»   » ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಕನಸು ಭಗ್ನ

ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಕನಸು ಭಗ್ನ

Written by: ಹರಾ
Subscribe to Filmibeat Kannada

ಬಾಲಿವುಡ್ ನ ಸೂಪರ್ ಡ್ಯೂಪರ್ ಹಿಟ್ 'ದಬ್ಬಂಗ್' ಚಿತ್ರವನ್ನ ಕನ್ನಡದಲ್ಲಿ ರೀಮೇಕ್ ಮಾಡುತ್ತಿರುವ ಸುದ್ದಿಯನ್ನ ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ದೀರಾ. ಹಾಗೆ, 'ಬಾಲಿವುಡ್ ಸುಲ್ತಾನ್' ಸಲ್ಮಾನ್ ಖಾನ್ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುವ ವಿಚಾರವನ್ನೂ ನೀವು ತಿಳಿದುಕೊಂಡಿದ್ದೀರಾ.

'ಕನ್ವರ್ ಲಾಲ್' ಚಿತ್ರ ಇದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ, ಅಂದ್ರೆ ಜನವರಿ 15 ಕ್ಕೆ ಸೆಟ್ಟೇರಬೇಕಾಗಿತ್ತು. ಆದ್ರೆ, ಆರಂಭಕ್ಕೂ ಮುನ್ನವೇ 'ಕನ್ವರ್ ಲಾಲ್'ಗೆ ಸಂಕಟ ಎದುರಾಗಿದೆ. 'ಕನ್ವರ್ ಲಾಲ್' ಚಿತ್ರತಂಡದಿಂದ ನಿರ್ದೇಶಕ ಎಂ.ಡಿ.ಶ್ರೀಧರ್ ಹಿಂದೆ ಸರಿದ್ದಿದ್ದಾರೆ.


Ganesh1

ಹೌದು, ನಿರ್ಮಾಪಕ ದಿನೇಶ್ ಗಾಂಧಿ, ಎಲ್ಲಾ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರಿಗೆ ಹೊರಡಿಸಿದ ಪ್ರಕಟಣೆಯ ಪ್ರಕಾರ 'ಕನ್ವರ್ ಲಾಲ್' ಚಿತ್ರದ ನಿರ್ದೇಶಕರು ಎಂ.ಡಿ.ಶ್ರೀಧರ್. ಈಗಾಗಲೇ, ಗಣೇಶ್ ಗಾಗಿ 'ಚೆಲ್ಲಾಟ', 'ಕೃಷ್ಣ', 'ಬುಗುರಿ' ಚಿತ್ರಗಳನ್ನ ನಿರ್ದೇಶಿಸಿರುವ ಎಂ.ಡಿ.ಶ್ರೀಧರ್, 'ಕನ್ವರ್ ಲಾಲ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ ಅಂತ ದಿನೇಶ್ ಗಾಂಧಿ ಅನೌನ್ಸ್ ಮಾಡಿದ್ದರು. [ಖಾಕಿ ತೊಟ್ಟು 'ಕನ್ವರ್ ಲಾಲ್' ಆದ ಗಣೇಶ್]


ಆದ್ರೆ, ಅಸಲಿಗೆ ಆಗಿರುವುದೇ ಬೇರೆ. ನಿರ್ದೇಶಕ ಎಂ.ಡಿ.ಶ್ರೀಧರ್ ರಿಂದ ಯಾವುದೇ ಅಧಿಕೃತ ಒಪ್ಪಿಗೆ ಪಡೆಯದೇ ನಿರ್ಮಾಪಕ ದಿನೇಶ್ ಗಾಂಧಿ ಪತ್ರಿಕೆಗಳಿಗೆ ಪ್ರಕಟಣೆ ಹೊರಡಿಸಿದ್ದಾರೆ. ಒಮ್ಮೆ ಮಾತುಕತೆ ನಡೆಸಿದಾಗಲೂ, ''ಆದ್ರೆ ನೋಡೋಣ'' ಅಂತ ಎಂ.ಡಿ.ಶ್ರೀಧರ್ ಹೇಳಿದ್ದರೇ ಹೊರತು ಅಗ್ರೀಮೆಂಟ್ ಗೆ ಸಹಿ ಹಾಕಿರಲಿಲ್ಲವಂತೆ.


Ganesh2

ಹೇಳಿ ಕೇಳಿ, 'ಕನ್ವರ್ ಲಾಲ್' ಹಿಂದಿಯ 'ದಬ್ಬಂಗ್' ಚಿತ್ರದ ರೀಮೇಕ್. ಈಗಾಗಲೇ ಅನೇಕ ಹಿಟ್ ರೀಮೇಕ್ ಚಿತ್ರಗಳನ್ನ ಎಂ.ಡಿ.ಶ್ರೀಧರ್ ನೀಡಿರುವ ಕಾರಣ, 'ಕನ್ವರ್ ಲಾಲ್'ಗೆ ಅವರೇ ಬೆಸ್ಟು ಅಂತ ತಮಗೆ ತಾವೇ ನಿರ್ಧರಿಸಿದ ನಿರ್ಮಾಪಕರು ಮುಂದಕ್ಕೆ ಹೆಜ್ಜೆ ಇಟ್ಟುಬಿಟ್ಟಿದ್ದಾರೆ. ಇದು ನಿರ್ದೇಶಕ ಎಂ.ಡಿ.ಶ್ರೀಧರ್ ಗೆ ಕಿರಿಕಿರಿ ಉಂಟು ಮಾಡಿದೆ.


ನಿರ್ದೇಶಕ ಎಂ.ಡಿ.ಶ್ರೀಧರ್ ಸದ್ಯಕ್ಕೆ ಇದೇ ಗಣೇಶ್ ಅಭಿನಯದ 'ಬುಗುರಿ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿದ್ದಾರೆ. 'ಬುಗುರಿ'ಗೆ ಅವರೇ ನಿರ್ದೇಶನ ಮತ್ತು ನಿರ್ಮಾಣ ಹೊತ್ತಿರುವುದರಿಂದ ಟೆನ್ಷನ್ ಸಹಜವಾಗೇ ಜಾಸ್ತಿಯಿದೆ. ಹೊಸ ಚಿತ್ರವನ್ನ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ. ಒಪ್ಪಿಕೊಂಡರೆ, ಎರಡೂ ಚಿತ್ರಗಳ ಕ್ವಾಲಿಟಿ ಹಾಳಾಗುತ್ತೆ ಅನ್ನುವುದು ಎಂ.ಡಿ.ಶ್ರೀಧರ್ ಅಭಿಪ್ರಾಯ.


Ganesh3

ಆದ್ರೆ, ಈ ಸಂಗತಿ ನಿರ್ಮಾಪಕ ದಿನೇಶ್ ಗಾಂಧಿಗೆ ಅರ್ಥವಾಗುತ್ತಿಲ್ಲ. ಎಂ.ಡಿ.ಶ್ರೀಧರ್ರೇ ಬೇಕು ಅಂತ ದುಂಬಾಲು ಬೀಳ್ತಿದ್ದಾರಂತೆ. ಗಾಂಧಿನಗರದ ಮತ್ತೊಂದು ಮೂಲಗಳ ಪ್ರಕಾರ ನಿರ್ಮಾಪಕ ದಿನೇಶ್ ಗಾಂಧಿ ಸ್ವಲ್ಪ ಕಿರಿಕ್ಕು. ಸಂಭಾವನೆ ವಿಷಯದಲ್ಲಿ ಎಡವಟ್ಟು ಮಾಡುವ ದಿನೇಶ್ ಗಾಂಧಿಯ ಸಹವಾಸವೇ ಬೇಡ ಅಂತ ಎಂ.ಡಿ.ಶ್ರೀಧರ್ ಒಪ್ಪಿಕೊಳ್ಳುತ್ತಿಲ್ಲ ಅನ್ನುವವರೂ ಇದ್ದಾರೆ.


ಯಾರು ಏನೇ ಅಂದರೂ, ಬಿಟ್ಟರೂ ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಆಗುವ ಕನಸು ಭಗ್ನವಾಗಿದೆ. ಮುಹೂರ್ತಕ್ಕೂ ಮುನ್ನವೇ 'ಕನ್ವರ್ ಲಾಲ್' ಸಾರಥಿಯಿಲ್ಲದ ದೋಣಿಯಾಗಿದೆ. ಪ್ಲಾನ್ ಪ್ರಕಾರ ಇನ್ನು ಮೂರು ದಿನಗಳಲ್ಲಿ ಸೆಟ್ಟೇರಬೇಕಾಗಿರುವ 'ಕನ್ವರ್ ಲಾಲ್' ಚಿತ್ರಕ್ಕೆ ಮತ್ತಿನ್ಯಾವ ಯಾವ ನಿರ್ದೇಶಕರು ಕೈ ಜೋಡಿಸುತ್ತಾರೋ ಕಾದುನೋಡಬೇಕು.

English summary
Director M.D.Shridhar of BulBul fame walks out of Golden Star Ganesh's new venture 'Kanvarlal'. As, M.D.Shridhar is busy with post-production of his new film Buguri, has turned down this new offer.
Please Wait while comments are loading...

Kannada Photos

Go to : More Photos