»   » ಕಟ್ಟುಮಸ್ತಾಗಿದ್ದ ನಟ ಧ್ರುವ ಸರ್ಜಾ ಆರೋಗ್ಯಕ್ಕೆ ಇದ್ದಕ್ಕಿದ್ದಂತೆ ಏನಾಯ್ತು?

ಕಟ್ಟುಮಸ್ತಾಗಿದ್ದ ನಟ ಧ್ರುವ ಸರ್ಜಾ ಆರೋಗ್ಯಕ್ಕೆ ಇದ್ದಕ್ಕಿದ್ದಂತೆ ಏನಾಯ್ತು?

Posted by:
Subscribe to Filmibeat Kannada

ನಟ ಧ್ರುವ ಸರ್ಜಾ ಅಭಿಮಾನಿಗಳು ಗಾಬರಿಗೊಂಡಿದ್ದಾರೆ. 'ಬಹದ್ದೂರ್ ಗಂಡು' ಅಭಿಮಾನಿ ವಲಯದಲ್ಲಿ ಆತಂಕ ಮನೆ ಮಾಡಿದೆ. ಅದಕ್ಕೆ ಕಾರಣ ನಟ ಧ್ರುವ ಸರ್ಜಾ ಆರೋಗ್ಯದಲ್ಲಿ ಆಗಿರುವ ಏರುಪೇರು!

ಹೌದು, ನಟ ಧ್ರುವ ಸರ್ಜಾ ಅನಾರೋಗ್ಯಕ್ಕೀಡಾಗಿದ್ದಾರೆ. ಅವರನ್ನ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಮಾಡಿಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಧ್ರುವ ಸರ್ಜಾ ಚಿಕಿತ್ಸೆ ಪಡೆಯುತ್ತಿದ್ದಾರೆ. ['ಭರ್ಜರಿ'ಗಾಗಿ 25 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ]


ಕಟ್ಟುಮಸ್ತಾಗಿದ್ದ ನಟ ಧ್ರುವ ಸರ್ಜಾ ಅನಾರೋಗ್ಯಕ್ಕೀಡಾಗಲು ಕಾರಣ 'ಭರ್ಜರಿ' ಚಿತ್ರದ ಚಿತ್ರೀಕರಣ. ಮುಂದೆ ಓದಿ....


ನಟ ಧ್ರುವ ಸರ್ಜಾ ರವರಿಗೆ ಏನಾಗಿದೆ?

ನಟ ಧ್ರುವ ಸರ್ಜಾ ರವರಿಗೆ ಏನಾಗಿದೆ?

ವೈರಲ್ ಫೀವರ್ ನಿಂದ ಬಳಲುತ್ತಿರುವ ನಟ ಧ್ರುವ ಸರ್ಜಾ ರವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಐ.ಸಿ.ಯುನಲ್ಲಿ ಧ್ರುವ ಸರ್ಜಾ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. [ಚಿತ್ರಗಳು: 'ಭರ್ಜರಿ' ಸೆಟ್ ನಲ್ಲಿ, 'ಭರ್ಜರಿ' ಶೂಟಿಂಗ್ ಶುರುವಾಯ್ತು ನೋಡಿ..!]


'ಭರ್ಜರಿ' ಚಿತ್ರೀಕರಣದಲ್ಲಿ ಏನಾಯ್ತು?

'ಭರ್ಜರಿ' ಚಿತ್ರೀಕರಣದಲ್ಲಿ ಏನಾಯ್ತು?

''ಕಳೆದ 7-8 ದಿನಗಳಿಂದ 'ಭರ್ಜರಿ' ಚಿತ್ರದ ಫೈಟ್ಸ್ ಹಾಗೂ ಸಾಂಗ್ ಶೂಟಿಂಗ್ ನಡೆಯುತ್ತಿತ್ತು. ಚಿತ್ರೀಕರಣದ ಸಲುವಾಗಿ ಬೆಳಗ್ಗಿನಿಂದ ಸಂಜೆವರೆಗೂ ಧ್ರುವ ಸರ್ಜಾ ಅರಿಶಿನದ ನೀರಿನಲ್ಲಿ ನೆಂದಿದ್ರು. 7-8 ದಿನ ಹೀಗೇ ಅರಿಶಿನದ ನೀರಿನಲ್ಲಿ ಇದ್ದಿದ್ರಿಂದ ಜ್ವರ ಶುರು ಆಯ್ತು'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಧ್ರುವ ಸರ್ಜಾ ಕುಟುಂಬಸ್ಥರು ತಿಳಿಸಿದ್ದಾರೆ.


ಜ್ವರ ಇದ್ದರೂ ಶೂಟಿಂಗ್ ಮಾಡಿದರು.!

ಜ್ವರ ಇದ್ದರೂ ಶೂಟಿಂಗ್ ಮಾಡಿದರು.!

''ಜ್ವರ ಇದ್ದರೂ ಶೂಟಿಂಗ್ ಮಾಡಿದರು. ಭಾನುವಾರ ಜ್ವರ ಜಾಸ್ತಿ ಆಗ್ಹೋಯ್ತು. ಸೋಮವಾರ ಬೆಳಗ್ಗೆ ಅಡ್ಮಿಟ್ ಮಾಡಿದ್ವಿ. ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ'' ಎನ್ನುತ್ತಾರೆ ಧ್ರುವ ಸರ್ಜಾ ಕುಟುಂಬಸ್ಥರು.


ವೈದ್ಯರು ಏನು ಹೇಳಿದ್ದಾರೆ?

ವೈದ್ಯರು ಏನು ಹೇಳಿದ್ದಾರೆ?

''ಇನ್ನೊಂದು ವಾರ ಕಂಪ್ಲೀಟ್ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು'' ಅಂತ ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.


'ಭರ್ಜರಿ' ನಿರ್ದೇಶಕ ಚೇತನ್ ಏನಂತಾರೆ?

'ಭರ್ಜರಿ' ನಿರ್ದೇಶಕ ಚೇತನ್ ಏನಂತಾರೆ?

''ಕನಕಪುರದ ರಾವುಗೊಡ್ಲು ಹಳ್ಳಿಯಲ್ಲಿ ಇರುವ ಆಂಜಿನೇಯ ದೇವಸ್ಥಾನದಲ್ಲಿ ಸೆಟ್ ಹಾಕಿದ್ವಿ. ಅಲ್ಲಿ ಫೈಟ್ ಶೂಟಿಂಗ್ ಮಾಡ್ತಿದ್ವಿ. ಚಿತ್ರೀಕರಣ ಆಗುವಾಗ ಮಳೆ ಕೂಡ ಬಂತು. ಹೀಗಾಗಿ ಇನ್ಫೆಕ್ಷನ್ ಆಗಿದೆ. ಈಗ ಹುಷಾರಾಗಿದ್ದಾರೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ 'ಭರ್ಜರಿ' ಚಿತ್ರದ ನಿರ್ದೇಶಕ ಚೇತನ್ ತಿಳಿಸಿದ್ದಾರೆ.


English summary
Kannada Actor Dhruva Sarja, who was suffering from Viral Fever is admitted to Manipal Hospital, Bengaluru.
Please Wait while comments are loading...

Kannada Photos

Go to : More Photos