twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸಾಫೀಸಿನಲ್ಲೂ ಮುಗ್ಗರಿಸಿ, ತುಳು ಹಾಡನ್ನೂ ಕದ್ದ ಪ್ರಿನ್ಸ್ ತೆಲುಗು ಚಿತ್ರ

    By Balaraj
    |

    ತೆಲುಗಿನಲ್ಲಿ ಇತ್ತೀಚೆಗೆ ತೆರೆಕಂಡ ಬಹುಕೋಟಿ ವೆಚ್ಚದ, ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಅದ್ದೂರಿ 'ಬ್ರಹ್ಮೋತ್ಸವಂ' ಚಿತ್ರದಲ್ಲಿ ತುಳುವಿನ ಹಾಡೊಂದನ್ನು ಕದ್ದು ಹಾಕಲಾಗಿದೆ ಎಂದು ಸಿರಿ ಬ್ಯಾನರ್ ಆರೋಪಿಸಿ, ಲೀಗಲ್ ನೋಟಿಸ್ ಕಳುಹಿಸಿದೆ.

    ಇತ್ತೀಚೆಗೆ ಬಿಡುಗಡೆಯಾದ ಮಹೇಶ್ ಬಾಬು, ಕಾಜಲ್ ಅಗರವಾಲ್ ಅಭಿನಯದ ತೆಲುಗು 'ಬ್ರಹ್ಮೋತ್ಸವಂ ಚಿತ್ರ ಬಾಕ್ಸಾಫೀಸಿನಲ್ಲಿ ದಯನೀಯ ಸೋಲು ಕಂಡಿತ್ತು. ಈ ಚಿತ್ರದ ಬ್ಯಾಕ್ ಗ್ರೌಂಡ್ ಹಾಡೊಂದಕ್ಕೆ ತುಳು ಹಾಡನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿತ್ತು.

    ನಾಯಕ ಮತ್ತು ನಾಯಕಿ ಸ್ಟೆಪ್ ಹಾಕುವ ಈ ಹಾಡು, 2006ರಲ್ಲಿ ಸಿರಿ ಚಾನೆಲ್ ಬ್ಯಾನರಿನಡಿಯಲ್ಲಿ, ಪ್ರಸನ್ನ ಸುರತ್ಕಲ್ ನಿರ್ಮಾಣದಲ್ಲಿ "ದೀಪ ನಲಿಕೆ" ಅನ್ನುವ ತುಳು ಆಡಿಯೋ ಸಿಡಿಯ ಹಾಡುಗಳಲ್ಲಿ ಇದು ಒಂದಾಗಿದೆ.

    ಆ ಸಿಡಿಯ ಮೊದಲ ಹಾಡು ಡಾ. ವಾಮನ್ ನಂದಾವರ ಅವರ ಸಾಹಿತ್ಯದ "ಆ ಲೇಲೆ ಏರೆಗ್ ಮದಿಮೆ" ಅನ್ನುವ ಹಾಡು ದೇಶ ವಿದೇಶದಲ್ಲಿ ಪ್ರಸಿದ್ದಿ ಪಡೆದಿತ್ತು.

    ಸುಮಾರು 41 ಸೆಕೆಂಡುಗಳ, ತುಳು ಹಾಡಿನ ಆಡಿಯೋವನ್ನು ಬ್ರಹ್ಮೋತ್ಸವಂ ಚಿತ್ರದಲ್ಲಿ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಆಡಿಯೋ ನಿರ್ಮಾಣ ಸಂಸ್ಥೆಯ ಆರೋಪ. ಮುಂದೆ ಓದಿ..

    ಪೂರ್ವಾರ್ಧದಲ್ಲಿ ಬರುವ ಹಾಡು

    ಪೂರ್ವಾರ್ಧದಲ್ಲಿ ಬರುವ ಹಾಡು

    ಬ್ರಹ್ಮೋತ್ಸವಂ ಚಿತ್ರದಲ್ಲಿ ಎರಡನೇ ಹಾಡು ಬರುವ ಮೊದಲು ತುಳು ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಬ್ಯಾಕ್ ಗ್ರೌಂಡ್ ಹಾಡು ಬಂದ ನಂತರ ತೆಲುಗು ಹಾಡು ಆರಂಭವಾಗುತ್ತದೆ.

    ಗಮನಕ್ಕೆ ತಾರದೇ ಹಾಡು ಬಳಸಿಕೊಂಡಿದ್ದಾರೆ

    ಗಮನಕ್ಕೆ ತಾರದೇ ಹಾಡು ಬಳಸಿಕೊಂಡಿದ್ದಾರೆ

    ನಮ್ಮ ನಿರ್ಮಾಣದ ಈ ಹಾಡನ್ನು, ಆಡಿಯೋ ನಿರ್ಮಾಣ ಮಾಡಿದವರ ಗಮನಕ್ಕೆ ತರದೇ ತೆಲುಗು ಚಿತ್ರಕ್ಕೆ ಬಳಸಿಕೊಂಡಿದ್ದಾರೆ. 1957ರ ಕಾಪಿರೈಟ್ ಕಾಯಿದೆಯ ಪ್ರಕಾರ ಹಾಡನ್ನು ಕದ್ದಿರೋದು ಅಪರಾಧ ಎಂದು ನಿರ್ಮಾಣ ಸಂಸ್ಥೆಯವರು ಲೀಗಲ್ ನೋಟಿಸ್ ನೀಡಿದ್ದಾರೆ.

    ಇಬ್ಬರಿಗೆ ಲೀಗಲ್ ನೋಟಿಸ್

    ಇಬ್ಬರಿಗೆ ಲೀಗಲ್ ನೋಟಿಸ್

    ಬ್ರಹ್ಮೋತ್ಸವಂ ಚಿತ್ರದ ನಿರ್ಮಾಪಕ ಪ್ರಸಾದ್ ವಿ ಪೊಟ್ಟೂರಿ ಮತ್ತು ನಾಯಕ ನಟ ಮಹೇಶ್ ಬಾಬು ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದ್ದು ಇಬ್ಬರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಸಿರಿ ಬ್ಯಾನರ್ ಮಾಲೀಕರು ಹೇಳಿದ್ದಾರೆ.

    ಕನ್ನಡ ಚಿತ್ರವೊಂದರಲ್ಲೂ ಹಾಡಿನ ತುಣುಕು

    ಕನ್ನಡ ಚಿತ್ರವೊಂದರಲ್ಲೂ ಹಾಡಿನ ತುಣುಕು

    ಇತ್ತೀಚೆಗೆ ಕನ್ನಡ ಚಿತ್ರವೊಂದರಲ್ಲೂ ಇದೇ ಹಾಡಿನ ತುಣುಕು ಹಾಗೂ ಟ್ಯೂನ್ ಬಳಸಲಾಗಿದ್ದರೂ ಅದಕ್ಕೆ ಅನುಮತಿಯನ್ನು ಪಡೆಯಲಾಗಿತ್ತು. ಸಣ್ಣ ಮಾರ್ಕೆಟ್ ಇರುವ ತುಳು ಹಾಡನ್ನು ಕದ್ದು ಇಷ್ಟು ದೊಡ್ಡ ಸ್ಟಾರ್ ಇರುವ, ದೊಡ್ಡ ಮಾರುಕಟ್ಟೆಯಿರುವ ತೆಲುಗು ಚಿತ್ರಕ್ಕೆ ಬಳಸಿರೋದು ಅಪರಾಧ ಎನ್ನುವುದು ಮಾಲೀಕ ಪ್ರಸನ್ನ ಸುರತ್ಕಲ್ ಅವರ ಬೇಸರಕ್ಕೆ ಕಾರಣ.

    25 ಲಕ್ಷ ಪರಿಹಾರ

    25 ಲಕ್ಷ ಪರಿಹಾರ

    ಹಾಡನ್ನು ಕದ್ದು ಹಾಕಿದ ಪ್ರಮಾದಕ್ಕೆ ನಾಯಕ ಹಾಗೂ ನಿರ್ಮಾಪಕರು ಕ್ಷಮೆಯಾಚಿಸಿ 25 ಲಕ್ಷ ಪರಿಹಾರ ನೀಡಬೇಕೆಂದು ಲೀಗಲ್ ನೋಟಿಸ್ ಕಳುಹಿಸಲಾಗಿದ್ದು ಕಾನೂನು ಸಮರದ ಎಚ್ಚರಿಕೆ ನೀಡಲಾಗಿದೆ. ತುಳುವಿನ ಹಾಡನ್ನು ಕದ್ದು ಹಾಕುವ ಅನಿವಾರ್ಯತೆ ತೆಲುಗು ಚಿತ್ರಕ್ಕೆ ಯಾಕೆ ಬಂತು ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ನೆ.

    English summary
    Copyright owner of Tulu song claims Mahesh Babu, Kajal Aggarwal starer Telugu movie 'Brahmotsavam' illegally used their song in movie.
    Wednesday, June 1, 2016, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X