»   » ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಮಾಡೋರಿಲ್ಲ

ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಮಾಡೋರಿಲ್ಲ

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚೂ ಕಡಿಮೆ ಹತ್ತು ಪ್ರೊಡ್ಯೂಸರ್ ಗಳು ನಿಟ್ಟುಸಿರುಬಿಡ್ತಿದ್ದಾರೆ. ಎಲ್ಲರೂ ಕಾದಿದ್ದೂ ಆ ದಿನಕ್ಕೇನೇ. ಅದೇ 'ಬೃಂದಾವನ' ರಿಲೀಸ್ ದಿನ. ಹೈಟು ವೆಯ್ಟು ಎರಡರಲ್ಲೂ ಆನೆಯಂತೇ ಇರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನಲ್ಲೂ ಗಜರಾಜ.

ದರ್ಶನ್ ಸಿನಿಮಾಗಳು ಬಂತು ಅಂದ್ರೆ ಉಳಿದ ಸಿನಿಮಾಗಳು ಟೆಂಟೆತ್ತೋದು ಖಂಡಿತ. ಇತ್ತೀಚೆಗೆ ದಾಖಲೆ ಬರೆದ 'ಬುಲ್ ಬುಲ್' ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಚಾಲೆಂಜಿಂಗ್ ಸ್ಟಾರ್ ಸಿನಿಮಾದ ಮುಂದೆ ಚಾಲೆಂಜ್ ಮಾಡೋದು ಬೇಡ ಅಂತ ಅದೆಷ್ಟೋ ಸಿನಿಮಾಗಳು ಸುಮ್ಮನಾಗಿದ್ವು.

ಬಿಡುಗಡೆಗೆ ಕಾದಿರುವ ಹತ್ತು ಹಲವು ಸಿನಿಮಾಗಳು ದರ್ಶನ್ ಅನ್ನೋ ಆನೆಗೆ ದಾರಿಬಿಟ್ಟಕೊಟ್ಟು, ಸೈಲೆಂಟಾಗಿ ಸೈಡಿಗಿರೋಣ ಅಂತ ನಿರ್ಧರಿಸಿವೆ. ತಲೆ ಗಟ್ಟಿಯಾಗಿದೆ ಅಂತ ಬಂಡೆಗೆ ಚಚ್ಚಿಕೊಳ್ಳೋಕಾಗುತ್ತ ಅನ್ನೋ ಹಾಗೆ. ಸಿನಿಮಾ ಚನ್ನಾಗಿದೆ ಅಂತ ದರ್ಶನ್ ಸಿನಿಮಾ ಮುಂದೆ ರಿಲೀಸ್ ಮಾಡೋಕಾಗುತ್ತಾ ಅಂತ ಯೋಚನೆ ಮಾಡಿವೆ.

ಸಾರಥಿಯಿಂದ ಶುರುವಾದ ದರ್ಶನ್ ರ ಜಯದ ಸವಾರಿ ಬುಲ್ ಬುಲ್ ನಲ್ಲೂ ಯಶಸ್ವಿಯಾಗಿ ಮುಂದುವರೆದಿದೆ. ಸೋ ಯಾಕಪ್ಪಾ ಇರ್ಲಾರ್ದೋರು ಇರುವೆ ಬಿಟ್ಕೊಂಡ್ರು ಅನ್ನೋ ಹಾಗೆ ಕೋಟಿ ಕೊಟ್ಟು ಮಾಡಿರೋ ಸಿನಿಮಾನ ಈ ಟೈಮಲ್ಲಿ ರಿಲೀಸ್ ಮಾಡ್ಕೊಂಡು ಕಳ್ಕೊಳ್ಳೋದು ಅನ್ನೋ ಯೋಚನೆ ಉಳಿದ ಸಿನಿಮಾಗಳ ಪ್ರೊಡ್ಯೂಸರ್ಗಳದ್ದಾಗಿತ್ತು. ಈಗ ಎಲ್ಲರೂ ನಿಟ್ಟುಸಿರು ಬಿಡ್ತಿದ್ದಾರೆ. ಅವುಗಳ ಡೀಟೈಲ್ಸ್ ಈ ಸ್ಲೈಡ್ ನಲ್ಲಿದೆ ನೋಡ್ತಾ ಹೋಗಿ.

'ರಾಗಿಣಿ ಐಪಿಎಸ್' ಲಾಠಿ ಆಟ ಮುಂದಕ್ಕೆ

'ರಾಗಿಣಿ ಐಪಿಎಸ್' ಲಾಠಿ ಆಟ ಮುಂದಕ್ಕೆ

ಆನಂದ್ ಪಿ ರಾಜು ಡೈರೆಕ್ಷನ್ ನ ರಾಗಿಣಿ ಅಭಿನಯದ 'ರಾಗಿಣಿ ಐಪಿಎಸ್' ಚಿತ್ರ ರಿಲೀಸಾಗೋಕೆ ಕಾಯ್ತಿದೆ. ದರ್ಶನ್ ಫೈಟ್ ಗಳ ಮುಂದೆ ರಾಗಿಣಿಯ ಲಾಠಿ ಆಟ ಏನೂ ನಡೆಯೋದಿಲ್ಲ ಅಂತ ಗೊತ್ತಿದೆ. ಸೋ ಆನೆ ಅದರ ದಾರೀಲಿ ಹೋಗ್ಲಿ ಆಮೇಲೆ ನಾವ್ ಎಂಟ್ರಿ ಕೊಡೋಣ ಅನ್ನೋ ಪ್ಲಾನ್ ಕೆ ಮಂಜು ಅಂಡ್ ಟೀಮ್ ದು.

'ಬೃಂದಾವನ'ಕ್ಕೆ ದಾರಿ ಬಿಟ್ಟುಕೊಟ್ಟ 'ಸಕ್ಕರೆ'

'ಬೃಂದಾವನ'ಕ್ಕೆ ದಾರಿ ಬಿಟ್ಟುಕೊಟ್ಟ 'ಸಕ್ಕರೆ'

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಕ್ಕರೆ' ಕೂಡ ಬೃಂದಾವನ ಡೇಟ್ ಅನೌನ್ಸ್ ಆಗಿರೋದ್ರಿಂದ ಅದು ಬಂದ ಒಂದು ಅಥವಾ ಎರಡು ವಾರದ ನಂತ್ರ ಬರೋಣ ಅನ್ನೋ ಯೋಚನೆಯಲ್ಲಿದೆ.

ಬೃಂದಾವನಕ್ಕೆ ನಡುಗಿದ ಉಮೇಶ್ ರೆಡ್ಡಿ

ಬೃಂದಾವನಕ್ಕೆ ನಡುಗಿದ ಉಮೇಶ್ ರೆಡ್ಡಿ

ರಿಯಲ್ ಸ್ಟೋರಿ ಬೇಸ್ಡ್ 'ಉಮೇಶ್ ರೆಡ್ಡಿ' (ಹೊಸ ಶೀರ್ಷಿಕೆ ಖತರ್ನಾಕ್) ಚಿತ್ರ ಕೂಡ ಬೃಂದಾವನ ಬಂದು ಹೋಗ್ಲಿ ಅಂತ ಕಾಯ್ತಾ ಇರೋ ಸಿನಿಮಾಗಳಲ್ಲೊಂದು.

ಸೈಲೆಂಟ್ ಆದ ಲೂಸ್ ಮಾದ ಅಂಬರ

ಸೈಲೆಂಟ್ ಆದ ಲೂಸ್ ಮಾದ ಅಂಬರ

ಬೃಂದಾವನ ಚಿತ್ರ ಹೇಗೆ ಆವರಿಸಿಕೊಳ್ಳುತ್ತೋ ಅದನ್ನ ನೋಡ್ಕೊಂಡು ರಿಲೀಸ್ ಆಗೋಕೆ ಕಾಯ್ತಿದೆ ಲೂಸ್ ಮಾದ ಅಭಿನಯದ ಅಂಬರ.

ಬೃಂದಾನದ ಮುಂದೆ 'ಸ್ವೀಟಿ'ನೂ ಸೈಲೆಂಟ್

ಬೃಂದಾನದ ಮುಂದೆ 'ಸ್ವೀಟಿ'ನೂ ಸೈಲೆಂಟ್

ರಾಧಿಕಾ ಕುಮಾರಸ್ವಾಮಿ ಹಾಗೂ ಆದಿತ್ಯ ಅಭಿನಯದ 'ಸ್ವೀಟಿ' ಕೂಡ ಚಿತ್ರಗಳೂ ಕೂಡ ಬೃಂದಾವನದ ಓಪನಿಂಗ್ ಹೇಗಾಗುತ್ತೆ ಅನ್ನೋದನ್ನ ನೋಡ್ಕೊಂಡು ರಿಲೀಸಾಗೋ ಪ್ಲಾನ್ನಲ್ಲಿದೆ.

ಅಕ್ಟೋಬರ್ 4ರಂದು ಬರುತ್ತಿರುವ ದಿಲ್ ವಾಲಾ

ಅಕ್ಟೋಬರ್ 4ರಂದು ಬರುತ್ತಿರುವ ದಿಲ್ ವಾಲಾ

ಹ್ಯಾಟ್ರಿಕ್ ಹೀರೋಯಿನ್ ರಾಧಿಕಾ ಪಂಡಿತ್-ಸುಮಂತ್ ಅಭಿನಯದ 'ದಿಲ್ ವಾಲಾ' ಚಿತ್ರ ಬೃಂದಾವನ ಬಂದ ನಂತ್ರ ಅಂತ ಅಕ್ಟೋಬರ್ ಮೊದಲವಾರದಲ್ಲಿ ತೆರೆಕಾಣ್ತಿದೆ.

'ಅಗ್ರಜ'ನಿಗೂ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ

'ಅಗ್ರಜ'ನಿಗೂ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ

ನವರಸನಾಯಕ ಜಗ್ಗೇಶ್ ಜೊತೆ ದರ್ಶನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಅಗ್ರಜ ಚಿತ್ರ ಕೂಡ ಬೃಂದಾವನಕ್ಕೆ ದಾರಿ ಮಾಡಿಕೊಟ್ಟಿದೆ.

'ನಿಂಬೆಹುಳಿ'ಗೂ ಬಾಯಿ ಒಣಗಿತು

'ನಿಂಬೆಹುಳಿ'ಗೂ ಬಾಯಿ ಒಣಗಿತು

ಹೇಮಂತ್ ಹೆಗ್ಡೆ ಅಂಡ್ ಟೀಂನ ನಿಂಬೆಹುಳಿ ಚಿತ್ರ ಕೂಡ ಯಾಕೆ ದೊಡ್ಡ ಸಿನಿಮಾದ ನಡುವೆ ರಿಸ್ಕ್ ತೊಗೊಳ್ಳೋದು ಅಂತ ಇದೇ ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ.

ಬಿಡುಗಡೆಗೆ ಕಾಯ್ತಿರೋ ನನ್ Life ಅಲ್ಲಿ

ಬಿಡುಗಡೆಗೆ ಕಾಯ್ತಿರೋ ನನ್ Life ಅಲ್ಲಿ

ಅನೀಶ್, ಸಿಂಧು ಲೋಕನಾಥ್ ಜೋಡಿಯ 'ನನ್ ಲೈಫಲ್ಲಿ' ಚಿತ್ರ ಕೂಡ ಬೃಂದಾವನ ಬಂದು ಬಿಡ್ಲಿ ಆಮೇಲೆ ನೋಡೋಣ ಅಂತ ಕಾಯ್ತಿರೋ ಸಿನಿಮಾ.

ಜಟ್ಟ ಹಾರಾಟಕ್ಕೆ ಆನೆ ಬಲ ಬಂದಂತಾಗಿದೆ

ಜಟ್ಟ ಹಾರಾಟಕ್ಕೆ ಆನೆ ಬಲ ಬಂದಂತಾಗಿದೆ

ಕಿಶೋರ್ ಅಭಿನಯದ ಜಟ್ಟ ಕೂಡ ಸೈಲೆಂಟಾಗಿ ಆಮೇಲೆ ಬರೋಣ ಅಂತ ಸುಮ್ಮನಾಗಿದೆ.

English summary
Challenging Star Darshan's Brindavana is one of the most-hyped and highly-awaited movie, which has posed threat to several small-budget movies. With the film hitting the marquee today, a few filmmakers are having a sigh of relief. Yes! After Brindavana, more than ten Kannada films are gearing up to release in theatres.
Please Wait while comments are loading...

Kannada Photos

Go to : More Photos