»   » ಚಿರಂಜೀವಿ ಸರ್ಜಾ - ಚೈತನ್ಯ 'ಪರಾರಿ'.! ಎಲ್ಲಿದ್ದಾರೋ? ಏನ್ಮಾಡ್ತಿದ್ದಾರೋ?

ಚಿರಂಜೀವಿ ಸರ್ಜಾ - ಚೈತನ್ಯ 'ಪರಾರಿ'.! ಎಲ್ಲಿದ್ದಾರೋ? ಏನ್ಮಾಡ್ತಿದ್ದಾರೋ?

Posted by:
Subscribe to Filmibeat Kannada

ಕಳೆದ ವರ್ಷವಷ್ಟೇ ಚಿರಂಜೀವಿ ಸರ್ಜಾ ಹಾಗೂ ಕೆ.ಎಂ.ಚೈತನ್ಯ ಕಾಂಬಿನೇಷನ್ ನಲ್ಲಿ 'ಆಟಗಾರ' ಸಿನಿಮಾ ತೆರೆಗೆ ಬಂದಿತ್ತು. ಅದಾದ ಬಳಿಕ 'ರಾಮ್ ಲೀಲಾ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮಿಂಚಿದ್ರು. ಅಷ್ಟು ಬಿಟ್ಟರೆ, ಚಿರಂಜೀವಿ ಸರ್ಜಾ ಗಾಂಧಿನಗರದಲ್ಲಿ ಹೆಚ್ಚು ಸುದ್ದಿ ಮಾಡ್ಲಿಲ್ಲ. ಇನ್ನೂ 'ಆಟಗಾರ' ನಂತರ ಕೆ.ಎಂ.ಚೈತನ್ಯ ಕೂಡ ಚಂದನವನದಲ್ಲಿ ಪತ್ತೆ ಆಗಿಲ್ಲ. ಈಗ ಇವರಿಬ್ಬರು ಏನ್ಮಾಡ್ತಿದ್ದಾರೆ ಅಂದ್ರೆ, ಇಂಗ್ಲೆಂಡ್ ಗೆ 'ಪರಾರಿ' ಆಗಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.! [ಚಿತ್ರ ವಿಮರ್ಶೆ: 'ಆಟಗಾರ'ನ ಆಟ, ಓಟ ಜೋರಾಗಿದೆ ಗುರು]

chiranjeevi-sarja-and-km-chaitanya-are-in-england-busy-shooting-021430

ಹಾಗಾದ್ರೆ, ಇಂಗ್ಲೆಂಡ್ ನಲ್ಲಿ ನಿರ್ದೇಶಕ ಕೆ.ಎಂ.ಚೈತನ್ಯ ಹಾಗೂ ಚಿರಂಜೀವಿ ಸರ್ಜಾ ಹಾಲಿಡೇ ಎಂಜಾಯ್ ಮಾಡ್ತಿದ್ದಾರಾ? ಎಂಬ ಪ್ರಶ್ನೆಗೆ ಉತ್ತರ 'ಖಂಡಿತ ಇಲ್ಲ'. ['ಪ್ರೀತಿ ಎಂದರೇನು?' ಉತ್ತರ ಕೆಎಂ ಚೈತನ್ಯರಿಗೆ ಗೊತ್ತು!]

ಇಂಗ್ಲೆಂಡ್ ನಲ್ಲಿ ಚಿರಂಜೀವಿ ಸರ್ಜಾ ಹಾಗೂ ಕೆ.ಎಂ.ಚೈತನ್ಯ ಹೊಸ ಸಿನಿಮಾ ಶೂಟಿಂಗ್ ಮಾಡ್ತಿದ್ದಾರೆ. ಕೆ.ಎಂ.ಚೈತನ್ಯ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಹೊಸ ಚಿತ್ರಕ್ಕೆ ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಆಟಗಾರ' ನಂತರ 'ಪರಾರಿ -2' ಚಿತ್ರ ಶುರು ಮಾಡುವುದಾಗಿ ಕೆ.ಎಂ.ಚೈತನ್ಯ ಈ ಹಿಂದೆ ಹೇಳಿದ್ದರು. ಈಗ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ 'ಪರಾರಿ-2' ಶೀರ್ಷಿಕೆ ಫಿಕ್ಸ್ ಆಗಿದ್ಯಾ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ, ಚಿರು ಜೊತೆ ಡ್ಯುಯೆಟ್ ಹಾಡುವ ನಾಯಕಿ ಶರ್ಮಿಳಾ ಮಾಂಡ್ರೆ ಅನ್ನೋದು ನಮಗೆ ಗೊತ್ತಾಗಿದೆ.

ಈ ಹೊಸ ಚಿತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗ್ಬೇಕು ಅಂದ್ರೆ, ಇನ್ನೂ ಮೂರು ವಾರ ಕಾಯ್ಬೇಕು. ಯಾಕಂದ್ರೆ, ಲಂಡನ್ ಸುತ್ತ ಮುತ್ತ ಚಿತ್ರೀಕರಣ ಮುಗಿಸಿದ ಬಳಿಕ ಕೆ.ಎಂ.ಚೈತನ್ಯ ಹಾಗೂ ಚಿರಂಜೀವಿ ಸರ್ಜಾ ಬೆಂಗಳೂರಿಗೆ ವಾಪಸ್ ಆಗುವುದು ಇಪ್ಪತ್ತು ದಿನಗಳ ಬಳಿಕ.!

ಇಂಗ್ಲೆಂಡ್ ನಲ್ಲಿ ಕ್ಯಾಮರಾ ಕಣ್ಣುಗಳಿಗೆ ಕೆ.ಎಂ.ಚೈತನ್ಯ, ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ಸೆರೆ ಸಿಕ್ಕಿರುವ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ....

ಲಂಡನ್ ನಲ್ಲಿದ್ದಾರೆ ನಟ ಚಿರಂಜೀವಿ ಸರ್ಜಾ

ಲಂಡನ್ ನಲ್ಲಿ ಹೊಸ ಚಿತ್ರದ ಶೂಟಿಂಗ್ ನಲ್ಲಿ ಚಿರಂಜೀವಿ ಸರ್ಜಾ

ಶೂಟಿಂಗ್ ಗ್ಯಾಪ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲೂ ಚಿರು ಮುಂದು

ಕೆ.ಎಂ.ಚೈತನ್ಯ ಆಕ್ಷನ್ ಕಟ್ ನಲ್ಲಿ ಚಿರಂಜೀವಿ ಸರ್ಜಾ

ಇನ್ನೂ ಹೆಸರಿಡದ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಕೆ.ಎಂ.ಚೈತನ್ಯ

ಕೆ.ಎಂ.ಚೈತನ್ಯ ಜೊತೆ ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾಗೆ ನಟಿ ಶರ್ಮಿಳಾ ಮಾಂಡ್ರೆ ಜೋಡಿ

English summary
Kannada Actor Chiranjeevi Sarja and Kannada Director KM Chaitanya are in England at present shooting for new yet-to-be titled movie.
Please Wait while comments are loading...

Kannada Photos

Go to : More Photos