»   » 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ತಡೆಯಾಜ್ಞೆ

'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ತಡೆಯಾಜ್ಞೆ

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್ ನಲ್ಲಿ ರೆಡಿಯಾಗಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಇದೇ ತಿಂಗಳಲ್ಲಿ ಬಿಡುಗಡೆ ಆಗ್ಬೇಕಿತ್ತು.

ಆದ್ರೆ, ಬಿಡುಗಡೆಗೂ ಮುನ್ನವೇ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. 'ಕಿಲ್ಲಿಂಗ್ ವೀರಪ್ಪನ್' ಚಿತ್ರ ರಿಲೀಸ್ ಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ರಾಜು ಎಂಬುವರು ದಾವೆ ಹೂಡಿದ್ದ ಪರಿಣಾಮ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

shivarajkumar

ನರಹಂತಕ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರಿಂದ ವೀರಪ್ಪನ್ ಜೀವನಚರಿತ್ರೆ ಕುರಿತಾಗಿ ರಾಜು ಎಂಬುವವರು ಹಕ್ಕು ಖರೀದಿಸಿದ್ದರು. 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ವೀರಪ್ಪನ್ ನ ಟ್ರ್ಯಾಪ್ ಮಾಡೋಕೆ ಹೆಣೆಯಲಾಗಿದ್ದ 'ಆಪರೇಷನ್ ಕುಕೂನ್' ಕುರಿತ ಚಿತ್ರವಾಗಿದ್ದು, ತಮ್ಮ ಅನುಮತಿ ಇಲ್ಲದೇ ಚಿತ್ರ ರೆಡಿ ಮಾಡಿರುವ ಕಾರಣ ರಾಜು ಎಂಬುವರು ಕೋರ್ಟ್ ಮೆಟ್ಟಿಲೇರಿದ್ದಾರೆ. [ದೀಪಾವಳಿಗೆ ಸಖತ್ ಸದ್ದು ಮಾಡಲಿದೆ ಕಿಲ್ಲಿಂಗ್ ವೀರಪ್ಪನ್!]

ಚಿತ್ರ ರಿಲೀಸ್ ಆಗುವ ಸಂದರ್ಭದಲ್ಲಿ ಇಂತಹ ವಿಘ್ನಗಳು ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಕಾಮನ್ ಆಗ್ಬಿಟ್ಟಿದೆ. ಇದಕ್ಕೆ ರಾಮ್ ಗೋಪಾಲ್ ವರ್ಮಾ ಏನ್ ಮಾಡ್ತಾರೋ ಕಾದು ನೋಡ್ಬೇಕು.

English summary
City Civil Court, Bengaluru admitted a petition from Raju and orders a stay for the release of Shiva Rajkumar starrer 'Killing Veerappan'.
Please Wait while comments are loading...

Kannada Photos

Go to : More Photos