»   » 'ಅಂಬಿ ನೈಟ್ಸ್' ಕಲರ್ ಫುಲ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್

'ಅಂಬಿ ನೈಟ್ಸ್' ಕಲರ್ ಫುಲ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್

Posted by:
Subscribe to Filmibeat Kannada

9ನೇ ವರ್ಷದ ವಿಶ್ವ ಕನ್ನಡ ಸಮ್ಮೇಳನ ಸಮಾರಂಭ-2016ಕ್ಕೆ ದಿನಗಣನೆ ಶುರುವಾಗಿದ್ದು, ಸೆಪ್ಟೆಂಬರ್ 2 ರಿಂದ 4ನೇ ತಾರೀಖಿನವರೆಗೆ ಅಟ್ಲಾಂಟಿಕ್ ಸಿಟಿ ನ್ಯೂ ಜೆರ್ಸಿಯಲ್ಲಿ ಅಕ್ಕ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ಅಕ್ಕ ಸಮ್ಮೇಳನ ವಿದೇಶದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗ ಬಾಂಧವರನ್ನು ಒಟ್ಟುಗೂಡಿಸುವ ವಿನೂತನ ಪ್ರಯತ್ನ ಮಾಡುವಲ್ಲಿ ಸಫಲವಾಗಿದ್ದು, ಈ ಬಾರಿ ಕೂಡ ಅಕ್ಕ ಸಮ್ಮೇಳನದಲ್ಲಿ ಕಲರ್ ಫುಲ್ ಸಮಾರಂಭಗಳು ನಡೆಯಲಿವೆ.['ಅಕ್ಕ' ಸಮ್ಮೇಳನದಲ್ಲಿ 'ಕನ್ನಡ ಮಾತಾಡಿ' ಕಿರುಚಿತ್ರ ಸ್ಪರ್ಧೆ]

Comedy stars Jaggesh and Sadhu Kokila at 'Ambi Night'

ಈ ಸಮಾರಂಭದಲ್ಲಿ ಹಿರಿಯ ಸಾಧಕರು ಹಾಗೂ ಕನ್ನಡದಲ್ಲಿ ಮನೆಮಾತಾಗಿರುವ ಸ್ಟಾರ್ ನಟರು ಭಾಗವಹಿಸುತ್ತಿದ್ದಾರೆ.

ಅಂದಹಾಗೆ ಈ ಬಾರಿ ವಿಶೇಷವಾಗಿ ಅಕ್ಕ ಬಳಗದವರು 'ಅಂಬಿ ನೈಟ್ಸ್' ಎಂಬ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಲರ್ ಫುಲ್ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್, ನವರಸ ನಾಯಕ ಜಗ್ಗೇಶ್ ಮತ್ತು ಕನ್ನಡದ ಕಾಮಿಡಿ ಕಿಂಗ್ ಸಾಧು ಕೋಕಿಲಾ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ಇನ್ನಷ್ಟು ಮೆರುಗು ನೀಡಲಿದ್ದಾರೆ.

ಈ ಸಂಭ್ರಮದ ಸಮಾರಂಭದಲ್ಲಿ ಸುಮಾರು 3 ಘಂಟೆಗಳ ಕಾಲ ನವರಸ ನಾಯಕ ಜಗ್ಗೇಶ್, ಸಾಧು ಕೋಕಿಲಾ ಮತ್ತು ಯಶ್ ಅವರು ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ.

Comedy stars Jaggesh and Sadhu Kokila at 'Ambi Night'

ಈ ಅದ್ಭುತ ಸಮಾರಂಭದಲ್ಲಿ ಮಿಸ್ ಮಾಡದೆ ಪಾಲ್ಗೊಳ್ಳಿ. ಸಮಾರಂಭದಲ್ಲಿ ಭಾಗವಹಿಸಲು ಆದಷ್ಟು ಬೇಗನೆ ರಿಜಿಸ್ಟರ್ ಮಾಡಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಫೇಸ್ ಬುಕ್ ಅಕೌಂಟ್ ಹಾಗೂ ವೆಬ್ ಸೈಟ್ ಗೆ ಲಾಗಿನ್ ಆಗಿ..

ಫೆಸ್ ಬುಕ್ ಅಕೌಂಟ್ ಗೆ ಇಲ್ಲಿ ಕ್ಲಿಕ್ಕಿಸಿ....

ವೆಬ್ ಸೈಟ್: www.akkaonline.com/2016

English summary
9th Akka world kannada conference -2016: Sandalwood comedy stars Jaggesh, Sadhu Kokila and yash will be performing at 'Ambi Night', a colorful 3 hour entertainment program of Sandalwood top stars On September 2nd, 3rd and 4th, at Atlantic City Convention Center, Atlantic City, New Jersey.
Please Wait while comments are loading...

Kannada Photos

Go to : More Photos