»   » ಆನೆ ಬರೋಕೆ ಇದೆ ನಾಲ್ಕು ತಿಂಗಳು, ನೆಮ್ಮದಿಯಾಗಿರಿ

ಆನೆ ಬರೋಕೆ ಇದೆ ನಾಲ್ಕು ತಿಂಗಳು, ನೆಮ್ಮದಿಯಾಗಿರಿ

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ ಆನೆ ಅಂದ್ರೆ ಯಾರು ಅಂತ ಮತ್ತೆ ಹೇಳ್ಬೇಕಿಲ್ಲ ಅಲ್ವಾ? ಆನೆ ನಡೆದಿದ್ದೇ ಹಾದಿ ಅನ್ನೋ ಹಾಗೆ ಯಾವಾಗ ಬೇಕಾದ್ರೂ ಬರುವ, ಬಂದಾಗಲೆಲ್ಲ ಕೋಟಿ ಕೋಟಿ ಲೂಟಿ ಮಾಡಿಕೊಂಡು ಹೋಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೌದು ತಾನೆ?

ದರ್ಶನ್ ಸಿನಿಮಾ 'ಅಂಬರೀಷ'ದಲ್ಲಿ ಅಂಬಿಯನ್ನ ನೋಡಿ ಪರ್ವಾಗಿಲ್ಲ ಅಂದ ಅಭಿಮಾನಿಗಳು, ಈಗ ಐರಾವತದ ಅವತಾರದಲ್ಲಿ ನೋಡೋಕೆ ಕಾಯ್ತಿದ್ದಾರೆ. ಪುನೀತ್ ಪೊಲೀಸ್ ಪಾತ್ರ ಮಾಡಿದ್ದ ಚಿತ್ರಕ್ಕೆ ಸ್ಪರ್ಧಿಯಾಗಿ, ಐರಾವತ ಚಿತ್ರ ರಣವಿಕ್ರಮ ಜೊತೆ ರಿಲೀಸ್ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಹಾಗಾಗ್ಲಿಲ್ಲ.


ಐರಾವತ ಚಿತ್ರದ ನಿರ್ದೇಶಕ ಎ.ಪಿ. ಅರ್ಜುನ್ ನಾವು ಬೇರೆಯದ್ದೇ ಲೆವೆಲ್ನಲ್ಲಿ ಬರ್ತೀವಿ ಅಂತಿದ್ದಾರೆ. ಚಿತ್ರವನ್ನ ಲೇಟಾಗಿಯಾದ್ರೂ ಲೇಟೆಸ್ಟಾಗಿ ತರ್ಬೇಕು ಅಂದುಕೊಂಡಿದ್ದಾರೆ. ಹಾಗಾಗಿನೇ ಆಗಸ್ಟ್ ತಿಂಗಳಲ್ಲಿ ಚಿತ್ರ ಬರೋದು ಪಕ್ಕಾ ಅಂದಿದ್ದಾರೆ. [ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]

ಜುಲೈ ಕೊನೆಯ ವೇಳೆಗೆ ಚಿತ್ರವನ್ನು ತರೋಕೆ ಪ್ರಯತ್ನ ಮಾಡ್ತೀವಿ ಸಾಧ್ಯವಾಗದಿದ್ರೆ ಆಗಸ್ಟ್ ನಲ್ಲಿ ಗ್ಯಾರಂಟಿ ಅಂತಿದ್ದಾರೆ. ಹಾಗಾಗಿ ಹೊಸಬರ ಸಿನಿಮಾಗಳು, ಸಣ್ಣಪುಟ್ಟ ಸಿನಿಮಾಗಳು ಇನ್ನು ಮೂರು ತಿಂಗಳು ನೆಮ್ಮದಿಯಾಗಿ ಥಿಯೇಟರ್ಗಿಳಿಬಹುದು, ರನ್ನ ವಜ್ರಕಾಯ ಹೊರತಾಗಿ..


ಅಂದ ಹಾಗೆ, ಐರಾವತ ಈಗ 'ಮಿಸ್ಟರ್ ಐರಾವತ' ಆಗಿದೆ. ಈ ಚಿತ್ರಕ್ಕಾಗಿ ಮೊಟ್ಟಮೊದಲ ಬಾರಿಗೆ ದರ್ಶನ್ ಸಿಕ್ಸ್ ಪ್ಯಾಕ್ ಬಾಡಿ ತೋರಲು ಸಾಕಷ್ಟು ಕಸರತ್ತು ಮಾಡಿದ್ದಾರೆ. ಚಿತ್ರದ ಬಿಡುಗಡೆ ತಡವಾಗುತ್ತಿದ್ದುದಕ್ಕೆ ಅರ್ಜುನ್ ನೇ ಕಾರಣ ಅಂತ ಕೆಲವರು ಬೆರಳು ತೋರಿಸಿದ್ದರು. ಅದೇನೇ ಇರಲಿ, ದರ್ಶನ್ ಚಿತ್ರವೆಂದರೆ ಅಭಿಮಾನಿಗಳಿಗೆ ರಸದೌತಣವಂತೂ ಇದ್ದದ್ದೇ. ['ಐರಾವತ' ಚಿತ್ರದ ಟೈಟಲ್ ಚೇಂಜ್]

ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದರ್ಶನ್ ಮಗ ವಿನೀತ್ ಕೂಡ ಪುಟ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಮಿಸಸ್ ಐರಾವತವಾಗಿ ಬಾಂಬೆ ರಂಭೆ ಊರ್ವಶಿ ರೌಟೆಲಾ (ಚಿತ್ರಪಟ) ಮತ್ತು ಪ್ರಕಾಶ್ ರಾಜ್ ಕೂಡ ಅಭಿನಯಿಸುತ್ತಿದ್ದಾರೆ.

English summary
A.P. Arjun directorial Mr Airavata will be released in August. The Kannada movie, in which Darshan, Urvashi Routela and Prakash raj in the lead, has created lot of hype due to it's making. Darshan would be showing his six pack body for the first time.
Please Wait while comments are loading...

Kannada Photos

Go to : More Photos