»   » 'ಚಿಕ್ಕಣ್ಣ ನನಗೆ ಸಹೋದರನಿದ್ದಂತೆ': ಎಂದ ರಾಕಿಂಗ್ ಸ್ಟಾರ್!

'ಚಿಕ್ಕಣ್ಣ ನನಗೆ ಸಹೋದರನಿದ್ದಂತೆ': ಎಂದ ರಾಕಿಂಗ್ ಸ್ಟಾರ್!

Posted by:
Subscribe to Filmibeat Kannada

ಚಂದನವನದ ಕಾಮಿಡಿ ನಟರಲ್ಲಿ ಸದ್ಯಕ್ಕೆ ಲೀಡ್ ನಲ್ಲಿರುವ ನಟನೆಂದರೆ ಅದು ಚಿಕ್ಕಣ್ಣ. ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರಲ್ಲಿ ಚಿಕ್ಕಣ್ಣ ಕೂಡ ಒಬ್ಬರು.

ಅಂದಹಾಗೆ ಚಿಕ್ಕಣ್ಣ ಅವರು ಫುಲ್ ಖುಷಿ ಮೂಡಿನಲ್ಲಿದ್ದಾರೆ. ಯಾಕಂತೀರಾ?, ಯಾಕೆಂದರೆ ತಮ್ಮ ಅಭಿನಯದ ಐವತ್ತನೇ ಚಿತ್ರ ಬಿಡುಗಡೆ ಹಂತದಲ್ಲಿದ್ದು, ಅದು ತಮ್ಮ ಆಪ್ತ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ನಟಿಸಿರುವ 'ಮಾಸ್ಟರ್ ಪೀಸ್' ತೆರೆ ಕಾಣುತ್ತಿರುವುದಕ್ಕೆ ಖುಷ್ ಆಗಿಬಿಟ್ಟಿದ್ದಾರೆ.[ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್]

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಿಕ್ಕಣ್ಣ ಅವರು ರಾಕಿಂಗ್ ಸ್ಟಾರ್ ಯಶ್ ಅವರ 'ಕಿರಾತಕ' ಚಿತ್ರದ ಮೂಲಕ ಪ್ರಪ್ರಥಮ ಬಾರಿಗೆ ಬೆಳ್ಳಿ ತೆರೆಗೆ ಕಾಲಿಟ್ಟರು. ತದನಂತರ ತಿರುಗಿ ನೋಡದ ಚಿಕ್ಕಣ್ಣ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಜೊತೆಗೆ ಮೋಸ್ಟ್ ಬ್ಯುಸಿಯೆಸ್ಟ್ ನಟ.

ನಟಿಸಿದ ಮೊದಲ ಸಿನಿಮಾವೇ ಭಾರಿ ಹೆಸರನ್ನು ತಂದುಕೊಟ್ಟಿದ್ದು, 'ಕಿರಾತಕ' ಸಿನಿಮಾದಲ್ಲಿ ಚಿಕ್ಕಣ್ಣ ಅವರು ಯಶ್ ಅವರ ಗೆಳೆಯನ ಪಾತ್ರದಲ್ಲಿ ಮಿಂಚಿದ್ದರು.

ಅಮೃತ ಮಹೋತ್ಸವದ ವೇಳೆ ಯಶ್ ಅವರನ್ನು ನೋಡಿದ್ದರಾದರೂ ಚಿಕ್ಕಣ್ಣ ಅವರನ್ನು ಮಾತಡಿಸಿರಲಿಲ್ಲವಂತೆ. ಕೆಲದಿನಗಳ ನಂತರ 'ಕಿರಾತಕ' ಚಿತ್ರತಂಡದಿಂದ ಚಿಕ್ಕಣ್ಣ ಅವರಿಗೆ ನಟಿಸಲು ಆಫರ್ ಬಂದು ಅದರಂತೆ ಯಶ್ ಅವರ ಜೊತೆ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಶಿವಣ್ಣ ಅವರು ಒಂಥರಾ 'ಬುಲೆಟ್' ಇದ್ದ ಹಾಗೆ ಎಂದವರು ಯಾರು?]

ಇನ್ನು ಕಾಮಿಡಿ ನಟ ಚಿಕ್ಕಣ್ಣ ಅವರು ತೆರೆಯ ಮೇಲೆ ಮಾತ್ರವಲ್ಲದೇ ಯಶ್ ಅವರ ನಿಜ ಜೀವನದಲ್ಲೂ ಆಪ್ತ ಮಿತ್ರನಂತೆ. 'ಚಿಕ್ಕಣ್ಣ ನನ್ನ ಪ್ರೀತಿಯ ಸಹೋದರ ಇದ್ದ ಹಾಗೆ, ಕಳೆದ ನಾಲ್ಕು ವರ್ಷಗಳಿಂದ ನಾವು ಜೊತೆಯಾಗಿಯೇ ಇದ್ದೇವೆ, ಆತ ನನ್ನ ಕುಟುಂಬದ ಸದಸ್ಯನಾಗಿ ಹೋಗಿದ್ದಾನೆ. ಆತ ಒಬ್ಬ ಉತ್ತಮ ನಟ ಎಂದು ಯಶ್ ಅವರು ತಿಳಿಸಿದ್ದಾರೆ.

ಇದಕ್ಕೆ ಚಿಕ್ಕಣ್ಣ ಕೂಡ ಯಶ್ ನಂತಹ ಗೆಳೆಯ ಸಿಕ್ಕಿದ್ದು, ಅತ್ಯಂತ ಖುಷಿಯ ಸಂಗತಿ ಎಂದಿದ್ದಾರೆ.

English summary
Kannada Comedy Actor Chikkanna is like my brother says Kannada Actor Yash.
Please Wait while comments are loading...

Kannada Photos

Go to : More Photos