ಮಣಿರತ್ನಂ 'ಕಡಲ್'ನಲ್ಲಿ ಎದ್ದಿದೆ ಹೊಸ ಸುನಾಮಿ

Written by: ಶಂಕರ್, ಚೆನ್ನೈ

ಕಮಲ್ ಹಾಸನ್ ಅವರ 'ವಿಶ್ವರೂಪಂ' ಚಿತ್ರದ ವಿವಾದ ತಣ್ಣಗಾಗಿದೆ. ಈ ಚಿತ್ರ ಮುಸ್ಲಿಂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸರದಿ. ಅವರ ಹೊಚ್ಚ ಹೊಸ 'ಕಡಲ್' ಚಿತ್ರದ ಮೇಲೆ ಕ್ರೈಸ್ತ ಸಂಘಟನೆಗಳು ಕ್ಯಾತೆ ತೆಗೆದಿವೆ.

'ಕಡಲ್' ಚಿತ್ರದಲ್ಲಿನ ಕೆಲವು ಸನ್ನಿವೇಶಗಳಿಗೆ ಕತ್ತರಿ ಹಾಕುವಂತೆ ಆಗ್ರಹಿಸಿವೆ. ಚಿತ್ರದಲ್ಲಿ ಕ್ರೈಸ್ತರ ಭಾವನೆಗಳಿಗೆ ಧಕ್ಕೆ ತರುವಂತೆ ಸನ್ನಿವೇಶಗಳಿವೆ. ಅವಕ್ಕೆ ಕೂಡಲೆ ಕತ್ತರಿ ಹಾಕಿ ಎಂದು ಇಂಡಿಯನ್ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷ ಆಗ್ರಹಿಸಿದೆ. [ ಕಡಲ್ ಚಿತ್ರ ಹೇಗಿದೆ ಇಲ್ಲಿ ಓದಿ]

ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಆದಷ್ಟು ಬೇಗ ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಅರ್ಜುನ್ ಸರ್ಜಾ, ಅರವಿಂದ ಸ್ವಾಮಿ, ಗೌತಮ್ ಹಾಗೂ ತುಲಸಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ.

'ರಾವಣ್' ಚಿತ್ರ ಪ್ಲಾಫ್ ಆದ ಮೇಲೆ ಎರಡು ವರ್ಷಗಳ ಸುದೀರ್ಘ ಸಮಯ ಬಳಿಕ 'ಕಡಲ್' ಚಿತ್ರದೊಂದಿಗೆ ಮಣಿರತ್ನಂ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...ಕ್ರೈಸ್ತ ಸಮುದಾಯಕ್ಕೆ ಸೇರಿದ ಮೀನು ಹಿಡಿಯುವ ನಾಯಕ ಥಾಮಮ್ ಹಾಗೂ ಬಿಟ್ರಸ್ ಎಂಬ ಯವತಿ ನಡುವಿನ ಪ್ರೇಮ ಕಥಾನಕವನ್ನು ಚಿತ್ರ ಒಳಗೊಂಡಿದೆ.

ಒಳ್ಳೆಯದು ಕೆಟ್ಟದರ ನಡುವಿನ ಹೋರಾಟವನ್ನು ತಮ್ಮ ಚಿತ್ರದಲ್ಲಿ ಮಣಿರತ್ನಂ ತೋರಿಸಿದ್ದಾರೆ. ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆದು ಅದನ್ನು ಚಿತ್ರದ ಪಾತ್ರವರ್ಗಗಳಲ್ಲಿ ತೋರಿಸುವ ಪ್ರಯತ್ನವನ್ನು ಮಣಿರತ್ನಂ ಮಾಡಿದ್ದಾರೆ. ಇದೇ ವಿಷಯವೇ ಈಗ ವಿವಾದಕ್ಕೆ ಕಾರಣವಾಗಿರುವುದು.

Read more about: ಮಣಿರತ್ನಂ, ವಿವಾದ, ಕ್ರೈಸ್ತರು, controversy, mani ratnam, christian

English summary
Ace director Mani Ratnam's ' Kadal' (Sea) is now facing opposition from a Christian outfit which is piqued over some scenes in the movie. Indian Christian Democratic Party alleged the film had objectionable scenes referring to Christianity and sought their deletion.
Please Wait while comments are loading...

Kannada Photos

Go to : More Photos