿಚ್ಚಿ ಕೊಟ್ಟಿದ್ದಾರೆ. ಡಬ್ಬಿಂಗ್ ಪ್ರತಿಭಟನೆಯಲ್ಲಿ ದರ್ಶನ್ ಏನು ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ....

ಕನ್ನಡ ಉಳಿಸಿ-ಬೆಳೆಸುತ್ತಿರುವ ಕನ್ನಡಿಗರಿಗೆ ನಮಸ್ಕಾರಗಳು...

ಕನ್ನಡ ಉಳಿಸಿ-ಬೆಳೆಸುತ್ತಿರುವ ಕನ್ನಡಿಗರಿಗೆ ನಮಸ್ಕಾರಗಳು...

''ತಂದೆ-ತಾಯಿ ಸಮಾನರಾದ ಎಲ್ಲ ಗುರು-ಹಿರಿಯರಿಗೂ ನನ್ನ ನಮಸ್ಕಾರಗಳು.. ಅನ್ನ ಹಾಕಿದ ಎಲ್ಲ ಕನ್ನಡ... ಉಳಿಸೋಕೆ, ಬೆಳೆಸೋಕೆ ಪ್ರಯತ್ನ ಪಡುತ್ತಿರುವ ಕನ್ನಡಿಗರಿಗೆ ನನ್ನ ನಮಸ್ಕಾರಗಳು...'' ಅಂತ ಹೇಳಿ ಡಬ್ಬಿಂಗ್ ವಿರುದ್ಧ ಮಾತನಾಡಲು ನಟ ದರ್ಶನ್ ಶುರು ಮಾಡಿದರು.[ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್]

ನಾನು ಡಬ್ಬಿಂಗ್ ವಿರೋಧಿ

ನಾನು ಡಬ್ಬಿಂಗ್ ವಿರೋಧಿ

''ಖಂಡಿತ ನಾನು ಡಬ್ಬಿಂಗ್ ವಿರೋಧಿ. ಎಲ್ಲರೂ ದನಿ ಎತ್ತುತ್ತಿದ್ದಾರೆ. ಇದಕ್ಕೊಂದು ಸಣ್ಣ ಉದಾಹರಣೆ ಹೇಳ್ತೀನಿ. ಪಕ್ಕದ ಯಾವುದೇ ರಾಜ್ಯ ತೆಗೆದುಕೊಳ್ಳಿ. ಅದರ ಅಷ್ಟೂ ಊಟ ನಮ್ಮ ಕರ್ನಾಟಕದಲ್ಲಿ ಸಿಗುತ್ತೆ. ಅಲ್ಲಿಂದ ಇಲ್ಲಿಗೆ ಬಂದವರಿಗೆಲ್ಲ ಇಲ್ಲಿ ಊಟ ಸಿಗುತ್ತೆ. ಆದ್ರೆ, ಇಲ್ಲಿಂದ ಹೋಗಿ ಪಕ್ಕದ ರಾಜ್ಯದಲ್ಲಿ ಮುದ್ದೆ ಉಪ್ಪು ಸಾರು ಕೇಳಿದರೆ, ಯಾರೂ ಕೊಡಲ್ಲ. ಹಾಗಾದ್ರೆ, ಇಲ್ಲಿರುವವರು ಎಲ್ಲಿಗೆ ಹೋಗೋಣ.?'' - ದರ್ಶನ್, ನಟ ['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]

ನಿಮ್ಮ ಬೆಂಬಲ ನಮಗೆ ಇರಲಿ

ನಿಮ್ಮ ಬೆಂಬಲ ನಮಗೆ ಇರಲಿ

''ನಾವು ಕಲಾವಿದರು ಸ್ವಲ್ಪ ಜನ ಅಷ್ಟೇ ಇರುವುದು. ಹೀಗಾಗಿ ಕನ್ನಡದ ಮೇಲೆ, ಕನ್ನಡ ಚಿತ್ರರಂಗದ ಮೇಲೆ ನಿಮ್ಮ ಸಾಥ್ ಸದಾ ಇರಲಿ'' - ದರ್ಶನ್, ನಟ

ನನ್ನ ಸಿನಿಮಾ ನಾನೇ ಐದು ನಿಮಿಷ ನೋಡಲು ಆಗಲಿಲ್ಲ

ನನ್ನ ಸಿನಿಮಾ ನಾನೇ ಐದು ನಿಮಿಷ ನೋಡಲು ಆಗಲಿಲ್ಲ

''ಪ್ರತಿಯೊಬ್ಬರ ವಾಯ್ಸ್ ಕೂಡ ಎಲ್ಲರಿಗೂ ಗೊತ್ತಿದೆ. ಇದಕ್ಕೊಂದು ಉದಾಹರಣೆ ನಾನೇ ಹೇಳ್ತೀನಿ. ನನ್ನ ಸಿನಿಮಾ ಹಿಂದಿಯಲ್ಲಿ ಡಬ್ ಆಗಿರುವುದನ್ನ ನನಗೆ ಐದು ನಿಮಿಷ ನೋಡಲು ಆಗಲಿಲ್ಲ. ಅಷ್ಟು ಬೇಗ ಆಫ್ ಮಾಡಿಬಿಟ್ಟೆ. ಹೀಗಾಗಿ ಪ್ರತಿಯೊಂದು ಸಿನಿಮಾ ಕೂಡ ಆಯಾ ಭಾಷೆಯಲ್ಲಿ ನೋಡಿದ್ರೆ ಚೆಂದ'' - ದರ್ಶನ್, ನಟ

ಯಾರದ್ದೋ ಮಗುವಿಗೆ ತಂದೆ ಯಾಕಾಗಬೇಕು.?

ಯಾರದ್ದೋ ಮಗುವಿಗೆ ತಂದೆ ಯಾಕಾಗಬೇಕು.?

''ಇನ್ಯಾರೋ ಮಗುಗೆ ಇನ್ಯಾರೋ ತಂದೆ ಆದಂತೆ ಇರುತ್ತದೆ. ಹೀಗಾಗಿ ಡಬ್ಬಿಂಗ್ ಬೇಡ. ನಿಮ್ಮ ಆಶೀರ್ವಾದ ಬೆಂಬಲ ನಮ್ಮ ಮೇಲೆ ಸದಾ ಇರಲಿ ಅಂತ ಕೇಳಿಕೊಳ್ಳುತ್ತೇನೆ'' ಎಂದರು ನಟ ದರ್ಶನ್

English summary
Challenging Star Darshan speaks against Dubbing in Sandalwood.
Please Wait while comments are loading...

Kannada Photos

Go to : More Photos