»   » ಯಶ್ ಕೆ.ಜಿ.ಎಫ್ ಚಿತ್ರದ ಮುಹೂರ್ತ ಯಾವಾಗ ಗೊತ್ತಾ?

ಯಶ್ ಕೆ.ಜಿ.ಎಫ್ ಚಿತ್ರದ ಮುಹೂರ್ತ ಯಾವಾಗ ಗೊತ್ತಾ?

Posted by:
Subscribe to Filmibeat Kannada

ಯಶಸ್ಸಿನ ಬೆನ್ನತ್ತಿ ಹೋಗುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್' ಸಿನಿಮಾ ಭರ್ಜರಿ ಹಿಟ್ ಆದ ನಂತರ ನಿರ್ಮಾಪಕ ಕೆ.ಮಂಜು ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರ ಜೊತೆ ಮಿಂಚುತ್ತಿದ್ದಾರೆ.

ಕೆ.ಮಂಜು ಅವರ ನಿರ್ಮಾಣದ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವಾಗಲೇ ಯಶ್ ಅವರ ಮತ್ತೊಂದು ಹೊಸ ಚಿತ್ರ 'ಕೆ.ಜಿ.ಎಫ್' ಸೆಟ್ಟೇರುತ್ತಿದೆ.[ಯಶ್ ಹೆಸರಲ್ಲಿ ಬಿಟ್ಟಿ ಪಬ್ಲಿಸಿಟಿ ಪಡೆಯುತ್ತಿರುವವರು ಯಾರು?]ಶ್ರೀಮುರಳಿ ಅವರ 'ಉಗ್ರಂ' ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಆಕ್ಷನ್-ಕಟ್ ನಲ್ಲಿ ಯಶ್ ಅವರ 'ಕೆ.ಜಿ.ಎಫ್' ಸಿನಿಮಾ ಮೂಡಿಬರಲಿದ್ದು, ಎಪ್ರಿಲ್ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರಲಿದೆ. ಮೇ ತಿಂಗಳಿನಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.


'ಕೆ.ಜಿ.ಎಫ್' ಸಿನಿಮಾ 70ರ ದಶಕದ ಕಥೆಯನ್ನು ಹೊಂದಿದ್ದು, ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ರೆಟ್ರೋ ಸ್ಟೈಲ್ ನಲ್ಲಿ ಸಖತ್ ಅಗಿ ಮಿಂಚಿದ್ದಾರೆ.['ಕೆ.ಜಿ.ಎಫ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್]'ಕೆ.ಜಿ.ಎಫ್'...ಟೈಟಲ್ ಹೇಳಿದ ತಕ್ಷಣ ನಿಮಗೆ ನೆನಪಾಗುವುದು ಚಿನ್ನದ ಗಣಿ. ಅದರಂತೆ ಕೆ.ಜಿ.ಎಫ್ ನ ಗತಕಾಲದ ವೈಭವ ಈ ಚಿತ್ರದಲ್ಲಿ ಮರುಕಳಿಸಲಿದೆಯಂತೆ. ಅಂದ್ಹಾಗೆ, ಕೆ.ಜಿ.ಎಫ್ ಸಿನಿಮಾ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಯಶ್ ಪಾತ್ರ ಪ್ರಖ್ಯಾತ ವ್ಯಕ್ತಿಯೊಬ್ಬರನ್ನ ಪ್ರತಿನಿಧಿಸಲಿದೆ.

English summary
The most expensive Kannada movie of Sandalwood, 'KGF' starring Kannada Actor Yash is one of the much anticipated films. To be directed by Prashanth Neel, the movie is about an ambitious man who is in his 70’s. The filmmaker has revealed that the film will be launched in April.
Please Wait while comments are loading...

Kannada Photos

Go to : More Photos