»   » ಕೃಷ್ಣಲೀಲಾ ತಂಡಕ್ಕೆ ಸಹೃದಯತೆ ತೋರಿದ ಕ್ರೇಜಿಸ್ಟಾರ್

ಕೃಷ್ಣಲೀಲಾ ತಂಡಕ್ಕೆ ಸಹೃದಯತೆ ತೋರಿದ ಕ್ರೇಜಿಸ್ಟಾರ್

Posted by:
Subscribe to Filmibeat Kannada

ಶಶಾಂಕ್ ನಿರ್ದೇಶನದ ಕೃಷ್ಣಲೀಲಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಸುದ್ದಿಯನ್ನು ಈಗಾಗಲೇ ಓದಿರುತ್ತೀರಿ.

ಕನ್ನಡ ಚಿತ್ರೋದ್ಯಮದಲ್ಲಿ ಇತರ ಕಲಾವಿದರನ್ನು ಪ್ರೋತ್ಸಾಹಿಸುವ ಉತ್ತಮ ಕೆಲಸ ನಡೆಯುತ್ತಿದೆ. ಕೃಷ್ಣಲೀಲಾ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಹಾಡು ಹಾಡಿದ್ದು ಇದಕ್ಕೆ ಕೊಡಬಹುದಾದ ಉದಾಹರಣೆ.

ಈಗಾಗಲೇ ಪುನೀತ್ ರಾಜಕುಮಾರ್ ಕೃಷ್ಣಲೀಲಾ ಚಿತ್ರ ವೀಕ್ಷಿಸಿ ಚಿತ್ರ ತಂಡವನ್ನು ಬೆನ್ನುತಟ್ಟಿದ್ದಾಯಿತು. ಈಗ ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ ಅವರ ಸರದಿ. (ಕೃಷ್ಣಲೀಲಾ ಚಿತ್ರವಿಮರ್ಶೆ)

ಮೊನ್ನೆ ಬುಧವಾರದಂದು (ಏ 15) ರವಿಚಂದ್ರನ್ ಬೆಂಗಳೂರು ರಾಜಾಜಿನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಓರಿಯನ್ ಮಾಲ್ ನಲ್ಲಿ ಕೃಷ್ಣಲೀಲಾ ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ಮುಗಿದ ನಂತರ ತನ್ನ ಮನೆಗೆ ಚಿತ್ರತಂಡವನ್ನು ಕರೆದೊಯ್ದು ರವಿಚಂದ್ರನ್ ಸಹೃದಯತೆಯನ್ನೂ ತೋರಿದ್ದಾರೆ. ['ಕೃಷ್ಣಲೀಲಾ' ಬಗ್ಗೆ ರವಿಚಂದ್ರನ್ ಹೀಗೆಂದರು!]

ರವಿಚಂದ್ರನ್ ಚಿತ್ರ ನೋಡಿ ಬೆನ್ನುತಟ್ಟಿದ್ದು ಹೀಗೆ..

ಕೃಷ್ಣ ಲೀಲಾ ತಪ್ಪುಗಳೇ ಇಲ್ಲದ ಸಿನಿಮಾ

ಕೃಷ್ಣ ಲೀಲಾ ತಪ್ಪುಗಳೇ ಇಲ್ಲದ ಸಿನಿಮಾ

ಶಶಾಂಕ್ ನಿರ್ದೇಶನದ ಕೃಷ್ಣ ಲೀಲಾ ತಪ್ಪುಗಳೇ ಇಲ್ಲದ ಸಿನಿಮಾ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರೂಪಣೆ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ.

ಕಲಾವಿದರ ನಟನೆ ಸೂಪರ್

ಕಲಾವಿದರ ನಟನೆ ಸೂಪರ್

ಚಿತ್ರದ ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ಅಜೇಯ್ ರಾವ್ , ಮಯೂರಿ ಮತ್ತು ರಂಗಾಯಣ ರಘು ಅಭಿನಯ ಶ್ಲಾಘನೀಯ ಎಂದು ರವಿಮಾಮ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.

ನಿಜ ಮನುಷ್ಯರನ್ನು ನೋಡಿದ ಹಾಗಾಯಿತು

ನಿಜ ಮನುಷ್ಯರನ್ನು ನೋಡಿದ ಹಾಗಾಯಿತು

ಕೇವಲ ಸಿನಿಮೀಯ ಮತ್ತು ಅತಿರಂಜಿತ ಕಥಾ ಚಿತ್ರಗಳೇ ಬರುತ್ತಿರುವ ಈ ಹೊತ್ತಿನಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ನಿಜವಾದ ಮನುಷ್ಯರನ್ನು ನೋಡಿದ ಹಾಗಾಯಿತು ಎಂದು ಚಿತ್ರದ ನಿರೂಪಣೆಯನ್ನು ರವಿಚಂದ್ರನ್ ಪ್ರಶಂಸಿದ್ದಾರೆ.

ಮನೆಗೆ ಕರೆದೊಯ್ದ ರವಿ

ಮನೆಗೆ ಕರೆದೊಯ್ದ ರವಿ

ಚಿತ್ರ ವೀಕ್ಷಿಸಿದ ನಂತರ ನಾಯಕ ಅಜೇಯ್ ರಾವ್, ನಿರ್ದೇಶಕ ಶಶಾಂಕ್, ಛಾಯಾಗ್ರಾಹಕ ಶೇಖರ್ ಚಂದ್ರು ಮತ್ತು ಸಂಗೀತ ನಿರ್ದೇಶಕ ವಿ ಶ್ರೀಧರ್ ರವರನ್ನು ತಮ್ಮ ಮನೆಗೆ ಕರೆದೊಯ್ದು ಸತ್ಕರಿಸುವ ಮೂಲಕ ರವಿಚಂದ್ರನ್ ಎಂದಿನ ತಮ್ಮ ಸಹೃದಯತೆಯನ್ನು ಮೆರೆದಿದ್ದಾರೆ.

ಪುನೀತ್ ಬೆನ್ನುತಟ್ಟಿದ್ದರು

ಪುನೀತ್ ಬೆನ್ನುತಟ್ಟಿದ್ದರು

ಶಶಾಂಕ್ ನಿರ್ದೇಶನದ ಜೊತೆಗೆ ನನಗೆ ಮೊದಲು ಇಷ್ಟ ಆಗಿದ್ದು ಬ್ಯೂಟಿಫುಲ್ ಸ್ಕ್ರಿಪ್ಟ್. ಅಜೇಯ್ ಪರ್ಫಾಮೆನ್ಸ್ ನೋಡಿ ತುಂಬಾ ಖುಷಿ ಆಯ್ತು. ರಂಗಾಯಣ ರಘು, ಅಚ್ಯುತ್ ರಾವ್, ಹೀರೋಯಿನ್ ಎಲ್ಲರ ಪರ್ಫಾಮೆನ್ಸ್ ಚೆನ್ನಾಗಿದೆ. ಸಾಧು ಕೋಕಿಲ ಒಂದು ಹಾಡಲ್ಲಿ ಬರುತ್ತಾರೆ. ಆ ಹಾಡು ನನಗೆ ತುಂಬಾ ಇಷ್ಟ.

English summary
Crazy Star V Ravichandran has watched Krishna Leela movie and praised it.
Please Wait while comments are loading...

Kannada Photos

Go to : More Photos