»   » ಕಿಲಾಡಿ ಗೋವಿಂದೇಗೌಡ ನಿರ್ದೇಶನದಲ್ಲಿ ಮೂಡಿಬರಲಿದೆ 'ಜಂತರ್ ಮಂತರ್'

ಕಿಲಾಡಿ ಗೋವಿಂದೇಗೌಡ ನಿರ್ದೇಶನದಲ್ಲಿ ಮೂಡಿಬರಲಿದೆ 'ಜಂತರ್ ಮಂತರ್'

Posted by:
Subscribe to Filmibeat Kannada

12 ವರ್ಷಗಳ ಹಿಂದೆ ಬರಿಗೈಯಲ್ಲಿ ಬೆಂಗಳೂರಿಗೆ ಬಂದ ದಾವಣಗೆರೆ ಗೋವಿಂದೇಗೌಡ ಕನ್ನಡ ಚಿತ್ರರಂಗದಲ್ಲಿ ಮತ್ತು ರಂಗಭೂಮಿಗಳಲ್ಲಿ ಹಲವು ವರ್ಷ ನಟನೆ, ನಿರ್ದೇಶನ, ನಾಟಕ ರಚನೆ ಎಂದು ಹಲವು ರೀತಿಯ ಕೆಲಸಗಳನ್ನು ಮಾಡಿದರು. ಆದರೆ ಅವರು ತಮ್ಮ ನಟನೆ ಮೂಲಕ ಗುರುತಿಸಿಕೊಂಡಿದ್ದು, ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ.

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ತಮ್ಮ ಹಾಸ್ಯ ನಟನೆಯಿಂದ ದಾವಣಗೆರೆ ಗೋವಿಂದೇಗೌಡ 'ಜೀ.ಜೀ' ಎಂತಲೇ ಕನ್ನಡಿಗರ ಮನೆಮಾತಾಗಿದ್ದಾರೆ. ಚಿತ್ರರಂಗದಲ್ಲೇ ಎನಾದರೂ ಸಾಧನೆ ಮಾಡಬೇಕೆಂದು ಹಟದಿಂದ ಬೆಂಗಳೂರಿಗೆ ಬಂದ, ಬಡತನದಲ್ಲಿ ಅರಳಿದ ಅಪರೂಪದ ಪ್ರತಿಭೆ ಗೋವಿಂದೇಗೌಡ ಈಗ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.

ನಟನೆಗೂ ಸೈ, ನಿರ್ದೇಶನಕ್ಕೂ ಸೈ ಎನ್ನುವ 'ಕಾಮಿಡಿ ಕಿಲಾಡಿ' ಜೀ.ಜೀ, ಈಗ ನಿರ್ದೇಶನ ಮಾಡಲು ಹೊರಟಿರುವ ಚಿತ್ರದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಜೀ.ಜೀ ನಿರ್ದೇಶನದ ಎರಡನೇ ಚಿತ್ರ

ಜೀ.ಜೀ ನಿರ್ದೇಶನದ ಎರಡನೇ ಚಿತ್ರ

ಕಿಲಾಡಿ ದಾವಣಗೆರೆ ಗೋವಿಂದೇಗೌಡ ನಿರ್ದೇಶನ ಮಾಡಲಿರುವ 'ಜಂತರ್ ಮಂತರ್' ಅವರ ನಿರ್ದೇಶನದ ಎರಡನೇ ಸಿನಿಮಾ.

ಜೀ.ಜೀ ಅವರ ಹಿಂದಿನ ಚಿತ್ರ ಯಾವುದು ಗೊತ್ತೇ?

ಜೀ.ಜೀ ಅವರ ಹಿಂದಿನ ಚಿತ್ರ ಯಾವುದು ಗೊತ್ತೇ?

'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬರುವ ಮುನ್ನವೇ ಗೋವಿಂದೇಗೌಡ 'ನಟೋರಿಯಸ್' ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಜೀ.ಜೀ ಅವರೇ ಐದು ಹಾಡುಗಳನ್ನು ಸಹ ಬರೆದಿದ್ದರು. ನಟಿ ರಮ್ಯಾ ಬಾರ್ನಾ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗಡೆ ಆಗಿಲ್ಲ.

ಕಂಪ್ಲೀಟ್ ಮನರಂಜನಾ ಸಿನಿಮಾ

ಕಂಪ್ಲೀಟ್ ಮನರಂಜನಾ ಸಿನಿಮಾ

ವಿಶೇಷ ಅಂದ್ರೆ 'ಕಾಮಿಡಿ ಕಿಲಾಡಿ'ಯಾಗಿ ಗುರುತಿಸಿಕೊಂಡಿರುವ ಗೋವಿಂದೇಗೌಡ ನಿರ್ದೇಶನ ಮಾಡಲಿರುವ 'ಜಂತರ್ ಮಂತರ್' ಕಂಪ್ಲೀಟ್ ಕಾಮಿಡಿ ಸಿನಿಮಾ. ಅಲ್ಲದೇ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಗೋವಿಂದೇಗೌಡ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

'ಜಂತರ್ ಮಂತರ್' ತಾರಾಬಳಗ

'ಜಂತರ್ ಮಂತರ್' ತಾರಾಬಳಗ

ಈಗಾಗಲೇ ಉತ್ತಮ ನಟನಾಗಿ ಗುರುತಿಸಿಕೊಂಡಿರುವ ಗೋವಿಂದೇಗೌಡ 'ಜಂತರ್ ಮಂತರ್' ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದು, ಇತರೆ ತಾರಾಬಳಗ ಸಸ್ಪೆನ್ಸ್ ನಲ್ಲಿದೆ. ಆದರೆ 'ಕಾಮಿಡಿ ಕಿಲಾಡಿಗಳು' ಸ್ಪರ್ಧಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಎಂದು ಮೂಲಗಳ ಪ್ರಕಾರ ತಿಳಿಯಲಾಗಿದೆ.

ನಿರ್ಮಾಪಕರು ಯಾರು ಗೊತ್ತಾ?

ನಿರ್ಮಾಪಕರು ಯಾರು ಗೊತ್ತಾ?

ಶಿವಸುಂದರ್ ಮತ್ತು ಮಂಜಣ್ಣ ಎಂಬುವವರು 'ಜಂತರ್ ಮಂತರ್' ಸಿನಿಮಾ ನಿರ್ಮಾಣ ಹೊಣೆ ಹೊತ್ತಿದ್ದು, ಮೈಸೂರಿನ ಹುಲಿಯೂರಮ್ಮ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ.

'ಜಂತರ್ ಮಂತರ್' ಸಿನಿಮಾಗೆ ಹಾಡಲಿದ್ದಾರೆ ನವರಸನಾಯಕ

'ಜಂತರ್ ಮಂತರ್' ಸಿನಿಮಾಗೆ ಹಾಡಲಿದ್ದಾರೆ ನವರಸನಾಯಕ

ಗೋವಿಂದೇಗೌಡ ನಟಿಸುವ ಜೊತೆಗೆ ನಿರ್ದೇಶನ ಮಾಡುತ್ತಿರುವ 'ಜಂತರ್ ಮಂತರ್' ಸಿನಿಮಾಗೆ ಜಗ್ಗೇಶ್ ಹಾಡೊಂದನ್ನು ಹಾಡಲಿದ್ದಾರೆ.

ಚಿತ್ರದ ಒಂದು ಹಾಡಿಗೆ ಭಟ್ಟರ ಸಾಹಿತ್ಯ

ಚಿತ್ರದ ಒಂದು ಹಾಡಿಗೆ ಭಟ್ಟರ ಸಾಹಿತ್ಯ

ಗೋವಿಂದೇಗೌಡನ ನಟನೆಗೆ ಸದಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಯೋಗರಾಜ್ ಭಟ್, 'ಜಂತರ್ ಮಂತರ್' ಚಿತ್ರಕ್ಕೆ ಹಾಡೊಂದನ್ನು ಬರೆಯಲಿದ್ದಾರೆ.

ಚಿತ್ರೀಕರಣ ಯಾವಾಗ?

ಚಿತ್ರೀಕರಣ ಯಾವಾಗ?

ಎಲ್ಲ ಅಂದುಕೊಂಡಂತೆ ಆದಲ್ಲಿ ಗೋವಿಂದೇಗೌಡ ಅವರ 'ಜಂತರ್ ಮಂತರ್' ಸಿನಿಮಾ ಚಿತ್ರೀಕರಣ ಏಪ್ರಿಲ್ ನಿಂದ ಶುರುವಾಗಲಿದೆ.

English summary
Zee Kannada 'Comedy Kiladigalu' third place winner Davanagere Govindegowda will direct 'Jantar Mantar' movie.
Please Wait while comments are loading...

Kannada Photos

Go to : More Photos