»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

Posted by:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಮಿಸ್ಟರ್ ಐರಾವತ'. ಕಳೆದ ವರ್ಷದಿಂದಲೂ ರಿಚ್ ಆಗಿ ರೆಡಿಯಾಗುತ್ತಿರುವ 'ಮಿಸ್ಟರ್ ಐರಾವತ' ಚಿತ್ರ ಇದೀಗ ರಿಲೀಸ್ ಗೆ ರೆಡಿಯಾಗಿದೆ.

ಇತ್ತೀಚೆಗಷ್ಟೆ 'ಮಿಸ್ಟರ್ ಐರಾವತ' ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಮೂರು ದಿನಗಳಲ್ಲಿ, ಅಂದ್ರೆ ಆಗಸ್ಟ್ 16 ರಂದು 'ಮಿಸ್ಟರ್ ಐರಾವತ' ಚಿತ್ರದ ಆಡಿಯೋ ರಿಲೀಸ್ ಆಗುತ್ತಿದೆ.


Darshan starrer 'Mr.Airavata' audio release on August 16th in Mysore

ಮೈಸೂರಿನ ಬಯಲು ರಂಗಮಂದಿರದಲ್ಲಿ (ಮಾನಸ ಗಂಗೋತ್ರಿ) ಭಾನುವಾರ ಸಂಜೆ 6.30 ಕ್ಕೆ 'ಮಿಸ್ಟರ್ ಐರಾವತ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿದೆ. [ದರ್ಶನ್ ಗೆ ಜೋಡಿಯಾದ ಮಿರ್ಚಿ 'ಮೆಣಸಿನಕಾಯಿ' ದೀಕ್ಷಾ]


'ಮಿಸ್ಟರ್ ಐರಾವತ' ಚಿತ್ರಕ್ಕೆ ವಿ.ಹರಿಕೃಷ್ಣ ಮ್ಯೂಸಿಕ್ ನೀಡಿದ್ದಾರೆ. ಮೊದಲ ಬಾರಿಗೆ ದರ್ಶನ್ ಜೊತೆ ಊರ್ವಶಿ ರೌಟೇಲಾ ಡ್ಯುಯೆಟ್ ಹಾಡಿದ್ದಾರೆ. 'ಅಂಬಾರಿ', 'ಅದ್ದೂರಿ'ಯಂತಹ ಹಿಟ್ ಸಿನಿಮಾಗಳನ್ನ ನೀಡಿದ ಎ.ಪಿ.ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.['ಅಂಬಾರಿ' ಏರಿಬಂದ ಎಪಿ ಅರ್ಜುನ್‌ಗೆ 'ಅದ್ಧೂರಿ' ಶುಭಾಶಯ]


ನಿರ್ಮಾಪಕ ಸಂದೇಶ್ ನಾಗರಾಜ್ 'ಮಿಸ್ಟರ್ ಐರಾವತ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅಂತೂ ವರ್ಷದಿಂದ ಉಪವಾಸವಿದ್ದ ದರ್ಶನ್ ಅಭಿಮಾನಿಗಳು ಈ ಭಾನುವಾರ 'ಮಿಸ್ಟರ್ ಐರಾವತ' ಹಾಡುಗಳನ್ನ ಕೇಳಿ ಕುಣಿದು ಕುಪ್ಪಳಿಸಬಹುದು. ದಾಸನ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ?

English summary
Kannada Actor Darshan starrer 'Mr.Airavata' grand audio release function is scheduled on August 16th in Bayalu Rangamandira, Mysuru. V.Harikrishna has composed music for the film which is directed by A.P.Arjun.
Please Wait while comments are loading...

Kannada Photos

Go to : More Photos