»   » ಚಿರಂಜೀವಿ ಸರ್ಜಾಗೆ ಜೊತೆಯಾದ ತಾರೆ ಪ್ರಣೀತಾ

ಚಿರಂಜೀವಿ ಸರ್ಜಾಗೆ ಜೊತೆಯಾದ ತಾರೆ ಪ್ರಣೀತಾ

Posted by:
Subscribe to Filmibeat Kannada

ಇದೇ ಮೊದಲ ಬಾರಿಗೆ ನಟ ಚಿರಂಜೀವಿ ಸರ್ಜಾಗೆ ತಾರೆ ಪ್ರಣೀತಾ ಜೊತೆಯಾಗುತ್ತಿದ್ದಾರೆ. ಇವರಿಬ್ಬರೂ ಅಭಿನಯಿಸುತ್ತಿರುವ ಚಿತ್ರಕ್ಕೆ 'ವಿಶಲ್' (ಶಿಳ್ಳೆ) ಎಂದು ಹೆಸರಿಡಲಾಗಿದೆ. ತಮಿಳಿನ ಯಶಸ್ವಿ ಚಿತ್ರ ಪಿಜ್ಜಾ ರೀಮೇಕ್ ಚಿತ್ರ ಇದಾಗಿದ್ದು ಪ್ರಶಾಂತ್ ರಾಜ್ ನಿರ್ದೇಶಿಸುತ್ತಿದ್ದಾರೆ.

ಲವ್ ಗುರು, ಗಾನಾ ಬಜಾನಾ ಚಿತ್ರಗಳ ಬಳಿಕ ಪ್ರಶಾಂತ್ ರಾಜ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮಿಳಿನಲ್ಲಿ ಯಶಸ್ವಿಯಾದಂತೆ ಕನ್ನಡದಲ್ಲೂ ಈ ಚಿತ್ರ ಸೂಪರ್ ಹಿಟ್ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಪ್ರಶಾಂತ್ ಇದ್ದಾರೆ. ಈಗಾಗಲೆ ಚಿತ್ರೀಕರಣ ತಾಣಗಳನ್ನು ಆಯ್ಕೆ ಮಾಡಲಾಗಿದೆ.

ಮಠ, ಎದ್ದೇಳು ಮಂಜುನಾಥ ಖ್ಯಾತಿಯ ಗುರುಪ್ರಸಾದ್ ಅವರ ಸಂಭಾಷಣೆ ಹಾಗೂ ಜೋಶುವಾ ಶ್ರೀಧರ್ ಅವರ ಸಂಗೀತ ಚಿತ್ರಕ್ಕಿರುತ್ತದೆ. ಜನವರಿ ತಿಂಗಳಿಂದ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ. ಚಿತ್ರದಲ್ಲಿ ನಾಲ್ಕು ಹಾಡುಗಳು ಇರುತ್ತವಂತೆ.

ಪಿಜ್ಜಾ ಡೆಲಿವರಿ ಬಾಯ್ ಒಬ್ಬ ಗ್ರಾಹಕನೊಬ್ಬನಿಗೆ ಪಿಜ್ಜಾ ಡೆಲಿವರಿ ಮಾಡಲು ಹೋಗಿ ತೊಂದರೆಗೆ ಸಿಕ್ಕಿಬೀಳುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಕನ್ನಡಕ್ಕೆ ಹೊಂದುವಂತೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಚಿತ್ರವನ್ನು ಆರಂಭಿಸುವುದಾಗಿ ಹೇಳಿದ್ದಾರೆ ಪ್ರಶಾಂತ್. (ಏಜೆನ್ಸೀಸ್)

English summary
Actor Chiranjeevi Sarja and Pranitha paired up in Kannada film Whistle directing by Prashanth Raj. It is the remake of Tamil film successful film 'Pizza'.
Please Wait while comments are loading...
Best of 2016

Kannada Photos

Go to : More Photos