ಮೈನಾ ತೆರೆಗೆ ಮುನ್ನ, ನಿರ್ದೇಶಕ ನಾಗಶೇಖರ್ ಸಂದರ್ಶನ

Written by: *ಬಾಲರಾಜ್ ತಂತ್ರಿ

ವಿಭಿನ್ನ ಚಿತ್ರಗಳನ್ನು ನೀಡುವ ನಿರ್ದೇಶಕ ನಾಗಶೇಖರ್ ಅವರ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನೈಜ ಕಥಾದಾರಿತ 'ಮೈನಾ' ಚಿತ್ರ ಇದೇ ಶುಕ್ರವಾರ (ಫೆ 22) ತೆರೆಗೆ ಬರಲು ಸಜ್ಜಾಗಿದೆ.

ಒಂದು ಕಾಲದಲ್ಲಿ ಕಾಮಿಡಿ ನಟನಾಗಿ ಗುರುತಿಸಿಕೊಂಡಿದ್ದ ನಾಗಶೇಖರ್ ಅರಮನೆ ಮತ್ತು ಸಂಜು ವೆಡ್ಸ್ ಗೀತಾ ಚಿತ್ರ ನಿರ್ದೇಶಿಸಿ ಜನಪ್ರಿಯರಾದವರು. ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಕುಮಾರು ತಮ್ಮ ವೃತ್ತಿ ಜೀವನದಲ್ಲಿ ಕಂಡ ನೈಜ ಘಟನೆಗಳನ್ನು ಆಧರಿಸಿದ ಪ್ರೇಮ ಕಥೆಯೇ 'ಮೈನಾ' ಚಿತ್ರ.

ಚೇತನ್, ನಿತ್ಯಾ ಮೆನನ್, ಶರತ್ ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಒನ್ ಇಂಡಿಯಾ ಕನ್ನಡಕ್ಕೆ ನಿರ್ದೇಶಕ ನಾಗಶೇಖರ್ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಸಂದರ್ಶನ ನಡೆಸಿದವರು ಬಾಲರಾಜ್ ತಂತ್ರಿ.

ಪ್ರ: ಮೈನಾ ಒಂದು ನೈಜ ಕಥಾದಾರಿತ ಚಿತ್ರ. ಚಿತ್ರಕಥೆಯ ಬಗ್ಗೆ?
ಉ: ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಅವರು ಸುಮಾರು 93 ಮರ್ಡರ್ ಕೇಸುಗಳನ್ನು ಇನ್ವೆಸ್ಟಿಗೇಟ್ ಮಾಡಿದ್ದರು. ಅದರಲ್ಲಿ ಬರುವ ಒಂದು murder mystery ಕಥೆಯೇ ಚಿತ್ರಕಥೆ.

ಪ್ರ: ತಮಿಳು ನಟ ಶರತ್ ಕುಮಾರ್ ಯಾವ ಪಾತ್ರದಲ್ಲಿ ನಟಿಸಿದ್ದಾರೆ?
ಉ: ಖಡಕ್ ಪೋಲೀಸ್ ಅಧಿಕಾರಿ ಅಶೋಕ್ ಕುಮಾರ್ ಪಾತ್ರದಲ್ಲಿ ಶರತ್ ಕುಮಾರ್ ನಟಿಸಿದ್ದಾರೆ. ಶರತ್ ಕುಮಾರ್ ಪಕ್ಕಾ ಪ್ರೊಫೆಸನಲ್ ಮತ್ತು ಕಮಿಟೆಡ್ ನಟ.

ಪ್ರ: ಚಿತ್ರದ ಮೇಕಿಂಗ್ ಬಗ್ಗೆ ಹೇಳಿ?
ಉ: ಚಿತ್ರಕ್ಕೆ ಎಲ್ಲೂ ಕುಂದುಕೊರತೆ ಬರದಂತೆ ಚಿತ್ರ ನಿರ್ಮಿಸಿದ್ದೇವೆ. ಚಿತ್ರ ಟೆಕ್ನಿಕಲಿ ತುಂಬಾ ರಿಚ್ ಆಗಿದೆ. ಸಂಜು ವೆಡ್ಸ್ ಗೀತಾ ಟೀಂನಲ್ಲಿದ್ದವರೆಲ್ಲಾ ಇಲ್ಲೂ ಇದ್ದಾರೆ.

ಪ್ರ: ವಿದೇಶಕ್ಕೆ ಎಲ್ಲಾದ್ರೂ ಶೂಟಿಂಗಿಗೆ ಹೋಗಿದ್ರಾ?
ಉ: ಇದುವರೆಗಿನ ನನ್ನ ಚಿತ್ರಕ್ಕೆ ಹೊರದೇಶಕ್ಕೆ ಹೋಗಿಲ್ಲ. ಕರ್ನಾಟಕದಲ್ಲೇ ಬೇಕಾದಷ್ಟು ಪ್ರಶಸ್ತ ತಾಣಗಳಿವೆ. ಕರ್ನಾಟಕ, ಚೆನ್ನೈ ಮತ್ತು ಗೋವಾ ಗಡಿ ಭಾಗದಲ್ಲಿರುವ ದೂದ್ ಸಾಗರ್ ನಲ್ಲಿ ಶೂಟಿಂಗ್ ಮಾಡಿದ್ದೇವೆ.

ಪ್ರ: ಚಿತ್ರ ಹೊರ ರಾಜ್ಯದಲ್ಲೂ ಬಿಡುಗಡೆಯಾಗುತ್ತಿದೆ ಎನ್ನುವ ಸುದ್ದಿಯಿದೆ?
ಉ: ಈ ಚಿತ್ರ ಕನ್ನಡ ಸೇರಿ ಮೂರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಅವತರಿಣಿಕೆಯನ್ನೇ ಬೇರೆ ರಾಜ್ಯದಲ್ಲಿ ಬಿಡುಗಡೆ ಮಾಡಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೆಲವರಿಗೆ ಕನ್ನಡ ಚಿತ್ರವೆಂದರೆ ಅಸಡ್ಡೆ. ನೋಡೋಣ..

ಪ್ರ: ಚಿತ್ರದಲ್ಲಿ ನೀವು ಬಳಸಿಕೊಂಡ ಒಂದು ಹಾಡಿನ ಬಗ್ಗೆ ಭಿನ್ನಾಭಿಪ್ರಾಯವಿದೆಯಲ್ಲಾ?
ಉ: ಹೌದು. ಈ ಸಂಬಂಧ ನಿರ್ಮಾಪಕ ಮತ್ತು ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದೇನೆ. ಹಣಕಾಸು ವಿಲೇವಾರಿ ಬಗ್ಗೆ ಮಾತುಕತೆ ನಡೆಯುತ್ತಿದೆ. It will be solved.

ಪ್ರ: ಬೆಂಗಳೂರಿನ ಮಲ್ಟಿಪ್ಲೆಕ್ಷ್ ಗಳು ಮೈನಾ ಚಿತ್ರ ಬಿಡುಗಡೆಗೆ ಮುಂದಾಗಿದೆಯಾ?
ಉ: ನಗರದಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಷ್ ಗಳು ಚಿತ್ರ ಬಿಡುಗಡೆ ಮಾಡುತ್ತಿವೆ. ಒಟ್ಟು ರಾಜ್ಯಾದ್ಯಂತ 120 ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಪ್ರ: ಕನ್ನಡ ಚಿತ್ರಗಳು ಇತ್ತೀಚೆಗೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ?
ಉ: ಇದೊಂದು ಬಹಳ ಸಂತೋಷದ ವಿಷಯ. ಕನ್ನಡ ಚಿತ್ರಗಳು ಗೆದ್ದರೆ ನಿರ್ದೇಶಕ, ನಿರ್ಮಾಪಕರ ಪಯತ್ನ ಸಾರ್ಥಕ.

ಪ್ರ: ಕನ್ನಡ ಆಡಿಯನ್ಸ್ ಬಗ್ಗೆ?
ಉ: ಎಲ್ಲರ ಚಿತ್ರವನ್ನು ನೋಡಿ, ಜೊತೆಗೆ ನನ್ನ ಚಿತ್ರವನ್ನೂ ನೋಡಿ. ಚಿತ್ರಮಂದಿರಕ್ಕೆ ಬಂದು ನೋಡಿದರೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಾಂತಾಗುತ್ತದೆ. ಮೈನಾ ಚಿತ್ರವನ್ನೂ ನೋಡಿ ನಮ್ಮನ್ನು ಪ್ರೋತ್ಸಾಹಿಸಿ.

ಮೈನಾ ಚಿತ್ರದ ಗ್ಯಾಲರಿ

Read more about: ಸಂದರ್ಶನ, ನಾಗಶೇಖರ್, ಮೈನಾ, ಚೇತನ್, ನಿತ್ಯಾ ಮೆನನ್, interview, nagashekar, mynaa, chetan, nithya menon

English summary
Director Nagashekhar exclusive interview to Oneindia. His latest film Mynaa all set to release on this Friday i.e. 22.02.2013.
Please Wait while comments are loading...

Kannada Photos

Go to : More Photos