»   » ಕನ್ನಡ ಚಾನೆಲ್ ನಲ್ಲಿ ಬಂದೇಬಿಡ್ತು ಡಬ್ಬಿಂಗ್ ಸಿನಿಮಾ?

ಕನ್ನಡ ಚಾನೆಲ್ ನಲ್ಲಿ ಬಂದೇಬಿಡ್ತು ಡಬ್ಬಿಂಗ್ ಸಿನಿಮಾ?

Written by: ಹರಾ
Subscribe to Filmibeat Kannada

ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ. ಬ್ರಿಟೀಷರಿಂದ ಸ್ವಾತಂತ್ರ ಲಭಿಸಿ 69 ವರ್ಷವಾದ ಖುಷಿಯಲ್ಲಿ ಭಾರತೀಯರು ಇದ್ದರೆ, ಇತ್ತ ಸ್ಯಾಂಡಲ್ ವುಡ್ ನಲ್ಲೂ ಡಬ್ಬಿಂಗ್ ಪರ ದನಿಯೆತ್ತಿದವರಿಗೆ ಸ್ವತಂತ್ರ ಸಿಕ್ಕಂತಾಗಿತ್ತು.

ಅದಕ್ಕೆಲ್ಲಾ ಕಾರಣ ಈಟಿವಿ (ಕಲರ್ಸ್) ಕನ್ನಡ ಚಾನೆಲ್ ನಲ್ಲಿ ಆಗಸ್ಟ್ 15 ರಂದು ಪ್ರಸಾರವಾದ 'ವಿಜಯ್ ಶಾಂತಿ' ಸಿನಿಮಾ. ಟಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ವಿಜಯಶಾಂತಿ ಅಭಿನಯಿಸಿರುವ ಚಿತ್ರ ಈ 'ವಿಜಯ್ ಶಾಂತಿ'.

ಮಹಿಳಾ ಐ.ಪಿ.ಎಸ್ ಅಧಿಕಾರಿ ಸುತ್ತ ಹೆಣೆದಿರುವ 'ವಿಜಯ್ ಶಾಂತಿ' 100% ಡಬ್ಬಿಂಗ್ ಸಿನಿಮಾ ಅನ್ನೋದು ಈಗ ಭುಗಿಲೆದ್ದಿರುವ ವಿವಾದ. ಕಲರ್ಸ್ ಕನ್ನಡ ಚಾನೆಲ್ ನಲ್ಲಿ 'ವಿಜಯ್ ಶಾಂತಿ' ಸಿನಿಮಾ ಪ್ರಸಾರ ಶುರುವಾಗ್ತಿದ್ದಂತೆ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಸೇರಿದಂತೆ ಡಬ್ಬಿಂಗ್ ಪರ ದನಿಯೆತ್ತಿದವರೆಲ್ಲರೂ ನಗೆ ಬೀರಿದ್ದಾರೆ. [ಡಬ್ಬಿಂಗ್ ಬೆಂಬಲಿಗರಿಗೆ ಆನೆಬಲ: ವಾಣಿಜ್ಯ ಮಂಡಳಿಗೆ ಮುಖಭಂಗ]

ಡಬ್ಬಿಂಗ್ ಸಿನಿಮಾಗಳನ್ನ ರಿಲೀಸ್ ಮಾಡುವುದಕ್ಕೆ ಬಿಡುವುದಿಲ್ಲ ಅಂತ ಪ್ರತಿಭಟನೆ ನಡೆಯುತ್ತಿದ್ದರೂ, ವಾಹಿನಿಯಲ್ಲಿ ಡಬ್ಬಿಂಗ್ ಸಿನಿಮಾ ಪ್ರಸಾರ ಹೇಗೆ ಸಾಧ್ಯ ಅನ್ನೋದು ಈಗ ಎಲ್ಲರ ಪ್ರಶ್ನೆಯಾಗಿದೆ. ಮುಂದೆ ಓದಿ.......

'ವಿಜಯ್ ಶಾಂತಿ' ಡಬ್ಬಿಂಗ್ ಚಿತ್ರ..?

'ವಿಜಯ್ ಶಾಂತಿ' ಡಬ್ಬಿಂಗ್ ಚಿತ್ರ..?

'ವಿಜಯ್ ಶಾಂತಿ' ಡಬ್ಬಿಂಗ್ ಸಿನಿಮಾ ಅಂತ ಸ್ಪಷ್ಟವಾಗಿ ಯಾರೂ ಹೇಳುತ್ತಿಲ್ಲ. ಕೆಲವರ ಪ್ರಕಾರ 'ವಿಜಯ್ ಶಾಂತಿ' ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಿರುವ ಚಿತ್ರ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲೂ ಚಿತ್ರ ಶೂಟ್ ಆಗಿದೆ.

ತೆಲುಗಿನಲ್ಲಿ 'ಶಾಂಭವಿ IPS'

ತೆಲುಗಿನಲ್ಲಿ 'ಶಾಂಭವಿ IPS'

2002ರಲ್ಲಿ ತೆಲುಗಿನಲ್ಲಿ 'ಶಾಂಭವಿ IPS' ಅನ್ನೋ ಶೀರ್ಷಿಕೆಯಲ್ಲಿ ಇದೇ ಸಿನಿಮಾ ರಿಲೀಸ್ ಆಗಿದೆ. ಚಿತ್ರದ ನಿರ್ದೇಶಕರು ತೆಲುಗಿನ ಖ್ಯಾತ ನಿರ್ದೇಶಕ ನಾಗೇಶ್ವರ ರಾವ್.ಕೆ.ಎಸ್. ಪರಚೂರಿ ಬ್ರದರ್ಸ್ ರಚಿಸಿರುವ ಈ ಕಥೆಗೆ ಎ.ಮಲ್ಲಿಕಾರ್ಜುನ ನಿರ್ಮಾಪಕರು.

ಬಹುತೇಕ ಎಲ್ಲರೂ ತೆಲುಗಿನವರೇ.!

ಬಹುತೇಕ ಎಲ್ಲರೂ ತೆಲುಗಿನವರೇ.!

ಸಿಜ್ಜು, ಪರಚೂರಿ ವೆಂಕಟೇಶ್ವರ್ ರಾವ್, ಗಜರ್ ಖಾನ್ ನಟಿಸಿರುವ ಈ ಚಿತ್ರದ ಆನ್ ಅಂಡ್ ಆಫ್ ಸ್ಕ್ರೀನ್ ನಲ್ಲಿ ಕೆಲಸ ಮಾಡಿರುವ ಬಹುತೇಕರು ಟಾಲಿವುಡ್ ಮಂದಿ.

ಕನ್ನಡ ನಿರ್ಮಾಪಕರು ಬೇರೆ.!

ಕನ್ನಡ ನಿರ್ಮಾಪಕರು ಬೇರೆ.!

'ವಿಜಯ್ ಶಾಂತಿ' ಕನ್ನಡ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ತೋರಿಸಿರುವ ನಿರ್ಮಾಪಕರ ಹೆಸರು 'ಅಮೇರಿಕಾ..ಅಮೇರಿಕಾ' ಚಿತ್ರದ ಖ್ಯಾತಿಯ ಜಿ.ನಂದಕುಮಾರ್.

ಬೇರೆ ಬೇರೆ ನಿರ್ಮಾಪಕರು ಹೇಗೆ ಸಾಧ್ಯ?

ಬೇರೆ ಬೇರೆ ನಿರ್ಮಾಪಕರು ಹೇಗೆ ಸಾಧ್ಯ?

''ಕನ್ನಡ ಮತ್ತು ತೆಲುಗಿನಲ್ಲಿ 'ವಿಜಯ್ ಶಾಂತಿ' ಸಿನಿಮಾ ಏಕಕಾಲಕ್ಕೆ ತಯಾರಾಗಿದ್ದರೆ ನಿರ್ಮಾಪಕರು ಬೇರೆ ಬೇರೆ ಆಗಲು ಹೇಗೆ ಸಾಧ್ಯ? ಡಬ್ಬಿಂಗ್ ರೈಟ್ಸ್ ಕೊಂಡುಕೊಂಡೋರೇ ಇಲ್ಲಿನ ನಿರ್ಮಾಪಕರಲ್ಲವೇ'' ಅಂತ ಡಬ್ಬಿಂಗ್ ಪರ ನಿಂತಿರುವವರು ಪ್ರಶ್ನೆ ಹಾಕಿದ್ದಾರೆ.

ಲಿಪ್ ಸಿಂಕ್ ಇಲ್ಲ.!

ಲಿಪ್ ಸಿಂಕ್ ಇಲ್ಲ.!

''ನಟಿ ವಿಜಯಶಾಂತಿ ಮತ್ತು ಮುಖ್ಯಭೂಮಿಕೆಯಲ್ಲಿರುವ ಅನೇಕರ ವಾಯ್ಸ್ ಗೆ ಲಿಪ್ ಸಿಂಕ್ ಇಲ್ಲ. ಕೆಲ ಸನ್ನಿವೇಶಗಳಲ್ಲಿ ಅವರೆಲ್ಲಾ ತೆಲುಗಿನಲ್ಲಿ ಡೈಲಾಗ್ಸ್ ಹೇಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತೆ. ಅಂದ್ಮೇಲೆ ಇದು 100% ಡಬ್ಬಿಂಗ್ ಸಿನಿಮಾ'' ಅನ್ನೋದು ಕೃಷ್ಣೇಗೌಡ ಅವರ ವಾದ. [ನಿರ್ಣಾಯಕ ಘಟ್ಟಕ್ಕೆ ಬಂದು ನಿಂತ ಡಬ್ಬಿಂಗ್ ವಿವಾದ, ಏನಾಗುತ್ತೋ?]

ಎಲ್ಲಾ ಎಡಿಟಿಂಗ್ ಪ್ರಾಬ್ಲಂ!

ಎಲ್ಲಾ ಎಡಿಟಿಂಗ್ ಪ್ರಾಬ್ಲಂ!

'ವಿಜಯ್ ಶಾಂತಿ' ಡಬ್ಬಿಂಗ್ ಸಿನಿಮಾ ಅಂತ ಒಪ್ಪಿಕೊಳ್ಳದ ಕೆಲವರು ''ಎಡಿಟಿಂಗ್ ನಲ್ಲಿ ಪ್ರಾಬ್ಲಂ ಇರಬೇಕು, ಅದಕ್ಕೆ ಸಿಂಕ್ ಆಗಿಲ್ಲ'' ಅಂತ ಸಮಜಾಯಿಷಿ ಕೊಡುತ್ತಾರೆ.

ಬ್ಯಾಕ್ ಗ್ರೌಂಡ್ ಮ್ಯೂಸಿಕ್ ''ಶಾಂಭವಿ...ಶಾಂಭವಿ...''

ಬ್ಯಾಕ್ ಗ್ರೌಂಡ್ ಮ್ಯೂಸಿಕ್ ''ಶಾಂಭವಿ...ಶಾಂಭವಿ...''

'ವಿಜಯ್ ಶಾಂತಿ' ಅಪ್ಪಟ ಕನ್ನಡ ಚಿತ್ರವಾಗಿದ್ದರೆ ನಾಯಕಿಯ ಹೆಸರು ವಿಜಯಶಾಂತಿ ಆಗಿರುತ್ತಿತ್ತು. ತೆಲುಗಿನ ಶೀರ್ಷಿಕೆಯಂತೆ ಶಾಂಭವಿ ಆಗುತ್ತಿರಲಿಲ್ಲ. ಹಾಗೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ''ಶಾಂಭವಿ...ಶಾಂಭವಿ...'' ಅಂತ ಬರುತ್ತಿರಲಿಲ್ಲ ಅಂತ ಡಬ್ಬಿಂಗ್ ಪರ ನಿರ್ಮಾಪಕರು ಹೇಳ್ತಾರೆ.

ಇಂತಹ ಹಲವು ಡಬ್ಬಿಂಗ್ ಸಿನಿಮಾಗಳು ಪ್ರಸಾರಕ್ಕೆ ರೆಡಿಯಿವೆ.!

ಇಂತಹ ಹಲವು ಡಬ್ಬಿಂಗ್ ಸಿನಿಮಾಗಳು ಪ್ರಸಾರಕ್ಕೆ ರೆಡಿಯಿವೆ.!

ಗಾಂಧಿನಗರದ ಮೂಲಗಳ ಪ್ರಕಾರ ಇಂತಹ ಹಲವಾರು ಡಬ್ಬಿಂಗ್ ಸಿನಿಮಾಗಳು ಪ್ರಸಾರಕ್ಕೆ ಕಾಯುತ್ತಾ ಕುಳಿತಿವೆ. ಸಮಯ ನೋಡಿಕೊಂಡು ಒಂದೊಂದೇ ಹೊರಬರಲಿದ್ಯಂತೆ. [ಇನ್ನು ಡಬ್ಬಿಂಗ್ ತಡೆಯೋಕಾಗಲ್ಲ, ನೋಡ್ತಾ ಇರಿ ಏನೇನಾಗತ್ತೆ ಅಂತ!]

ವಾಟಾಳ್ ನಾಗರಾಜ್ ಅವರೇ ನಿಮಗೆ ಇದೆಲ್ಲಾ ಕಾಣುತ್ತಿದ್ಯಾ?

ವಾಟಾಳ್ ನಾಗರಾಜ್ ಅವರೇ ನಿಮಗೆ ಇದೆಲ್ಲಾ ಕಾಣುತ್ತಿದ್ಯಾ?

ಸ್ವಾತಂತ್ರ್ಯ ದಿನಾಚರಣೆಯಂದೇ ಕನ್ನಡ ಟಿವಿ ವಾಹಿನಿಯಲ್ಲಿ ಡಬ್ಬಿಂಗ್ ಸಿನಿಮಾ ಪ್ರಸಾರವಾಯ್ತು ಅಂತ ಕೆಲವರು ಫುಲ್ ಖುಷ್ ಆಗಿದ್ದಾರೆ. 'ವಿಜಯ್ ಶಾಂತಿ' ಡಬ್ಬಿಂಗ್ ಅಲ್ಲವೇ ಅಲ್ಲ ಅಂತ ಇನ್ನೂ ಕೆಲವರು ವಾದಿಸುತ್ತಾರೆ. ಯಾವುದು ಸರಿ ಯಾವುದು ತಪ್ಪು ಅಂತ ಸಿನಿಮಾ ಮಾಡಿದವರಿಗೇ ಗೊತ್ತು. ಆದ್ರೆ, ಡಬ್ಬಿಂಗ್ ವಿರುದ್ಧ ತೊಡೆ ತಟ್ಟಿರುವ ವಾಟಾಳ್ ನಾಗರಾಜ್ ಅವರಿಗೆ ಇಂತಹ ಬೆಳವಣಿಗೆ ಗಮನಕ್ಕೆ ಬಂದಿದ್ಯೋ..ಇಲ್ವೋ..?! [ಗಂಡಸುತನವಿದ್ದರೆ ಡಬ್ಬಿಂಗ್ ಮಾಡಲಿ : ವಾಟಾಳ್ ವಾರ್ನಿಂಗ್!]

English summary
On August 15th, Colours Kannada Channel telecasted a film called 'Vijayashanthi', which features Tollywood Actress Vijayashanthi in the lead role. According to few, 'Vijayashanthi' is a Dubbing film. So, are Kannada Channels open to Dubbing films? is a question as of now.
Please Wait while comments are loading...

Kannada Photos

Go to : More Photos