twitter
    For Quick Alerts
    ALLOW NOTIFICATIONS  
    For Daily Alerts

    ಡಿ ರಾಜೇಂದ್ರ ಬಾಬು ನಿಧನ: ಶಿವಣ್ಣ ಚಿತ್ರಕ್ಕೆ ಹೊಸ ಸಾರಥಿ

    |

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸಂಸದೆ ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ ಆರ್ಯನ್ ಚಿತ್ರ ಸೆಟ್ಟೇರಿದಾಗಿನಿಂದ ಸದಾ ಸುದ್ದಿಯಲ್ಲಿರುವ ಚಿತ್ರ. ಅಕ್ಟೋಬರ್ 2012ರಿಂದ ಚಿತ್ರೀಕರಣ ಆರಂಭವಾಗಿದ್ದ ಈ ಚಿತ್ರಕ್ಕೆ ನಂತರದ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗಿ ಚಿತ್ರೀಕರಣ ಅರ್ಧದಲ್ಲೇ ನಿಂತಿತ್ತು.

    ಈ ತೊಂದರೆಯಿಂದ ಹೊರಬಂದ ನಂತರ ನಿರ್ಮಾಪಕರಿಗೆ ರಮ್ಯಾ ಕಾಲ್ ಶೀಟ್ ಸಿಕ್ಕಿರಲಿಲ್ಲ. ರಮ್ಯಾ, ಶಿವಣ್ಣ ಕಾಲ್ ಶೀಟ್ ಸಿಕ್ಕಿದ ಮೇಲೆ ನವೆಂಬರ್ ಐದರಿಂದ ಹಾಡಿನ ಚಿತ್ರೀಕರಣ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಿಗದಿಯಾಗಿತ್ತು.

    ಆದರೆ ಚಿತ್ರತಂಡಕ್ಕೆ ಮತ್ತೊಂದು ಆಘಾತ ಕಾದಿತ್ತು. ಅದು ಚಿತ್ರದ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಅಕಾಲಿಕ ಮರಣ. ಬಾಬು ನಿಧನದಿಂದ ಇಡೀ ಚಿತ್ರತಂಡ ತಬ್ಬಿಬ್ಬಾಗಿತ್ತು. (ನಿರ್ದೇಶಕ ಡಿ. ರಾಜೇಂದ್ರ ಬಾಬು ವಿಧಿವಶ)

    ಚಿತ್ರದ ಶೂಟಿಂಗ್ ಬಹುಪಾಲು ಮುಗಿದಿತ್ತು. ಹಾಡಿನ ಚಿತ್ರೀಕರಣವೊಂದೇ ಬಾಕಿ ಇತ್ತು. ನಾಯಕ ಮತ್ತು ನಾಯಕಿಯ ಕಾಲ್ ಶೀಟ್ ಕೂಡಾ ಸಿಕ್ಕಿತ್ತು. ಆದರೆ ಬಾಬು ನಿಧನದಿಂದ ಚಿತ್ರೀಕರಣ ನಿಲ್ಲಿಸಿದ್ಡೇವೆ. ರಾಜೇಂದ್ರ ಬಾಬು ಅವರು ಬಹಳಷ್ಟು ಇಷ್ಟಪಟ್ಟು ಮಾಡುತ್ತಿದ್ದ ಸಿನಿಮಾವಿದು. ಅವರ ಜಾಗಕ್ಕೀಗ ಸೂಕ್ತ ನಿರ್ದೇಶಕರ ಹುಡುಕಾಟದಲ್ಲಿದ್ದೇವೆ, ಶಿವಣ್ಣ ಕೂಡಾ ಇದಕ್ಕೆ ಸಹಕರಿಸುತ್ತಿದ್ದಾರೆಂದು ನಿರ್ಮಾಪಕ ಡಿ ಕಮರ್ ಹೇಳಿದ್ದರು.

    ಯಾರು ಆರ್ಯನ್ ಚಿತ್ರಕ್ಕೆ ಹೊಸ ಸಾರಥಿ? ಸ್ಲೈಡಿನಲ್ಲಿ..

    ಆರ್ಯನ್ ಚಿತ್ರದ ಗ್ಯಾಲರಿ

    ಶಿವರಾಜ್ ಕುಮಾರ್

    ಶಿವರಾಜ್ ಕುಮಾರ್

    ಶಿವರಾಜ್ ಕುಮಾರ್, ರಮ್ಯಾ, ಶರತ್ ಕುಮಾರ್, ಬುಲೆಟ್ ಪ್ರಕಾಶ್, ವಿನಯ್ ಪ್ರಸಾದ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಡಿ ಕಮರ್ ಮತ್ತು ನರ್ಗೀಸ್ ಬಾಬು ಚಿತ್ರದ ನಿರ್ಮಾಪಕರು.

    ಹೊಸ ನಿರ್ದೇಶಕ

    ಹೊಸ ನಿರ್ದೇಶಕ

    ಡಿ ರಾಜೇಂದ್ರ ಬಾಬು ಜಾಗಕ್ಕೆ, ನಿರ್ಮಾಪಕರು ಚಿ. ಗುರುದತ್ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಗುರುದತ್ ಈ ಹಿಂದೆ ಮೂರು ಚಿತ್ರವನ್ನು ನಿರ್ದೇಶಿಸಿದ್ದರು. ನಿರ್ದೇಶಕನ ಆಯ್ಕೆಗೆ ಬಹಳ ಕಸರತ್ತು ನಡೆಸಿದ ನಂತರ ನಿರ್ಮಾಪಕರು ಗುರುದತ್ ಹೆಸರನ್ನು ಅಂತಿಮಗೊಳಿಸಿದ್ದಾರೆ.

    ಗುರುದತ್

    ಗುರುದತ್

    ಚಿ ಉದಯಶಂಕರ್ ಅವರ ಪುತ್ರ ಚಿ ಗುರುದತ್ 1995ರಲ್ಲಿ ಸಮರ ಚಿತ್ರವನ್ನು ನಿರ್ದೇಶಿಸಿದ್ದರು. ಶಿವರಾಜ್ ಕುಮಾರ್, ದೇವರಾಜ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಇದು ಗುರುದತ್ ಅವರ ಚೊಚ್ಚಲ ನಿರ್ದೇಶನದ ಚಿತ್ರ.

    ದತ್ತ

    ದತ್ತ

    ಚಾಲೆಂಜಿಂಗ್ ಸ್ಟಾರ್ ದರ್ಶನ್, ರಮ್ಯಾ, ಕೋಮಲ್, ಶ್ರೀನಾಥ್, ವಿನಯಾ ಪ್ರಸಾದ್, ಅವಿನಾಶ್ ಪ್ರಮುಖ ತಾರಾಗಣದಲ್ಲಿದ್ದ ದತ್ತ ಚಿತ್ರವನ್ನು ಗುರುದತ್ ನಿರ್ದೇಶಿಸಿ, ನಿರ್ಮಿಸಿದ್ದರು. ಜನಾರ್ಧನ ಮಹರ್ಷಿ ಕಥಾದಾರಿತ ಈ ಚಿತ್ರಕ್ಕೆ ಆರ್ ಪಿ ಪಟ್ನಾಯಕ್ ಸಂಗೀತ ನೀಡಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು.

    ಕಾಮಣ್ಣನ ಮಕ್ಕಳು

    ಕಾಮಣ್ಣನ ಮಕ್ಕಳು

    2008ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನೂ ಗುರುದತ್ ನಿರ್ದೇಶಿಸಿದ್ದರು. ಸುದೀಪ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ದೀಪು, ಸಾಧು ಕೋಕಿಲ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಮಲಯಾಳಂ ಚಿತ್ರದ ರಿಮೇಕ್.

    English summary
    Chi Gurudat is the new director for Shivaraj Kumar starer Aryan. D Rajendra Babu was the director but due to his sudden demise, producer selected Gurudat as a director. Shivaraj Kumar and Ramya in the lead role of this movie. 
    Friday, November 15, 2013, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X