»   » 'ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?

'ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?

Posted by:
Subscribe to Filmibeat Kannada

ಬೇಡದ ವಿಷಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ದು ಮಾಡಿದ್ದಾರೆ. ಮತ್ತೊಮ್ಮೆ ಪತ್ನಿ ವಿಜಯಲಕ್ಷ್ಮಿ ಜೊತೆ ರಂಪಾಟ ಮಾಡಿಕೊಂಡು ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲೇರುವ ಹಾಗಾಗಿದೆ.

ವಿಜಯಲಕ್ಷ್ಮಿ ವಾಸವಿದ್ದ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಗೆ ಭೇಟಿ ಕೊಟ್ಟು ನಟ ದರ್ಶನ್ ಗಲಾಟೆ ಮಾಡಿದ ಕಾರಣ, ದರ್ಶನ್ ವಿರುದ್ಧ ವಿಜಯಲಕ್ಷ್ಮಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.[ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

'ಪತ್ನಿ ವಿಜಯಲಕ್ಷ್ಮಿಗೆ ಪ್ರಿಯಕರ ಇದ್ದಾನೆ' ಅಂತ ಮೊದಲು ಗಂಭೀರ ಆರೋಪ ಮಾಡಿದ ನಟ ದರ್ಶನ್, ಇದೀಗ ಚಿತ್ರರಂಗದಲ್ಲಿ ತಮಗೆ ಆಗದ 'ಅವರು', ತಮ್ಮ ಪತ್ನಿ ಕಿವಿ ಊದಿ ಈ ರೀತಿ ಮಾಡಿಸುತ್ತಿದ್ದಾರೆ ಅಂತ ಮಾಧ್ಯಮಗಳ ಮುಂದೆ ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಗಾದ್ರೆ, ಯಾರು 'ಅವರು'? 'ಅವರು' ಬಗ್ಗೆ ದರ್ಶನ್ ಏನಂದ್ರು? ಅದನ್ನೆಲ್ಲಾ ದರ್ಶನ್ ರವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ಇದು ಮೊದಲ ಬಾರಿ ಅಲ್ಲವೇ ಅಲ್ಲ!

ಇದು ಮೊದಲ ಬಾರಿ ಅಲ್ಲವೇ ಅಲ್ಲ!

''ಇದು ಮೊದಲನೇ ಬಾರಿ ಅಲ್ಲ. ಇದಾಗಲೇ ಎರಡನೇ ಬಾರಿ. First of all ಅವಳು ಇರುವ ಅಪಾರ್ಟ್ ಮೆಂಟ್ ಗೆ ಬಾಡಿಗೆ ಕಟ್ತಿರೋನು ನಾನು. ಅವಳ ಹೆಸರಿನಲ್ಲಿ ಇರಬಹುದು, ಆದರೆ ಬಾಡಿಗೆ ಕಟ್ತಿರೋನು ನಾನು'' - ದರ್ಶನ್ [ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?]

ಮಗು ನೋಡ್ಬೇಕು ಅಂದೆ...

ಮಗು ನೋಡ್ಬೇಕು ಅಂದೆ...

''ಸೆಕ್ಯೂರಿಟಿ ಬಾಯಿಗೆ ಬಂದ ಹಾಗೆ ಮಾತಾಡ್ತಾನೆ. ಅವನಿಗೆ ಹೇಳ್ದೆ. ಮಗುನಾದರೂ ಹೊರಗಡೆ ಕರ್ಕೊಂಡು ಬಾ. ಎರಡು ದಿನದಿಂದ ಮಗು ನನ್ನ ಕಣ್ಣಿಗೆ ಕಾಣಿಸ್ತಿಲ್ಲ. ಅವನು ಸ್ಕೂಲ್ ಗೆ ಹೋಗಿದ್ನೋ, ಇಲ್ವೋ ನನಗೆ ಗೊತ್ತಿಲ್ಲ'' - ದರ್ಶನ್['ವೀಕೆಂಡ್ ವಿತ್ ರಮೇಶ್' ಶೋಗೆ ವಿಜಯಲಕ್ಷ್ಮಿ ಕಾಲಿಡ್ಲಿಲ್ಲ! ಯಾಕೆ?]

ನನಗೂ ಅಧಿಕಾರ ಇದೆ

ನನಗೂ ಅಧಿಕಾರ ಇದೆ

''ಮಗು ಮೇಲೆ ಅವಳಿಗೆ ಎಷ್ಟು ಅಧಿಕಾರ ಇದ್ಯೋ, ನನಗೂ ಅಷ್ಟೇ ಅಧಿಕಾರ ಇದೆ. ನನಗೆ ಅಧಿಕಾರವೇ ಇಲ್ಲ ಅಂತ ಓಪನ್ ಆಗಿ ಹೇಳಿಬಿಟ್ಟರೆ, ಹೌದಪ್ಪಾ ಅಂತ ಸುಮ್ನೆ ಕೂತ್ಕೊಳ್ಬಹುದು'' - ದರ್ಶನ್[ದರ್ಶನ್ 'ಗಲಾಟೆ ಸಂಸಾರ'ಕ್ಕೆ ಕಾರಣವಾಗಿರುವ Audi ಕಾರ್ ಕುರಿತು..]

ರೈಸ್ ಆಗಿದ್ದೇಕೆ?

ರೈಸ್ ಆಗಿದ್ದೇಕೆ?

''ಸೆಕ್ಯೂರಿಟಿ ಜಾಸ್ತಿ abuse ಮಾಡೋಕೆ ಶುರು ಮಾಡಿದ್ಮೇಲೆ ನನಗೆ ರೈಸ್ ಆಯ್ತು'' - ದರ್ಶನ್[ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ದರ್ಶನ್ ನೋವು ಕೇಳೋರು ಯಾರು?

ದರ್ಶನ್ ನೋವು ಕೇಳೋರು ಯಾರು?

''ಸೋಮವಾರ ಮಗ ಬಂದಿದ್ದ. ಅವತ್ತು ಸಾಯಂಕಾಲ ವಿಜಯಲಕ್ಷ್ಮಿ ಫೋನ್ ಮಾಡಿ ಬೈಯ್ಯೋಕೆ ಶುರು ಮಾಡಿದ್ಲು. ಒಂದು ನಾನು ಹೇಳುವುದಕ್ಕೆ ಇಷ್ಟ ಪಡ್ತೀನಿ. ಎಲ್ಲರೂ ದರ್ಶನ್ ಹಾಗೆ ಮಾಡ್ತಾನೆ, ಹೀಗೆ ಮಾಡ್ತಾನೆ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ದರ್ಶನ್ ಒಳಗಡೆ ಏನು ನಡೆಯುತ್ತಿದೆ. ದರ್ಶನ್ ಯಾವ ತರಹ ಸಫರ್ ಆಗ್ತಿದ್ದಾನೆ ಅಂತ ಯಾರೂ ಕೇಳುತ್ತಿಲ್ಲ'' - ದರ್ಶನ್[ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ನಾನೇ ಟಾರ್ಗೆಟ್ ಯಾಕೆ?

ನಾನೇ ಟಾರ್ಗೆಟ್ ಯಾಕೆ?

''ಆಳಿಗೊಂದು ಕಲ್ಲು ಅಂತ ಎಲ್ಲರೂ ನನ್ನ ಮೇಲೆ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದರೆ ಹೇಗೆ?'' - ದರ್ಶನ್[ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

ಇಂಟರ್ ಕಾಮ್ ಕಟ್!

ಇಂಟರ್ ಕಾಮ್ ಕಟ್!

''ಅಪಾರ್ಟ್ ಮೆಂಟ್ ನಲ್ಲಿ ಇಂಟರ್ ಕಾಮ್ ಕಟ್ ಮಾಡಿದ್ದಾರೆ. ಯಾರು ಬರ್ತಾರೆ, ಯಾರು ಹೋಗ್ತಾರೆ ಗೊತ್ತಾಗಲ್ಲ. ಅವರಾಗಿ ಅವರೇ ಫೋನ್ ಮಾಡಿ ಇಂಥವರನ್ನೇ ಬಿಡಬೇಕು ಅಂದ್ರೆ ಬಿಡ್ತಾರೆ'' - ದರ್ಶನ್

ನನ್ನ ಯಾಕೆ ಬಿಡಲ್ಲ?

ನನ್ನ ಯಾಕೆ ಬಿಡಲ್ಲ?

''ನಾನೇನು ಥರ್ಡ್ ಪಾರ್ಟಿನಾ? ಅಥವಾ ಗೆಸ್ಟಾ? ನನ್ನ ಯಾಕೆ ಬಿಡಲಿಲ್ಲ ಒಳಗೆ?'' - ದರ್ಶನ್

ಶೋಕಿ ಯಾಕೆ?

ಶೋಕಿ ಯಾಕೆ?

''ನಾನು ಫೋನ್ ಮಾಡಿ ಸುಮಾರು ಬಾರಿ ಕೇಳಿದ್ದೇನೆ, ''ನೋಡಮ್ಮ ನನ್ನ ಗಾಡಿ ನನಗೆ ಕೊಡಮ್ಮ'' ಅಂತ. ಏನೋ ಮಗು ಮತ್ತೆ ಅವಳು ಚೆನ್ನಾಗಿರಲಿ ಅಂತ ಬಿಟ್ಟಿದ್ದೆ. ಆದ್ರೆ ಅದನ್ನ ಅವರು ತಗೊಂಡು ಬೇರೆ ತರಹ ಶೋಕಿಗೆ ಬಳಸಿಕೊಂಡ್ರೆ? ದುಡಿದಿರೋನು ನಾನು ನನಗೆ ಹೇಗೆ ಅನಿಸ್ಬೇಕು?'' - ದರ್ಶನ್

ವಿಜಯಲಕ್ಷ್ಮಿದು ಹಿತ್ತಾಳೆ ಕಿವಿ

ವಿಜಯಲಕ್ಷ್ಮಿದು ಹಿತ್ತಾಳೆ ಕಿವಿ

''ವಿಜಯಲಕ್ಷ್ಮಿದು ಸ್ವಲ್ಪ ಹಿತ್ತಾಳೆ ಕಿವಿ ಜಾಸ್ತಿ. ಇರೋಬರೋರ್ದೆಲ್ಲಾ ಕೇಳ್ಕೊಂಡು ಮಾತಾಡ್ತಾಳೆ. ಅವಳ ಸರ್ಕಲ್ ನಲ್ಲಿ ಯಾರಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ'' - ದರ್ಶನ್

'ಅವರು' ಯಾರು?

'ಅವರು' ಯಾರು?

''ಮೊದಲಾದರೂ ಒಂದಷ್ಟು ಜನ ಇದ್ರು. ಈಗೊಂದು ಸ್ವಲ್ಪ 'ಬೇರೆ'...'ಅವರ' ಹೆಸರು ಹೇಳುವುದಕ್ಕೆ ಇಷ್ಟ ಪಡಲ್ಲ. 'ಅವರು' ಇಂಡಸ್ಟ್ರಿಯಲ್ಲಿ ಇರುವವರೇ. 'ಅವರು' ಹೇಳಿಕೊಡ್ತಿದ್ದಾರೋ, ಏನೋ...ಗೊತ್ತಾಗ್ತಿಲ್ಲ'' - ದರ್ಶನ್

'ಅವರು' ಪ್ಲಾನ್ ಏನು?

'ಅವರು' ಪ್ಲಾನ್ ಏನು?

''ದರ್ಶನ್ ಎದುರಿಗೆ ಹೊಡೆಯೋಕೆ ಆಗದೇ ಇರುವವರು, ಮನೆಯವರನ್ನೇ ಎತ್ತಿ ಕಟ್ಟುಬಿಟ್ಟರೆ, ಆರಾಮಾಗಿ ಇರಬಹುದಲ್ವಾ?'' - ದರ್ಶನ್

'ಅವರು' ಬಗ್ಗೆ ಹೇಳಿಬಿಟ್ಟರೆ....

'ಅವರು' ಬಗ್ಗೆ ಹೇಳಿಬಿಟ್ಟರೆ....

''ವಿಜಯಲಕ್ಷ್ಮಿ ಮೊದಲಿನಿಂದಲೂ ಅದನ್ನೇ ಮಾಡಿಕೊಂಡು ಬಂದಳು ಯಾರಿಗೂ ಸುಮಾರು ವಿಷಯಗಳು ಗೊತ್ತಿಲ್ಲ. 'ಅವರು' ಯಾರು ಅಂತ ಹೆಸರು ಹೇಳಿಬಿಟ್ಟರೆ, ತುಂಬಾನೇ ದೊಡ್ಡ ತಪ್ಪು ಆಗ್ಬಿಡತ್ತೆ. 'ಬೇಡ' ಅಂತ ನಾನು ಸುಮ್ನೆ ಇದ್ದೀನಿ'' - ದರ್ಶನ್

English summary
Kannada Actor Darshan is in News again for his 'Bad Conduct' with his wife Vijayalakshmi. Darshan has reacted to the media over this issue. Read the article to know Darshan's reaction.
Please Wait while comments are loading...

Kannada Photos

Go to : More Photos