»   » ಜನಪ್ರಿಯ ರೀಲ್ ಜೋಡಿ ರಿಯಲ್ಲಾಗಿ ಮದ್ವೆಯಾದ್ರು!

ಜನಪ್ರಿಯ ರೀಲ್ ಜೋಡಿ ರಿಯಲ್ಲಾಗಿ ಮದ್ವೆಯಾದ್ರು!

ಕೇರಳ ಸಿನಿ ಪ್ರಪಂಚದ ಅತ್ಯಂತ ಜನಪ್ರಿಯ ಜೋಡಿ ದಿಲೀಪ್ ಹಾಗೂ ಕಾವ್ಯ ಮಾಧವನ್ ಕೊನೆಗೂ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ.

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕೇರಳ ಸಿನಿ ಪ್ರಪಂಚದ ಅತ್ಯಂತ ಜನಪ್ರಿಯ ಜೋಡಿ ದಿಲೀಪ್ ಹಾಗೂ ಕಾವ್ಯ ಮಾಧವನ್ ಕೊನೆಗೂ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ. ಮೊದಲ ಮದುವೆಯ ವಿವಾಹ ಬಂಧನ ಕಳಚಿಕೊಂಡಿರುವ ಈ ತಾರಾಜೋಡಿ ಈಗ ಶುಕ್ರವಾರದಂದು ಸತಿ ಪತಿಯಾಗಿದ್ದಾರೆ.

ದಿಲೀಪ್ ಹಾಗೂ ಕಾವ್ಯ ಮಾಧವನ್ ಮದುವೆಗೆ ದಿಲೀಪ್ ಅವರ ಮಗಳು ಮೀನಾಕ್ಷಿಯ ಸಮ್ಮತಿ ಪಡೆದ ನಂತರವಷ್ಟೇ ದಿಲೀಪ್ ಅವರು ಹಸೆಮಣೆ ಏರಿದ್ದಾರೆ. ಮದುವೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೀನಾಕ್ಷಿ, ಅಪ್ಪ ದಿಲೀಪ್ ಮದ್ವೆಯಿಂದ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. [ನಂ.1 ತಾರಾ ಜೋಡಿ ಸಂಸಾರ ಛಿದ್ರ ಛಿದ್ರ]

ಕೊಚ್ಚಿಯ ಖಾಸಗಿ ಹೋಟೆಲ್ ವೊಂದರಲ್ಲಿ ಸಾಂಪ್ರದಾಯಿಕ ಮಲಯಾಳಿ ಉಡುಗೆ ತೊಡಗೆ ತೊಟ್ಟ ದಿಲೀಪ್ ಹಾಗೂ ಕಾವ್ಯ ಅವರ ಚಿತ್ರಗಳು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ತುಂಬಿ ಕೊಂಡಿವೆ.

ಪ್ರತಿಭಾವಂತ ತಾರೆಯರಾದ ಮಂಜು ವಾರಿಯರ್ ಹಾಗೂ ದಿಲೀಪ್ ಸಂಸಾರದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ದಿಲೀಪ್ ಹಾಗೂ ಮಂಜು ಇಬ್ಬರು ಪರಸ್ಪರ ಒಪ್ಪಿಕೊಂಡು ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

ಒಂದು ಕಾಲದಲ್ಲಿ ಕೇರಳದ ಟಾಪ್ ನಟಿಯಾಗಿದ್ದ ಮಂಜುಗೆ ದಿಲೀಪ್ ಪ್ರಪೋಸ್ ಮಾಡಿದ್ದು ಮೊದಲಿಗೆ ರಿಜೇಕ್ಟ್ ಆಗಿತ್ತಂತೆ. ಕೊನೆಗೂ ಮಂಜು ಒಪ್ಪಿ 1998ರಲ್ಲಿ ದಿಲೀಪ್ ರನ್ನು ವರಿಸಿದ್ದರು. ದಿಲೀಪ್ ಆಗಿನ್ನೂ ಚಿತ್ರರಂಗದಲ್ಲಿ ಯಶಸ್ಸಿನ ರುಚಿ ಕಾಣಲು ಹಂಬಲಿಸುತ್ತಿದ್ದರು. ನಂತರ ದಿಲೀಪ್ ಕೂಡಾ ಜನಪ್ರಿಯ ಸ್ಟಾರ್ ಆಗಿ ಮಮ್ಮೂಟಿ, ಮೋಹನ್ ಲಾಲ್ ಸಾಲಿಗೆ ಸೇರಿದ್ದು ಈಗ ಇತಿಹಾಸ.

ಮದುವೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿ ಹಬ್ಬಿತ್ತು

ಮದುವೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿ ಹಬ್ಬಿತ್ತು

ದಿಲೀಪ್ ಹಾಗೂ ಕಾವ್ಯ ಮಾಧವನ್ ಅವರ ಮದುವೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿ ಹಬ್ಬಿತ್ತು. ದಿಲೀಪ್ ಅವರು ಮಂಜು ಅವರಿಂದ ವಿವಾಹ ವಿಚ್ಛೇದನ ಪಡೆದ ಮೇಲೆ ಕಾವ್ಯ ಅವರನ್ನು ಮದುವೆಯಾಗಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹೆಚ್ಚಾಗಿತ್ತು. ಆದರೆ, ಆಗೆಲ್ಲ ಸುದ್ದಿಯನ್ನು ಅಲ್ಲಗೆಳೆದಿದ್ದ ಕಾವ್ಯ ಈಗ ತಮ್ಮ ನೆಚ್ಚಿನ ಜೋಡಿ ದಿಲೀಪ್ ರನ್ನೇ ವರಿಸಿದ್ದಾರೆ.

ಸಾಂಪ್ರದಾಯಿಕ ಮಲ್ಲೂ ಬೆಡಗಿ ಕಾವ್ಯ

ಸಾಂಪ್ರದಾಯಿಕ ಮಲ್ಲೂ ಬೆಡಗಿ ಕಾವ್ಯ

ಮಲ್ಲೂ ಬೆಡಗಿ ಕಾವ್ಯ ಅವರು ಹಸಿರು, ಚಿನ್ನದ ಬಣ್ಣದ ಅಂಚು ಬಿಳಿ ಸೀರೆ ತೊಟ್ಟು ಮಲೆಯಾಳಿ ವಧುವಿನ ರೂಪದಲ್ಲಿ ಕಂಗೊಳಿಸುತ್ತಿದ್ದರು. ಕೇರಳದ ಬಹುತೇಕ ಮದುವೆಗಳಂತೆ ಕಾವ್ಯ ಅವರ ಮೈತುಂಬಾ ಆಭರಣಗಳು ಎದ್ದು ಕಾಣುತ್ತಿದ್ದವು.

ಮಿಥುನ್ ಅವರು ಕನ್ಯಾದಾನ ನೆರವೇರಿಸಿದರು

ಮಿಥುನ್ ಅವರು ಕನ್ಯಾದಾನ ನೆರವೇರಿಸಿದರು

ಕೊಚ್ಚಿಯ ಹೋಟೆಲ್ ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕಾವ್ಯ ಅವರ ಸೋದರ ಮಿಥುನ್ ಅವರು ಕನ್ಯಾದಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಆಪ್ತ ಬಂಧುಮಿತ್ರರು ಹಾಗೂ ನೀಲಶ್ವರಮ್ ಕುಟುಂಬಸ್ಥರು ಉಪಸ್ಥಿತರಿದ್ದರು.

ದಿಲೀಪ್ ಪುತ್ರಿ ಮೀನಾಕ್ಷಿ ಗ್ರೀನ್ ಸಿಗ್ನಲ್

ದಿಲೀಪ್ ಪುತ್ರಿ ಮೀನಾಕ್ಷಿ ಗ್ರೀನ್ ಸಿಗ್ನಲ್

ಕಾವ್ಯ -ದಿಲೀಪ್ ಮದುವೆಗೆ ದಿಲೀಪ್ ಅವರ ಮೊದಲ ಮದುವೆಯಿಂದ ಜನಿಸಿದ ಪುತ್ರಿ ಮೀನಾಕ್ಷಿಯ ಒಪ್ಪಿಗೆ ಮುಖ್ಯವಾಗಿತ್ತು. ತಂದೆಯ ಮದುವೆಗೆ ಒಪ್ಪಿಗೆ ನೀಡಿದ ಮೀನಾಕ್ಷಿ, ಹೊಸ ಅಮ್ಮ ಹಾಗೂ ಅಪ್ಪ ದಿಲೀಪ್ ಜತೆಗೆ ಫೋಟೊ ತೆಗೆಸಿಕೊಂಡರು.

ವಿವಾಹಕ್ಕೆ ಆಗಮಿಸಿದ ಗಣ್ಯಾತಿಗಣ್ಯರು

ವಿವಾಹಕ್ಕೆ ಆಗಮಿಸಿದ ಗಣ್ಯಾತಿಗಣ್ಯರು

ಮಮ್ಮೂಟಿ, ಸಿದ್ದಿಕಿ, ಜಯರಾಮ್, ಮೀರಾ ಜಸ್ಮೀನ್, ನಿರ್ದೇಶಕ ಜೋಶಿಯ್, ಲಾಲ್, ನಿರ್ಮಾಪಕ ಸುರೇಶ್ ಕುಮಾರ್, ರೆಂಜಿತ್ ರೆಜಾಪುತ್ರಾ ಮುಂತಾದವರು ವಿವಾಹಕ್ಕೆ ಆಗಮಿಸಿ, ಶುಭಹಾರೈಸಿದರು.

ಸರಳವಾಗಿ ನಡೆದ ಮದುವೆ

ಸರಳವಾಗಿ ನಡೆದ ಮದುವೆ

ಸರಳವಾಗಿ ನಡೆದ ಮದುವೆ ಸಮಾರಂಭದ ಬಗ್ಗೆ ದಿಲೀಪ್ ಹಾಗೂ ಕಾವ್ಯ ಅವರ ಆಪ್ತರಿಗೆ ಮಾತ್ರ ತಿಳಿದಿತ್ತು. ಫೇಸ್ ಬುಕ್ ಮೂಲಕ ಎಲ್ಲರಿಗೂ ಈ ವಿಷಯ ಬಹಿರಂಗ ಪಡಿಸಲಾಯಿತು. ನೂತನ ದಂಪತಿಗಳು ತಮ್ಮ ಮುಂದಿನ ಯೋಜನೆ ಬಗ್ಗೆ ತಿಳಿಸುತ್ತಾರೆ ಎಂಬ ಮಾಹಿತಿ ಇದೆ.

ದುಬೈಗೆ ಹಾರಲಿರುವ ನೂತನ ದಂಪತಿ

ದುಬೈಗೆ ಹಾರಲಿರುವ ನೂತನ ದಂಪತಿ

ದುಬೈಗೆ ಹಾರಲಿರುವ ನೂತನ ದಂಪತಿಗಳು ಹನಿಮೂನ್ ಅಲ್ಲೇ ಮುಗಿಸುವ ಸಾಧ್ಯತೆಯಿದೆ. ನಂತರ ದಿಲೀಪ್ ಹಾಗೂ ಕಾವ್ಯ ಅವರಿಗಾಗಿ ಮಮ್ಮೂಟಿ ಅವರು ವಿಶೇಷ ಡಿನ್ನರ್ ನೀಡುತ್ತಾರೆ ಎಂಬ ಸುದ್ದಿಯಿದೆ.

English summary
Dileep and Kavya Madhavan, the most celebrated star pair of Mollywood, are finally getting married. As per the official reports, Dileep and Kavya tied the knot today, at a private hotel in Kochi.
Please Wait while comments are loading...

Kannada Photos

Go to : More Photos