twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರ ನಿರ್ಮಾಪಕರ ಮೇಲೆ ಬಿತ್ತು ಕ್ರಿಮಿನಲ್ ಕೇಸ್

    |

    ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕರಿಗೆ ಆತಂಕ ಶುರುವಾಗಿದೆ. ಚಿತ್ರೋದ್ಯಮದ ಕಾರ್ಮಿಕರಿಗೆ ಸಲ್ಲಬೇಕಾಗಿರುವ ಸವಲತ್ತುಗಳನ್ನು ನಿರ್ಮಾಪಕರು ನೀಡುತ್ತಿಲ್ಲ ಎನ್ನುವ ಕಾರಣಕ್ಕಾಗಿ ನಿರ್ಮಾಪಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಲಿದೆ.

    ಚಿತ್ರೋದ್ಯಮ, ಕಾರ್ಮಿಕರ ESI (ಕಾರ್ಮಿಕರ ವಿಮಾ ನಿಗಮ) ಯೋಜನೆಗೆ ಮಾಸಿಕವಾಗಿ ಸಲ್ಲಬೇಕಾಗಿರುವ ಶುಲ್ಕವನ್ನು ಪಾವತಿಸದ ಹಿನ್ನಲೆಯಲ್ಲಿ ಒಟ್ಟು 42 ನಿರ್ಮಾಪಕರ ಮೇಲೆ ಕ್ರಿಮಿನಲ್ ಪ್ರಕರಣ ಇನ್ನೇನು ಸದ್ಯದಲ್ಲೇ ದಾಖಲಾಗಲಿದೆ.

    ಕೇಂದ್ರ ಸರಕಾರದ ಪರಿಸ್ಕೃತ ಯೋಜನೆಯಂತೆ 2013ರಿಂದ ಅನ್ವಯವಾಗುವಂತೆ, ಟಿವಿ ಮತ್ತು ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ಇಎಸೈ ಮತ್ತು ಇಪಿಎಫ್ ಯೋಜನಡಿಯ ಫಲಾನುಭವಿಗಳು. (ಇರೋ ಒಂದಷ್ಟು ಥಿಯೇಟರಿಗೆ ನಮ್ಮಲ್ಲೇ ಗುದ್ದಾಟ)

    ಆದರೆ, ಕಳೆದ ಆರ್ಥಿಕ ವರ್ಷಾಂತ್ಯದವರೆಗೆ (ಮಾರ್ಚ್ 31, 2014) 42 ನಿರ್ಮಾಪಕರು ಕಾರ್ಮಿಕ ಇಲಾಖೆಯಿಂದ ತಮ್ಮ ಹೆಸರುಗಳನ್ನಾಗಲಿ ಅಥವಾ ತಮ್ಮ ಸಂಸ್ಥೆಯ ಹೆಸರನ್ನಾಗಲಿ ನೊಂದಾಣಿ ಮಾಡಿಸಿಕೊಂಡಿಲ್ಲ.

    ಇಲ್ಲಿ ಕೆಲಸ ಮಾಡುವ, ಪ್ರಮುಖವಾಗಿ ಲೈಟ್ ಬಾಯ್ಸ್ ಮತ್ತು ಮೇಕಪ್ ಕಲಾವಿದರಿಗೆ ನಿರ್ಮಾಪಕರು ದಿನವೊಂದಕ್ಕೆ ಪ್ರತೀ ನೂರು ರೂಪಾಯಿಗೆ 4.20ರಂತೆ ದಿನ ಲೆಕ್ಕಾಚಾರದಲ್ಲಿ ಇಎಸೈ ಪಾವತಿಸಬೇಕಾಗಿತ್ತು.

    ಅಲ್ಲದೇ ಕೆಲಸದ ವೇಳೆ ಅಪಘಾತ ಸಂಭವಿಸಿದರೆ ನಾಲ್ಕು ಕೋಟಿ ರೂಪಾಯಿಯಷ್ಟು ಪ್ರಯೋಜನ ಪಡೆಯಲೂ ಈ ಕಾರ್ಮಿಕರು ಅರ್ಹರಾಗಿದ್ದರು. ಆದರೆ ಈವರೆಗೆ ಕಾರ್ಮಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.

    ಇದುವರೆಗೆ ಟಿವಿ ಮತ್ತು ಚಿತ್ರೋದ್ಯಮದ ತಲಾ ಇಬ್ಬರು ನಿರ್ಮಾಪಕರು ಮಾತ್ರ ಸರಕಾರದ ಸೂಚನೆಯನ್ನು ಪಾಲಿಸಿಕೊಂಡು ಬಂದಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.
    (2014ರ ಜಗಳ, ವಿವಾದ ರೌಂಡ್ ಅಪ್)

    ಈ ಅಪರಾಧದಲ್ಲಿ ಹತ್ತು ಸಾವಿರ ರೂಪಾಯಿ ದಂಡ ಮತ್ತು ಮೂರು ವರ್ಷದವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಕ್ರಿಮಿನಲ್ ಕೇಸ್ ದಾಖಲಾಗಲಿರುವ ಪ್ರಮುಖ ಐದು ನಿರ್ಮಾಪಕರು/ ಹಂಚಿಕೆದಾರರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

    ನಿರ್ಮಾಪಕ, ಹಂಚಿಕೆದಾರ ಜಯಣ್ಣ

    ನಿರ್ಮಾಪಕ, ಹಂಚಿಕೆದಾರ ಜಯಣ್ಣ

    ಪ್ರಸಕ್ತ ಕನ್ನಡ ಚಿತ್ರರಂಗದ ಪ್ರಮುಖ ಹಂಚಿಕೆದಾರ/ನಿರ್ಮಾಪಕರಾಗಿರುವ ಜಯಣ್ಣ ಈ ಪಟ್ಟಿಯಲ್ಲಿ ಬರುವ ಪ್ರಮುಖ ಹೆಸರು. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮಿಸ್ಟರ್ ಎಂಡ್ ಮಿಸೆಸ್ ರಾಮಾಚಾರಿ ಮತ್ತು ಬಹುನಿರೀಕ್ಷಿತ ರಣವಿಕ್ರಮ ಚಿತ್ರಕ್ಕೂ ಇವರೇ ಹಂಚಿಕೆದಾರರು.

    ಪಾರ್ವತಮ್ಮ ರಾಜಕುಮಾರ್

    ಪಾರ್ವತಮ್ಮ ರಾಜಕುಮಾರ್

    ಕನ್ನಡ ಚಿತ್ರೋದ್ಯಮದಲ್ಲಿ ನಿರ್ಮಾಪಕರ ಪಟ್ಟಿಯಲ್ಲಿ ಬರುವ ಮಂಚೂಣಿ ಹೆಸರು ಪೂರ್ಣಿಮಾ ಕಂಬೈನ್ಸ್, ವಜ್ರೇಶ್ವರಿ ಕಂಬೈನ್ಸ್. ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಈ ಪಟ್ಟಿಯಲ್ಲಿರುವ ಮತ್ತೊಂದು ಹೆಸರು. ಅಣ್ಣಾವ್ರ ಮೊಮ್ಮಗನ ಅಭಿನಯದ ಚೊಚ್ಚಲ ಚಿತ್ರ 'ಸಿದ್ದಾರ್ಥ' ಬಿಡುಗಡೆಗೆ ಸಿದ್ದವಾಗಿ ನಿಂತಿದೆ.

    ಕೋಟಿ ರಾಮು

    ಕೋಟಿ ರಾಮು

    ಕನ್ನಡ ಚಿತ್ರಕ್ಕೆ ಕೋಟಿ ಕೋಟಿ ಸುರಿದು 'ಕೋಟಿ ರಾಮು' ಎಂದೇ ಹೆಸರುಗಳಿಸಿರುವ ರಾಮು ಈ ಪಟ್ಟಿಯಲ್ಲಿರುವ ನೋಟೆಡ್ ನಿರ್ಮಾಪಕರಲ್ಲೊಬ್ಬರು. ಪತ್ನಿ ಮಾಲಾಶ್ರೀ ಅಭಿನಯದ ಇತ್ತೀಚಿನ ಹೆಚ್ಚಿನ ಚಿತ್ರಗಳಿಗೆ ರಾಮು ನಿರ್ಮಾಪಕರು. ಜೊತೆಗೆ ತೆಲುಗು, ತಮಿಳು ಚಿತ್ರದ ಹಂಚಿಕೆದಾರರು ಕೂಡಾ. ಇವರು ಈಗಾಗಲೇ ಆರ್ಥಿಕ ಅಪರಾಧ ನ್ಯಾಯಾಲಯದಿಂದ ಈ ಸಂಬಂಧ ಜಾಮೀನು ಪಡೆದುಕೊಂಡಿದ್ದಾರೆ.

    ಲಿಂಗಾ ಚಿತ್ರದ ನಿರ್ಮಾಪಕ

    ಲಿಂಗಾ ಚಿತ್ರದ ನಿರ್ಮಾಪಕ

    ಸ್ಯಾಂಡಲ್ ವುಡ್ ಚಿತ್ರೋದ್ಯಮದ ಹೆಸರಾಂತ ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. ರಜನಿಕಾಂತ್ ಅಭಿನಯದ ಲಿಂಗಾ ಚಿತ್ರ ಇವರ ನಿರ್ಮಾಣದಲ್ಲಿ ಬಂದ ಲೇಟೆಸ್ಟ್ ಚಿತ್ರ.

    ಇವರು ರಾಜಾಹುಲಿ

    ಇವರು ರಾಜಾಹುಲಿ

    ಕೋಟಿ ಲಾಸ್ ಮಾಡಿಕೊಂಡು ಕೋಟಿ ಲಾಭ ಮಾಡಿಕೊಳ್ಳುವುದರಲ್ಲಿ ಹೆಸರಾಗಿರುವ ಕೊಬ್ಬರಿ ಮಂಜು ಕೂಡಾ ಪಟ್ಟಿಯಲ್ಲಿರುವ ಇನ್ನೊಂದು ಹೆಸರು. ಯಶ್ ಅಭಿನಯದ ರಾಜಾಹುಲಿ ಚಿತ್ರ ಇವರಿಗೆ ಭರ್ಜರಿ ಫಸಲು ತಂದು ಕೊಟ್ಟ ಚಿತ್ರ. ಇವರು ಕೂಡಾ ಜಾಮೀನು ಪಡೆದುಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

    English summary
    Criminal case going to be filed against 42 Kannada producers for not registered their or their firms name as per ESI and EPF act.
    Wednesday, January 14, 2015, 11:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X