»   » ಚಾಮುಂಡಿ ಬೆಟ್ಟದಲ್ಲಿ ದರ್ಶನ್ : ಅಭಿಮಾನಿಗಳಲ್ಲಿ ಸಂಚಲನ

ಚಾಮುಂಡಿ ಬೆಟ್ಟದಲ್ಲಿ ದರ್ಶನ್ : ಅಭಿಮಾನಿಗಳಲ್ಲಿ ಸಂಚಲನ

Posted by:
Subscribe to Filmibeat Kannada

ನಾಡಿನ ಅಧಿದೇವತೆ ಮೈಸೂರು ಚಾಮುಂಡೇಶ್ವರಿ ತಾಯಿಯ ದರುಶನ ಪಡೆಯಲು ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಷಾಡ ಶುಕ್ರವಾರ ಕಮ್ ಗುರುಪೂರ್ಣಿಮಾದ ದಿನದಂದು (ಜು 31) ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು.

ಎಷ್ಟೇ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರೂ ಮೈಸೂರು ಮೂಲದವರೇ ಆದ ದರ್ಶನ್, ಆಷಾಡ ಶುಕ್ರವಾರದಂದು ತಾಯಿಯ ದರ್ಶನ ಪಡೆಯುವುದನ್ನು ತಪ್ಪಿಸುವುದಿಲ್ಲ.

ದರ್ಶನ್ ದೇವಾಲಯಕ್ಕೆ ಬಂದಿರುವ ವಿಚಾರವನ್ನು ಅರಿತ ಅಭಿಮಾನಿಗಳು ದೇವಸ್ಥಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.

Challening Star Darshan visited Chamundeshwari Temple, Mysuru

ತಾಯಿಯ ದರ್ಶನ ಪಡೆದು ದರ್ಶನ್ ಹೊರಬರುತ್ತಿದ್ದಂತೇ, ಅಭಿಮಾನಿಗಳು ಜಯಕಾರ, ಶಿಳ್ಳೆ ಮುಗಿಲು ಮುಟ್ಟಿತ್ತು. ದರ್ಶನ್ ಕೈಕುಲುಕುಲು ಅಭಿಮಾನಿಗಳು ಮುಗಿಬೀಳುತ್ತಿದ್ದಂತೇ, ಅಲ್ಲಿ ಸ್ವಲ್ಪ ಸಮಯ ಗೊಂದಲದ ಸನ್ನಿವೇಶ ಉಂಟಾಗಿತ್ತು.

ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಅಭಿಮಾನಿಗಳನ್ನು ಹರಸಾಹಸ ಪಟ್ಟು ನಿಯಂತ್ರಿಸಿದರು. ಅಭಿಮಾನಿಗಳಿಗೆಲ್ಲಾ ವಿಷ್ ಮಾಡಿ ಬಿಳಿ ಆಡಿ ಕಾರಿನಲ್ಲಿ ಬಂದಿದ್ದ ದರ್ಶನ್, ದೇವಸ್ಥಾನದಿಂದ ನಿರ್ಗಮಿಸಿದರು.

English summary
Challenging Star Darshan visited Chamundeshwari Temple, Mysuru on auspicious day of Ashadha Shukravara (Jul 31). Fans are delighted.
Please Wait while comments are loading...

Kannada Photos

Go to : More Photos