ಭಾರೀ ಬಜೆಟಿನ ಚಿತ್ರ:ತೆಲುಗಿಗೆ ಗೋಪಿಚಂದ್, ಕನ್ನಡದಲ್ಲಿ?

Posted by:

ದಂಡುಪಾಳ್ಯ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಭರ್ಜರಿ ಯಶಸ್ಸು ಪಡೆದುಕೊಂಡಿದೆ. ಇದೇ ಖುಷಿಯಲ್ಲಿರುವ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಭಾರೀ ಬಜೆಟಿನ ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ.

ಸುಮಾರು 25 ಕೋಟಿ ರೂಪಾಯಿ ಬಜೆಟಿನ ಚಿತ್ರವನ್ನು ಶ್ರೀನಿವಾಸರಾಜು ನಿರ್ದೇಶಿಸಲಿದ್ದಾರೆ. ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ.

Dandupalya director bilingual film with Upendra and Gopichand

ಚಿತ್ರವನ್ನು ಖ್ಯಾತ ನಿರ್ಮಾಪಕರೊಬ್ಬರು ನಿರ್ಮಿಸಲಿದ್ದಾರೆಂದು ಹೇಳಿರುವ ರಾಜು, ನಿರ್ಮಾಪಕರು ಯಾರೆಂದು ಸ್ಪಷ್ಟ ಪಡಿಸಲಿಲ್ಲ.

ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ತೆಲುಗಿನಲ್ಲಿ ಗೋಪಿಚಂದ್ ನಟಿಸಲಿದ್ದಾರೆ, ಒಂದೇ ಸೆಟ್ಟಿನಲ್ಲಿ ಎರಡೂ ಭಾಷೆಯ ಶೂಟಿಂಗ್ ನಡೆಯಲಿದೆ ಎಂದು ಶ್ರೀನಿವಾಸ ರಾಜು ಹೇಳಿದ್ದಾರೆ.

ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಈಗಾಗಲೇ ಹಣೆದಿದ್ದೇನೆ. ಚಿತ್ರದ ಇತರ ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಿದ್ದೇನೆ ಎಂದು ಶ್ರೀನಿವಾಸ ರಾಜು ಹೈದರಾಬಾದಿನಲ್ಲಿ ಹೇಳಿದ್ದಾರೆ.

Read more about: ಉಪೇಂದ್ರ, ಕನ್ನಡ, ತೆಲುಗು, ಶ್ರೀನಿವಾಸ ರಾಜು, ದಂಡುಪಾಳ್ಯ, dandupalya, srinivasa raju, upendra, kannada, telugu
English summary
Dandupalya director Srinivas Raju claims, he is making a bilingual multi-crore film with Upendra in Kannada and Gopichand in Telugu.
Please Wait while comments are loading...

Kannada Photos

Go to : More Photos