»   » ಧ್ರುವ ಸರ್ಜಾ 'ಭರ್ಜರಿ' ಚಿತ್ರದ ಶೂಟಿಂಗ್ ಡೇಟ್ ಫಿಕ್ಸ್

ಧ್ರುವ ಸರ್ಜಾ 'ಭರ್ಜರಿ' ಚಿತ್ರದ ಶೂಟಿಂಗ್ ಡೇಟ್ ಫಿಕ್ಸ್

Written by: ಜೀವನರಸಿಕ
Subscribe to Filmibeat Kannada

ಒಂದು ಕಡೆ ಭರ್ಜರಿ ಶುರು ಅಂತಾರೆ ಕೆಲವ್ರು. ಮತ್ತೊಂದು ಕಡೆ ಧ್ರುವ ಸರ್ಜಾ ಮೂಲಗಳಿಂದ ಸ್ಕ್ರಿಪ್ಟ್ ಓಕೆ ಆಗಿಲ್ಲ ಅನ್ನೋ ಮಾಹಿತಿ ಮತ್ತೊಂದು ಕಡೆಯಿಂದ ಬರ್ತಿದೆ. ಇದರ ನಡುವೆ ಭರ್ಜರಿ ಶುರುವಾಗುತ್ತೋ ಇಲ್ವೋ ಅನ್ನೋ ಡೌಟ್ ಎಲ್ಲರನ್ನೂ ಕಾಡ್ತಿತ್ತು.

ಅದ್ರೆ ಈಗ ಈ ಅನುಮಾನಕ್ಕೆ ಉತ್ತರ ಸಿಕ್ಕಿದೆ. ಧ್ರುವ ಸರ್ಜಾ ಮತ್ತು ಗುಳಿಕೆನ್ನೆಯ ಚೆಲುವೆ ರಚಿತಾರಾಮ್ ಅಭಿನಯದ ಭರ್ಜರಿ ಚಿತ್ರದ ಶೂಟಿಂಗ್ ನವೆಂಬರ್ 2ರಿಂದ ಶುರುವಾಗಲಿದೆ. ನಿರ್ದೇಶಕ ಚೇತನ್ ಮತ್ತು ಧ್ರುವ ಸರ್ಜಾರಿಗೆ ಸ್ಕ್ರಿಪ್ಟ್ ವಿಚಾರದಲ್ಲಿ ಭಿನ್ನಾಭಿಪ್ರಾಯ ಶುರುವಾಗಿ ಚಿತ್ರದ ಶೂಟಿಂಗ್ ಆರಂಭವಾಗದೇ ನಿಂತಿತ್ತು.[ಹದಿನೆಂಟು ಬಾರಿ ಸ್ಕ್ರಿಪ್ಟ್ ಬದಲಾಯಿಸಿದ ಧ್ರುವ 'ಭರ್ಜರಿ']

ಚೇತನ್ ಕೂಡ ಸ್ಕ್ರಿಪ್ಟ್ ವಿಚಾರವಾಗಿ ತುಂಬಾನೇ ತಲೆಕೆಡಿಸಿಕೊಂಡು, ಹೊಸ ರೀತಿಯಾಗಿ ಚಿತ್ರಕಥೆ ಮತ್ತು ಕಥೆಯ ಚಿತ್ರಣ ಬದಲಾಯಿಸಿದ್ದು ಈಗ ಚಿತ್ರದ ಶೂಟಿಂಗ್ಗೆ ಗ್ರೀನ್ ಸಿಗ್ನಲ್ ದೊರೆತಿದೆ.[ಯಾರ ಪೊಗರಿನಿಂದ ಧ್ರುವ ಭರ್ಜರಿಗೆ ಕತ್ತರಿ ಬಿತ್ತುರಿ?]

ಇತ್ತೀಚೆಗೆ ಧ್ರುವ ಸರ್ಜಾ ಬರ್ತಡೇ ದಿನದಂದು ಚಿತ್ರದ ಯಾವುದೇ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗದೇ ಇದ್ದಿದ್ದು ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಅನುಮನ ಹುಟ್ಟುಹಾಕಿತ್ತು. ಈಗ ಒಟ್ಟಾರೆ ವಿವಾದ ಅಂತ್ಯವಾದಂತಾಗಿದ್ದು ಶೂಟಿಂಗ್ ಶುರುವಾಗ್ತಿರೋ ಮಾಹಿತಿ ಬಂದಿದೆ.

English summary
Kannada actor Dhruva Sarja's third movie Bharjari shooting will begin from November 2, as per confirmed information. Rachita Ram is the lead actress. The movie directed by Chetan Kumar. There was romour that all is not well between director Chetan and actor Dhruva. ಧ್ರುವ ಸರ್ಜಾ 'ಭರ್ಜರಿ' ಚಿತ್ರದ ಶೂಟಿಂಗ್ ಡೇಟ್ ಫಿಕ್ಸ್
Please Wait while comments are loading...

Kannada Photos

Go to : More Photos