»   » ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್

ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್

Posted by:
Subscribe to Filmibeat Kannada

ಬಾಕ್ಸಾಫೀಸ್ ಸುಲ್ತಾನ 'ದಾಸ' ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಟ್ರೈಲರ್ ನೋಡಲು ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳಿಗಾಗಿ ಚಿತ್ರತಂಡ ಮೊನ್ನೆಯಷ್ಟೇ ಯುಗಾದಿ ಹಬ್ಬದ ಗಿಫ್ಟ್ ಆಗಿ ಟ್ರೈಲರ್ ಬಿಡುಗಡೆ ಮಾಡಿತ್ತು.

ಟ್ರೈಲರ್ ನೋಡಿದ ಹಲವರು ಇನ್ನು ಚಿತ್ರ ರಿಲೀಸ್ ಯಾವಾಗ ಎಂದು ಬಾಯ ಮೇಲೆ ಬೆರಳು ಇಡುವಷ್ಟರಲ್ಲೇ ಚಿತ್ರತಂಡ 'ಚಕ್ರವರ್ತಿ' ಬಿಡುಗಡೆ ದಿನಾಂಕವನ್ನು ಪ್ರಕಟಗೊಳಿಸಿದೆ.['ಡಿ-ಬಾಸ್' ಅಭಿಮಾನಿಗಳಿಗೆ ಪಂಚಾಮೃತ ಸವಿದಷ್ಟೇ ಸಿಹಿ ಸುದ್ದಿ ಇದು!]


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ 'ಚಕ್ರವರ್ತಿ' ಸಿನಿಮಾ ಬ್ರೈನ್ ಮತ್ತು ಕ್ರೈಮ್ ಗಳ ರೇರ್ ಕಾಂಬಿನೇಷನ್ ಆಗಿದ್ದು, ಈ ಚಿತ್ರದ ಟ್ರೈಲರ್ ಹಲವು ವಿಶೇಷತೆಗಳಿಂದ ಕೂಡಿದೆ. ಚಿತ್ರ ಬಿಡುಗಡೆ ಯಾವಾಗ? ಮತ್ತು ಟ್ರೈಲರ್ ಸ್ಪೆಷಾಲಿಟಿಗಳು ಏನು? ತಿಳಿಯಲು ಮುಂದೆ ಓದಿ..


ಕ್ಲಾಸ್ ಮತ್ತು ಮಾಸ್ ಲುಕ್ ಎರಡರಲ್ಲೂ ದರ್ಶನ್ ಅಬ್ಬರ

ಕ್ಲಾಸ್ ಮತ್ತು ಮಾಸ್ ಲುಕ್ ಎರಡರಲ್ಲೂ ದರ್ಶನ್ ಅಬ್ಬರ

ಚಿತ್ರತಂಡ ಮೊನ್ನೆಯಷ್ಟೇ ಬಿಡುಗಡೆ ಮಾಡಿರುವ 'ಚಕ್ರವರ್ತಿ' ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ಟಾಪ್ ನಲ್ಲಿದ್ದು, ಅಭಿಮಾನಿಗಳ ಬಳಗ ಯುಗಾದಿ ಜೊತೆಗೆ ಮತ್ತೊಂದು ಹಬ್ಬವನ್ನು ಅಚರಿಸುತ್ತಿದೆ. ಕಾರಣ ಅಭಿಮಾನಿಗಳು ದರ್ಶನ್ ಅವರನ್ನು ಟ್ರೈಲರ್ ನಲ್ಲಿ ಕ್ಲಾಸ್ ಮತ್ತು ಮಾಸ್ ಲುಕ್ ಎರಡರಲ್ಲೂ ಕಣ್ತುಂಬಿಕೊಂಡಿದ್ದಾರೆ.


ಪವರ್ ಫುಲ್ ಪಾತ್ರದಲ್ಲಿ 'ಚಕ್ರವರ್ತಿ' ದರ್ಶನ್

ಪವರ್ ಫುಲ್ ಪಾತ್ರದಲ್ಲಿ 'ಚಕ್ರವರ್ತಿ' ದರ್ಶನ್

ಚಿತ್ರದಲ್ಲಿ ಮಾಸ್ ಲುಕ್ ನಲ್ಲಿಯೂ ಕಾಣಿಸಿಕೊಂಡಿರುವ ದರ್ಶನ್ ರಗಡ್ ಗೆಟಪ್ ನಲ್ಲಿ ರೆಟ್ರೋ ಸ್ಟೈಲ್ ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಸಿನಿಮಾ ಪ್ರೇಮಿಗಳಲ್ಲಿ ಚಿತ್ರಕ್ಕಿಂತ ದರ್ಶನ್ ಅಭಿನಯದ ಬಗ್ಗೆಯೇ ಕ್ರೇಜ್ ಹೆಚ್ಚಾಗಿದೆ.[ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]


ರಿಯಲ್ ಅಂಡರ್ ವರ್ಲ್ಡ್

ರಿಯಲ್ ಅಂಡರ್ ವರ್ಲ್ಡ್

'ದಾಸ' ದರ್ಶನ್ ಅಭಿನಯದ 48 ನೇ ಚಿತ್ರ 'ಚಕ್ರವರ್ತಿ' ಸಿನಿಮಾದಲ್ಲಿ ರಿಯಲ್ ಅಂಡರ್ ವರ್ಲ್ಡ್ ಎಲಿಮೆಂಟ್ಸ್ ಗಳು ಇರುವುದು ಟ್ರೈಲರ್ ನಲ್ಲಿ ಕಂಡುಬಂದಿದ್ದು, ಮಾಸ್ ಪ್ರೇಕ್ಷಕರಿಗೆ ಡಿ ಬಾಸ್ ಭರ್ಜರಿ ಕೊಡುಗೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಟ್ರೈಲರ್ ನಿಂದ ತಿಳಿದುಬಂದಿದೆ.


'ಚಕ್ರವರ್ತಿ'ಯಲ್ಲಿ ಡೆಡ್ಲಿ ಪೊಲೀಸ್ ಗೆಟಪ್

'ಚಕ್ರವರ್ತಿ'ಯಲ್ಲಿ ಡೆಡ್ಲಿ ಪೊಲೀಸ್ ಗೆಟಪ್

ಈ ಮೊದಲೇ ನಾವು ಹೇಳಿದಂತೆ 'ಚಕ್ರವರ್ತಿ' ಸಿನಿಮಾದಲ್ಲಿ 'ಡೆಡ್ಲಿ' ಆದಿತ್ಯ ಹಂಟರ್ ಆಗಿ ಖಡಕ್ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಂಗ್ರಿ ಪೊಲೀಸ್ ಆಗಿ ಶರತ್ ಲೋಹಿತಾಶ್ವ ಸಹ ಬಣ್ಣಹಚ್ಚಿದ್ದಾರೆ.['ಕಾಮೆಂಟ್' ಮಾಡಿದವರಿಗೆ ಡೆಡ್ಲಿ ಆದಿತ್ಯ ಕೊಟ್ರು ಖಡಕ್ ಉತ್ತರ!]


ದಚ್ಚು ಗೆ ಕುಚುಕು ಸಾಥ್

ದಚ್ಚು ಗೆ ಕುಚುಕು ಸಾಥ್

ದರ್ಶನ್ ಗೆ ಚಿತ್ರದಲ್ಲಿ ಗೆಳೆಯನಾಗಿ ಫುಲ್ ಸಾಥ್ ನೀಡುವ ಪಾತ್ರದಲ್ಲಿ, ದಚ್ಚು ರಿಯಲ್ ಕುಚುಕು ಸೃಜನ್ ಲೋಕೇಶ್ ಅಭಿನಯಿಸಿದ್ದಾರೆ. ದರ್ಶನ್ ಅವರ ಹಲವು ಚಿತ್ರಗಳಲ್ಲಿ ಗೆಳೆಯನ ಪಾತ್ರ ನಿರ್ವಹಿಸಿರುವ ಸೃಜನ್, ಈ ಹಿಂದಿನ ಸಿನಿಮಾ 'ಜಗ್ಗುದಾದಾ' ದಲ್ಲೂ ಸಹ ಕುಚುಕು ಪಾತ್ರ ನಿರ್ವಹಿಸಿದ್ದರು.


ಇಂಟರ್ ನ್ಯಾಷನಲ್ ಡಾನ್ ಗೆಟಪ್ ನಲ್ಲಿ ದರ್ಶನ್

ಇಂಟರ್ ನ್ಯಾಷನಲ್ ಡಾನ್ ಗೆಟಪ್ ನಲ್ಲಿ ದರ್ಶನ್

ಟ್ರೈಲರ್ ನಲ್ಲಿ ದರ್ಶನ್ ಅವರ ಗೆಟಪ್ ಗಳನ್ನು ನೋಡಿದರೆ ಮಾಸ್ ಮತ್ತು ಕ್ಲಾಸ್ ಎರಡು ಶೇಡ್ ನಿಂದಲೂ ಕಾಣಿಸಿಕೊಂಡಿದ್ದಾರೆ ಅನಿಸುತ್ತದೆ. ಆದರೆ ಈ ಕ್ಲಾಸ್ ಗೆಟಪ್ ಇಂಟರ್ ನ್ಯಾಷನಲ್ ಅಂಡರ್ ವರ್ಲ್ಡ್ ಡಾನ್ ಆಗಿ ಕಾಣಿಸಿಕೊಂಡಿರುವುದು ಎಂಬುದು ನಿಧಾನವಾಗಿ ತಿಳಿಯುತ್ತೆ. ಟ್ರೈಲರ್ ನಲ್ಲೇ ಟ್ವಿಸ್ಟ್ ನೀಡುವ 'ಚಕ್ರವರ್ತಿ' ದರ್ಶನ್ ಡಾನ್ ಪಾತ್ರದಲ್ಲಿ ಸ್ಟೈಲಿಶ್ ಆಗಿ, ಆಕರ್ಷಕವಾಗಿ, ಅಷ್ಟೇ ಡೇಂಜರಸ್ ಮತ್ತು ಮಿಸ್ಟೇರಿಯಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಬಹುದೊಡ್ಡ ತಾರಾಬಳಗ

ಬಹುದೊಡ್ಡ ತಾರಾಬಳಗ

ದರ್ಶನ್ ಗೆ ದೀಪಾ ಸನ್ನಿಧಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಉಳಿದಂತೆ ಚಾರುಲತಾ, ಸಾಧು ಕೋಕಿಲಾ, ರಮೇಶ್ ಭಟ್, ಯಶಸ್ ಸೂರ್ಯ, ದಿನಕರ್ ತೂಗುದೀಪ, ಕುಮಾರ್ ಬಂಗಾರಪ್ಪ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಇವರ ಗೆಟಪ್ ಗಳನ್ನು ಟ್ರೈಲರ್ ನಲ್ಲೇ ನೋಡಬಹುದು.


ಸಿನಿಮಾ ಬಿಡುಗಡೆ ಯಾವಾಗ?

ಸಿನಿಮಾ ಬಿಡುಗಡೆ ಯಾವಾಗ?

ಮೊದಲ ಬಾರಿಗೆ ಸ್ವತಂತ್ರವಾಗಿ ಚಿಂತನ್ ಆಕ್ಷನ್ ಕಟ್ ಹೇಳಿರುವ 'ಚಕ್ರವರ್ತಿ' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ.


ಟ್ರೈಲರ್ ನೋಡಿ

ಟ್ರೈಲರ್ ನೋಡಿ

ಬ್ರೈನ್ ಮತ್ತು ಕ್ರೈಮ್ ರೇರ್ ಕಾಂಬಿನೇಷನ್ ಇರುವ 'ಚಕ್ರವರ್ತಿ' ಸಿನಿಮಾದ ಟ್ರೈಲರ್ ಈಗಾಗಲೇ 1.4 ಮಿಲಿಯನ್ ವೀಕ್ಷಣೆ ಪಡೆದಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಟಾಪ್ ನಲ್ಲಿದೆ. ಟ್ರೈಲರ್ ನೋಡಲು ಕ್ಲಿಕ್ ಮಾಡಿ


English summary
Kannada Actor Darshan Starrer 'Chakravarthy' Movie Trailer Released Recently. Here is Speciality of movie Trailer.
Please Wait while comments are loading...

Kannada Photos

Go to : More Photos