»   » ಹತ್ತು ಕೋಟಿ ಕ್ಲಬ್ ಸೇರಿದ ದರ್ಶನ್ 'ಅಂಬರೀಶ'

ಹತ್ತು ಕೋಟಿ ಕ್ಲಬ್ ಸೇರಿದ ದರ್ಶನ್ 'ಅಂಬರೀಶ'

Written by: ಉದಯರವಿ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಕ್ಸಾಫೀಸ್ ಸುಲ್ತಾನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೊಳ್ಳುವಂತಹ ವಿಮರ್ಶೆಗಳಿಲ್ಲದಿದ್ದರೂ ಬಾಕ್ಸಾಫೀಸಲ್ಲಿ ಮಾತ್ರ ಭರ್ಜರಿ ಸದ್ದು ಮಾಡುತ್ತಿದೆ.

ಸರಿಸುಮಾರು ರಾಜ್ಯದಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಅಂಬರೀಶ ಚಿತ್ರ ಬೆಂಗಳೂರಿನ ಭೂಮಾಫಿಯಾ ವಿರುದ್ಧ ಸಿಡಿದೇಳುವ ನಾಯಕನ ಕಥೆಯನ್ನು ಒಳಗೊಂಡಿದೆ. ಮೂರು ದಿನಗಳಲ್ಲಿ ಚಿತ್ರದ ಗಳಿಕೆ ರು.10 ಕೋಟಿ ದಾಟಿದೆ ಎನ್ನುತ್ತವೆ ಬಾಕ್ಸಾಫೀಸ್ ಮೂಲಗಳು. [ಅಂಬರೀಶ ಚಿತ್ರ ವಿಮರ್ಶೆ]

ಈ ಮೂಲಕ ಮೂರೇ ದಿನಕ್ಕೆ ಹೊಸ ದಾಖಲೆ ಬರೆದಿದ್ದಾರೆ 'ಅಂಬರೀಶ'. ಈ ವರ್ಷದ ಹಿಟ್ ಚಿತ್ರವಾಗಿಯೂ ಅಂಬರೀಶ ಚಿತ್ರ ಹೊರಹೊಮ್ಮಿದೆ. ಒಂದು ಕಡೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು, ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳೇ ಚಿತ್ರಕ್ಕೆ ಶ್ರೀರಕ್ಷೆ ಎನ್ನಬಹುದು.

Darshan's Ambareesha joins 10 Crores club

ಬಾಲಿವುಡ್ ನಲ್ಲಾದರೆ ರು.100 ಕೋಟಿ ಕ್ಲಬ್ ಎಂಬುದು ಚಿತ್ರವೊಂದರ ಹಣೆಬರಹ ನಿರ್ಧರಿಸುತ್ತದೆ. ಈಗ ಸ್ಯಾಂಡಲ್ ವುಡ್ ನಲ್ಲಿ ರು.10 ಕೋಟಿ ಎಂಬುದು ಚಿತ್ರವೊಂದರ ಯಶಸ್ಸಿನ ಸಂಖ್ಯೆಯಾಗಿದೆ. ಒಟ್ಟಾರೆಯಾಗಿ ಈ ಒಂದು ಅಂಕೆಯನ್ನು 'ಅಂಬರೀಶ' ತಲುಪುವ ಮೂಲಕ ಗೆಲುವಿನ ನಗೆ ಬೀರಿದ್ದಾನೆ.

ಪ್ರಿಯಾಮಣಿ ಗ್ಲಾಮರ್ ಹಾಗೂ ರಚಿತಾ ರಾಮ್ ಅವರ ಕಲರ್, ಪವರ್ ಫುಲ್ ಡೈಲಾಗ್ಸ್ ಚಿತ್ರದ ಪ್ರಮುಖ ಆಕರ್ಷಣೆ. ನಾಡಪ್ರಭು ಕೆಂಪೇಗೌಡರ ಗೆಟಪ್ ನಲ್ಲಿ ಅಂಬರೀಶ್ ಅವರು ಕಾಣಿಸಿಕೊಂಡಿರುವುದು ಚಿತ್ರದ ಇನ್ನೊಂದು ಹೈಲೈಟ್. ಒಟ್ಟಾರೆ ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ದರ್ಶನ್ ಅಭಿಮಾನಿಗಳಿಗೆ ಸಂಭ್ರಮದ ವಿಚಾರ.

English summary
Challenging Star Darsha's Ambareesha movie managed to collect a staggering 10 crores in Box office collection in just 3 days. This is a record in the Kannada film industry.
Please Wait while comments are loading...

Kannada Photos

Go to : More Photos