»   » ಪೊಲೀಸ್ ಬಂಧನದಲ್ಲಿ ರಾಮ್ ಗೋಪಾಲ್ ವರ್ಮಾ?

ಪೊಲೀಸ್ ಬಂಧನದಲ್ಲಿ ರಾಮ್ ಗೋಪಾಲ್ ವರ್ಮಾ?

Written by: ಅನಂತರಾಮು, ಹೈದರಾಬಾದ್
Subscribe to Filmibeat Kannada

ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದರೇ? ಸ್ವತಃ ವರ್ಮಾ ಸಾಹೇಬರೇ ಹೇಳುವಂತೆ, "ನಾನು ಅರೆಸ್ಟ್ ಆಗಿದ್ದೇನೆ" ಎಂದು ಟ್ವೀಟಿಸಿ ಈ ಫೋಟೋ ಪ್ರಕಟಿಸಿದ್ದಾರೆ.


ಇದರ ಜೊತೆಗೆ ಇನ್ನೊಂದು ಫೋಟೋ ಸಹ ಪ್ರಕಟಿಸಿ, ನಾನೇ ಪೊಲೀಸ್ ಎಂದೂ ಟ್ವೀಟಿಸಿಕೊಂಡಿದ್ದಾರೆ. ಈ ರೀತಿಯ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುವುದರಲ್ಲಿ ರಾಮ್ ಗೋಪಾಲ್ ವರ್ಮಾ ಅವರದು ಎತ್ತಿದ ಕೈ. ಆದರೆ ಅವರು ನಿಜವಾಗಿಯೂ ಬಂಧನಕ್ಕೊಳಗಾಗಿಲ್ಲ. ಅವರ ಹೊಸ 'ಅಟ್ಯಾಕ್' ಚಿತ್ರದ ಶೂಟಿಂಗ್ ಫೋಟೋ ಇದು ಎನ್ನಲಾಗಿದೆ. [ಆರ್ ಜಿವಿ ಚಿತ್ರದ ಶೃಂಗಾರ 'ಶ್ರೀದೇವಿ' ಅನಾವರಣ]

Director Ram Gopal Varma Arrested

ಈ ರೀತಿಯ ಏನೋ ಒಂದು ಕಿತಾಪತಿ ಮಾಡುವುದು ರಾಮ್ ಗೋಪಾಲ್ ವರ್ಮಾ ಅವರಿಗೆ ಹೊಸದಲ್ಲ ಬಿಡಿ. ವಿವಾದಾತ್ಮಕ ಹೇಳಿಕೆಗಳು, ಟ್ವೀಟ್ ಗಳನ್ನು ಮಾಡಿ ಸದಾ ಚಾಲ್ತಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಅವರ ಚಿತ್ರಗಳು ಅಷ್ಟೇ ವಿವಾದಾತ್ಮಕ ಎಂಬುದು ಇನ್ನೊಂದು ವಿಚಾರ.

ಪ್ರತಿಯೊಂದು ಚಿತ್ರವನ್ನು ಆದಷ್ಟು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುವ ಚಾಕಚಕ್ಯತೆ ವರ್ಮಾ ಅವರಿಗಿದೆ. ಈ 'ಅಟ್ಯಾಕ್' ಚಿತ್ರವನ್ನು ಅವರು ಅತ್ಯಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸುವ ಆಲೋಚನೆಯಲ್ಲಿದ್ದಾರೆ ವರ್ಮಾ.

ಜಗತಿಬಾಬು, ಪ್ರಕಾಶ್ ರೈ, ವಡ್ಡೇ ನವೀನ್ ಅವರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಈ ಬಾರಿ ನಾಯಕಿಯಾಗಿ ಸುರಭಿ ಅವರನ್ನು ಆಯ್ಕೆ ಮಾಡಿದ್ದಾರೆ ವರ್ಮಾ. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಹೈದರಾಬಾದಿನಲ್ಲಿ ನಡೆಯುತ್ತಿದೆ. ಅಂದಹಾಗೆ ಇದು ಟಾಲಿವುಡ್ ಚಿತ್ರ ಎಂಬುದು ವಿಶೇಷ.

English summary
Please Wait while comments are loading...

Kannada Photos

Go to : More Photos